ಗ್ರಾಮೀಣ ಪ್ರದೇಶಕ್ಕೆ ತೆರಳಿ ಆರೋಗ್ಯ ಜಾಗೃತಿ ಮೂಡಿಸಿದ ಡಿಸಿ
ಮೈಸೂರು

ಗ್ರಾಮೀಣ ಪ್ರದೇಶಕ್ಕೆ ತೆರಳಿ ಆರೋಗ್ಯ ಜಾಗೃತಿ ಮೂಡಿಸಿದ ಡಿಸಿ

April 20, 2020

ಚಾಮರಾಜನಗರ,ಏ.19-ಜಿಲ್ಲೆಯಲ್ಲಿ ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾ ಗಿದ್ದು, ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಭಾನು ವಾರ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಆರೋಗ್ಯ ಜಾಗೃತಿ ಮೂಡಿಸಿದರು.

ತಾಲೂಕಿನ ಹರವೆ ಹಾಗೂ ನಂಜದೇವನಪುರ ದಲ್ಲಿ ನಡೆಸಲಾಗುತ್ತಿರುವ ಆರೋಗ್ಯ ಸಮೀಕ್ಷೆ ಕಾರ್ಯ ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಖುದ್ದು ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸಿದರು. ಪ್ರಸ್ತುತ ನಿಮಗೆ ಶೀತ, ಜ್ವರ, ಕೆಮ್ಮು ಇನ್ನಿತರ ಅನಾರೋಗ್ಯದಿಂದ ಬಳಲುತ್ತಿರುವಿರಾ? ಮತ್ತೆ ಏನಾದರೂ ಆರೋಗ್ಯದಲ್ಲಿ ಏರುಪೇರಾಗಿ ದೆಯೇ? ಎಂದು ಪ್ರಶ್ನಿಸಿದರು.

ಪ್ರತಿ ಮನೆಗೂ ಭೇಟಿ ನೀಡಿದ ಸಮಯದಲ್ಲಿ ಗ್ರಾಮೀಣ ರಿಗೆ ಆರೋಗ್ಯ ಪಾಲನೆ ಕುರಿತು ಸಲಹೆ ಮಾಡಿದ ಡಿಸಿ ಎಂ.ಆರ್.ರವಿ, ಸಾಮಾಜಿಕ ಅಂತರ ಕಾಪಾಡಿ ಕೊಳ್ಳಬೇಕು. ಕೃಷಿ ಇತರೆ ದಿನನಿತ್ಯದ ಉದ್ಯೋಗ ಚಟುವಟಿಕೆಗಳನ್ನು ಮುಂದುವರೆಸುವಾಗ ಅಂತರಕ್ಕೆ ಆದ್ಯತೆ ಕೊಡಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸೋಪು, ಇತರೆ ವಿಧಾನಗಳ ಮೂಲಕ ಕೈ ತೊಳೆದುಕೊಳ್ಳಬೇಕು. ಒಟ್ಟಾರೆ ವೈಯಕ್ತಿಕ ಶುಚಿತ್ವಕ್ಕೆ ಗಮನ ನೀಡಬೇಕೆಂದು ಸಲಹೆ ನೀಡಿದರು.

ಗ್ರಾಮಕ್ಕೆ ಯಾರೇ ಅಪರಿಚಿತರಾಗಲಿ ಅಥವಾ ಸಂಬಂಧಿಗಳಾಗಲಿ ದೂರದ ಜಿಲ್ಲೆ, ರಾಜ್ಯದಿಂದ ಬಂದಾಗ ಮಾಹಿತಿ ನೀಡಿ. ಆರೋಗ್ಯ ತಪಾಸಿಸಿಕೊಳ್ಳಲು ತಿಳಿ ವಳಿಕೆ ನೀಡಿ. ಊರಿನ ಸುರಕ್ಷತೆ ಹಾಗೂ ಆರೋಗ್ಯ ಕಾಳಜಿ ಪ್ರತಿಯೊಬ್ಬರಲ್ಲೂ ಇರಲಿ. ಯಾವುದೇ ಸಮಸ್ಯೆ ಗಳು ಕಾಣಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿ. ನಿಮ್ಮ ಯಾವುದೇ ಗೊಂದಲ, ತೊಂದರೆಗಳು ಇದ್ದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ. ತಾಲೂಕು ಆರೋಗ್ಯಾಧಿಕಾರಿಗಳು ಅಥವಾ ಉಚಿತ ಸಹಾಯ ವಾಣಿ 1077ಗೆ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಿ ಎಂದರು. ಗುಂಪು ಗುಂಪಾಗಿ ಗ್ರಾಮದಲ್ಲಿ ಒಂದು ಕಡೆ ಸೇರಬಾರದು. ಚಾಮರಾಜನಗರ ಜಿಲ್ಲೆಯಲ್ಲಿ ಯಾವುದೇ ತೊಂದರೆ ಇಲ್ಲ. ಎಲ್ಲಾ ಕ್ಷೇಮವಾಗಿದ್ದೇವೆ. ಜಿಲ್ಲೆಯ ಜನತೆಯ ಸಹಕಾರ ಕೊಟ್ಟಿರುವುದರಿಂದ ಆರೋ ಗ್ಯದ ವಿಚಾರದಲ್ಲಿ ಇದುವರೆಗೆ ನೆಮ್ಮದಿಯಿಂದÀ ಇದ್ದೇವೆ. ಇದೇ ರೀತಿಯ ಜಾಗೃತಿ ಮುಂದುವರೆಯ ಬೇಕು. ಜಿಲ್ಲೆಯ ಆರೋಗ್ಯ ಕಾಪಾಡುವಿಕೆಗೆ ಪ್ರತಿ ಯೊಬ್ಬರು ದೃಢಸಂಕಲ್ಪ ಮಾಡಬೇಕೆಂದು ಹೇಳಿದರು.

ಜನರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗ ಬಾರದು. ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಪಾಲಿಸಬೇಕು. ಈಗಾಗಲೇ ಎರಡು ಲಕ್ಷದ ಹತ್ತು ಸಾವಿರ ಕುಟುಂಬಗಳ ಆರೋಗ್ಯ ಸಮೀಕ್ಷೆಯನ್ನು ಮಾಡಲಾ ಗಿದೆ. ಇನ್ನೂ ಕೆಲ ಭಾಗಗಳಲ್ಲಿ ಮುಂದುವರೆದಿದೆ. ಜಿಲ್ಲೆಯ ಜನರ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ಆಹಾರ ಪದಾರ್ಥಗಳ ಪೂರೈಕೆ ಸೇರಿ ದಂತೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಇದೇ ವೇಳೆ ಜಿಲ್ಲಾಧಿಕಾರಿಯವರು ಭೇಟಿ ನೀಡಿದ ಗ್ರಾಮಗಳಲ್ಲಿ ಆರೋಗ್ಯ ಸಮೀಕ್ಷೆ ನಡೆಯುತ್ತಿರುವ ಬಗ್ಗೆ ವೀಕ್ಷಿಸಿದರು. ಹತ್ತು ವರ್ಷದೊಳಗಿನ ಹಾಗೂ ಅರವತ್ತು ವರ್ಷ ಮೇಲ್ಪಟ್ಟವರ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಶೀತ, ಗಂಟಲು ನೋವು, ಕೆಮ್ಮು, ಜ್ವರ ಲಕ್ಷಣ ಇರುವ ಕುರಿತ ನಿಖರ ಮಾಹಿತಿಯನ್ನು ಪಡೆಯಬೇಕು. ಸಂಬಂಧಪಟ್ಟ ಹಿರಿಯ ಅಧಿಕಾರಿ ಗಳಿಗೆ ವರದಿ ನೀಡಬೇಕು. ಜಿಲ್ಲೆಯಲ್ಲಿ ಆರೋಗ್ಯ ಸಮೀಕ್ಷೆ ಯಶಸ್ವಿಯಾಗಿ ಪೂರ್ಣಗೊಳಿಸಿ ಎಂದರು.
ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ನಾಗರಾಜು, ತಹಶೀಲ್ದಾರ್ ಜೆ.ಮಹೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ.ಬಸವ ರಾಜು, ಇತರರು ಈ ಸಂದರ್ಭ ಹಾಜರಿದ್ದರು

Translate »