ಸಂಸದ ಪ್ರತಾಪ್‍ಸಿಂಹ `ಅಮೃತ್’ ಫಲ: ಮೈಸೂರು ಜನತೆಗೆ ಹೆಚ್ಚುವರಿ ಜಲ
ಮೈಸೂರು

ಸಂಸದ ಪ್ರತಾಪ್‍ಸಿಂಹ `ಅಮೃತ್’ ಫಲ: ಮೈಸೂರು ಜನತೆಗೆ ಹೆಚ್ಚುವರಿ ಜಲ

July 17, 2021

ಮೈಸೂರು, ಜು. 16- ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ವಿಶೇಷ ಕಾಳಜಿ, ಪ್ರಯತ್ನ ಫಲಿಸಿದೆ. ಅರ್ಥಾತ್ ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಶುಕ್ರವಾರ ಬೃಹತ್ ನೀರಿನ ಟ್ಯಾಂಕ್ ಲೋಕಾರ್ಪಣೆಗೊಳ್ಳುವುದ ರೊಂದಿಗೆ ಮೈಸೂರು ನಗರದ ಲಕ್ಷಾಂತರ ಜನರಲ್ಲಿದ್ದ ನೀರಿನ ಆತಂಕ ನೀಗಿದೆ.

ವಿಜಯನಗರ ಎರಡನೇ ಹಂತದ ನೀರಿನ ಟ್ಯಾಂಕ್ 2015ರವರೆಗೆ ಒಂದು ರೀತಿ ಬಯಲು ಕೊಳವಿದ್ದಂತಿತ್ತು. ಶಿಥಿಲಾ ವಸ್ಥೆಯಲ್ಲಿದ್ದ ಮೇಲ್ಛಾವಣಿ ಕೆಲವೆಡೆ ಕುಸಿದಿತ್ತು. ಕಸ ಕಡ್ಡಿ ಬಿದ್ದು ಕೊಳೆಯುವಂತಿತ್ತು. ಹಕ್ಕಿಗಳು ಹಾಗೂ ಇತರ ಪ್ರಾಣಿ-ಪಕ್ಷಿಗಳು ಬಿದ್ದು, ಕೊಳೆತು, ನೀರು ಮಲೀನಗೊಳ್ಳುವ ಪರಿಸ್ಥಿತಿ ಇತ್ತು. ಇದಕ್ಕೆ ಆಗಾಗ ಲಕ್ಷಾಂತರ ರೂ. ಖರ್ಚು ಮಾಡಿ ತೇಪೆ ಹಚ್ಚುತ್ತಾ ಬರಲಾಗಿತ್ತು. ಈ ಮಧ್ಯೆ ಮೈಸೂರಿಗೆ ಹೆಚ್ಚುವರಿ ನೀರಿನ ಅಗತ್ಯವಿದ್ದರೂ ಸೂಕ್ತ ಕ್ರಮ ಕೈಗೊಳ್ಳುವ ಪ್ರಯತ್ನವೇ ಆಗಿರಲಿಲ್ಲ.

ಇದನ್ನು ಮನಗಂಡ ಪ್ರತಾಪ್‍ಸಿಂಹ ಕೇಂದ್ರ ಸರ್ಕಾರದ ಅಮೃತ್ ಯೋಜನೆ ಯಡಿ ವಿಜಯನಗರ 2ನೇ ಹಂತದಲ್ಲಿ ಬೃಹತ್ ಸುಸಜ್ಜಿತ, ಸುಭದ್ರ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ನಿರ್ಧರಿಸಿದ್ದಲ್ಲದೆ ನಗರಕ್ಕೆ ಹೆಚ್ಚುವರಿ ನೀರು ತರುವ ನಿರ್ಧಾರಕ್ಕೂ ಬಂದರು. ಈ ನಿಟ್ಟಿನಲ್ಲಿ ಹೊಂಗಳ್ಳಿ ನೀರು ಸರಬರಾಜು ಕಾಮಗಾರಿ ಗಾಗಿ ಅನುಮೋದನೆಯನ್ನು ಪಡೆದರು. ಒಟ್ಟು 156 ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಶೇ.50 ರಷ್ಟು ಅಂದರೆ 78 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾದರು. ಇನ್ನುಳಿದಂತೆ ರಾಜ್ಯ ಸರ್ಕಾರದ ಶೇ.20ರಷ್ಟು(31.20 ಕೋಟಿ) ಮತ್ತು ಮೈಸೂರು ನಗರ ಪಾಲಿಕೆಯ ಶೇ.30ರಷ್ಟು (46.80 ಕೋಟಿ) ಅನುದಾನದಲ್ಲಿ ಈ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ.

ಕಾಮಗಾರಿ ಪೂರ್ಣಗೊಳ್ಳಲು ಸತತ 6 ವರ್ಷ ಕಾಲ ಹಿಡಿಯಿತು. ಪ್ರತಿ ಹಂತ ದಲ್ಲೂ ಪ್ರತಾಪ್‍ಸಿಂಹ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಸಲಹೆ-ಸೂಚನೆ ನೀಡಿದ್ದರು. ಈ ಕಾಮಗಾರಿ 2017ರಲ್ಲಿ ಪ್ರಾರಂಭವಾಯಿತು. ಈ ಮಧ್ಯೆ ಹೊಂಗಳ್ಳಿ ಯಂತ್ರಗಾರದಿಂದ ವಿಜಯನಗರ ಟ್ಯಾಂಕ್‍ಗೆ ನೀರು ಪೂರೈಸಲು ಕೊಳವೆ ಮಾರ್ಗ ನಿರ್ಮಿಸುವ ವೇಳೆ ಬೆಳಗೊಳ ಗ್ರಾಮಸ್ಥರು ಅದಕ್ಕೆ ತಡೆಯೊಡ್ಡಿದ್ದರು. 2020ರ ಸೆಪ್ಟೆಂಬರ್ 3ರಂದು ಗ್ರಾಮಕ್ಕೆ ಭೇಟಿ ನೀಡಿದ ಸಂಸ ದರು, ಈ ಯೋಜನೆಯಡಿ ಬೆಳಗೊಳ ಗ್ರಾಮಕ್ಕೂ ನೀರು ಪೂರೈಸುವ ಭರವಸೆ ನೀಡುವ ಮೂಲಕ ಗ್ರಾಮಸ್ಥರ ಮನವೊಲಿಸಿದ ಫÀಲವಾಗಿ 2020ರ ಸೆಪ್ಟೆಂಬರ್ 6ರಂದು ಮತ್ತೆ ಕಾಮಗಾರಿ ಆರಂಭವಾಯಿತು. 90 ದಶಲಕ್ಷ ಲೀಟರ್ ಸಾಮಥ್ರ್ಯದ ಈ ಯೋಜನೆ ಯನ್ನು 125 ದಶಲಕ್ಷ ಲೀಟರ್ ನೀರು ಸರಬರಾಜು ಮಾಡುವ ಸಾಮಥ್ರ್ಯಕ್ಕೆ ಹೆಚ್ಚಿಸಿ ಕಾಮಗಾರಿ ನಡೆಸಲಾಯಿತು.

ಈ ಯೋಜನೆಯಡಿ ವಿಜಯನಗರ 2ನೇ ಹಂತದಲ್ಲಿ ಹಳೆಯ 18 ಎಂ.ಎಲ್ ಮತ್ತು 27 ಎಂ.ಎಲ್ ಸಾಮಥ್ರ್ಯದ ಜಲಸಂಗ್ರಹಗಾರಗಳ ದುರಸ್ಥಿ ಕಾಮಗಾರಿ ಹಾಗೂ ಹೊಸದಾಗಿ 13 ಎಂ.ಎಲ್. ಸಾಮಥ್ರ್ಯದ ಜಲಸಂಗ್ರಹಗಾರ ನಿರ್ಮಾಣ ಕಾಮಗಾರಿ ನಡೆಸಲಾಗಿದೆ. ಹೊಂಗಳ್ಳಿ 3ನೇ ಹಂತದ ಯೋಜನೆಯನ್ನು 1979ರಲ್ಲಿ ಪೂರ್ಣಗೊಳಿಸಲಾಗಿತ್ತು. ಅಲ್ಲಿನ ಜಲ ಶುದ್ಧೀಕರಣ ಘಟಕದ ಕಟ್ಟಡ, ಕ್ಲಾರಿಪ್ಲಾಕ್ಯೂ ರೇಟರ್, ಕಚ್ಚಾ ನೀರು ಒಳಬರುವ ಚಾನಲ್, ಪ್ಲಾಶ್ ಮಿಕ್ಸರ್, ಆಲಮ್ ದ್ರಾವಣ ಸಂಗ್ರಹ ತೊಟ್ಟಿಗಳು ಮತ್ತು ಫಿಲ್ಟರ್‍ಗಳು ಹಾಗೂ ವಿದ್ಯುತ್ ಉಪಕರಣಗಳು ಶಿಥಿಲಗೊಂಡು ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಹೀಗಾಗಿ ಪ್ರತಾಪ್‍ಸಿಂಹ ಅವರ ವಿಶೇಷ ಪ್ರಯತ್ನದಿಂದಾಗಿ ಈ ಜಲಶುದ್ಧೀಕರಣ ಘಟಕವನ್ನು ಈಗ ಪುನಶ್ಚೇತನಗೊಳಿ ಸಲಾಗಿದೆ. ಇಲ್ಲಿ ಹೊಸ ಮಾದರಿಯ ಜಾನ್ಸನ್ `ವಿ’ ವಯರ್ ಫಿಲ್ಟರ್‍ಗಳನ್ನು ಉಪಯೋಗಿಸಿ 40 ದಶಲಕ್ಷ ಲೀಟರ್ ನಿಂದ 65 ದಶಲಕ್ಷ ಲೀಟರ್ ಸಾಮಥ್ರ್ಯಕ್ಕೆ ಹೆಚ್ಚಿಸಲಾಗಿದೆ. ಹೊಸದಾಗಿ ಪಂಪ್ ಹೌಸ್, 1500 ಅಶ್ವಶಕ್ತಿಯ 2 ಪಂಪ್ ಗಳನ್ನು ಅಳವಡಿಸಿ, ವಿಜಯನಗರ ಟ್ಯಾಂಕ್‍ವರೆಗೆ 12.6 ಕಿ.ಮೀ ಉದ್ದದ 1168 ಮಿ.ಮೀ ವ್ಯಾಸದ ಎಂ.ಎಸ್. ಕೊಳವೆ ಮಾರ್ಗ ವನ್ನು ಅಳವಡಿಸಲಾಗಿದೆ. ಇದರಿಂದಾಗಿ ಮೈಸೂರು ನಗರಕ್ಕೆ 19 ಎಂ.ಎಲ್‍ಡಿ ಹೆಚ್ಚುವರಿ ನೀರು ಲಭ್ಯವಾಗಿದೆ.

ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿ ಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾರಣ ವಿಜಯನಗರ ವಾಟರ್ ಟ್ಯಾಂಕ್ ನಿರ್ಮಾಣದ ರುವಾರಿಯಾಗಿರುವ ಪ್ರತಾಪ್ ಸಿಂಹ ಇಂದು ಟ್ಯಾಂಕ್ ಉದ್ಘಾಟನಾ ಸಮಾ ರಂಭಕ್ಕೆ ಅನಿವಾರ್ಯವಾಗಿ ಗೈರು ಹಾಜರಾಗಿದ್ದರು.

Translate »