ಡಿ.18ರಂದು ಎಂಎಸ್‍ಎಂಇ ಸರಬರಾಜು  ಬಾಕಿ ವಸೂಲಿ ಅರಿವು ಕಾರ್ಯಕ್ರಮ
ಮೈಸೂರು

ಡಿ.18ರಂದು ಎಂಎಸ್‍ಎಂಇ ಸರಬರಾಜು ಬಾಕಿ ವಸೂಲಿ ಅರಿವು ಕಾರ್ಯಕ್ರಮ

December 15, 2018

ಮೈಸೂರು: ಮೈಸೂರಿನ ವಿದ್ಯಾವಿಕಾಸ್ ಇಂಜಿನಿಯರಿಂಗ್ ಕಾಲೇಜಿನ ಲಲಿತ ಸ್ಮಾರಕ ಭವನದಲ್ಲಿ ಡಿ.18 ರಂದು ಬೆಳಿಗ್ಗೆ 10.30ಕ್ಕೆ ಮೈಸೂರು ಕೈಗಾ ರಿಕೆಗಳ ಸಂಘದ ವತಿಯಿಂದ `ಸಣ್ಣ ಉದ್ಯಮಗಳ ಸರಬರಾಜಿನ ಬಾಕಿ ಪಾವತಿ ವಸೂಲಿ ಕಾಯಿದೆ ಹಾಗೂ ಸೂಕ್ಷ್ಮ ಸಣ್ಣ ಉದ್ಯಮ ಗಳ ಸೌಲಭ್ಯ ಪರಿಷತ್ತಿನ ಸಾಮಥ್ರ್ಯ ಅರಿವು’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ, ಮಾಜಿ ಶಾಸಕ ವಾಸು ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಭಾರತ ಸರ್ಕಾರದ ಎಂಎಸ್ ಎಂಇ ಅಭಿವೃದ್ಧಿ ಸಂಸ್ಥೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಿರ್ದೇಶನಾ ಲಯ, ವಿದ್ಯಾವಿಕಾಸ್ ಶಿಕ್ಷಣ ಸಂಸ್ಥೆ, ಜಿ¯್ಲÁ ಕೈಗಾರಿಕಾ ಕೇಂದ್ರ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ ಸಂಯುಕ್ತಾ ಶ್ರಯದಲ್ಲಿ ಈ ಜಾಗೃತಿ ಕಾರ್ಯಕ್ರಮ ನಡೆಸ ಲಾಗುತ್ತಿದೆ. ಡಿ.18ರಂದು ಬೆಳಿಗ್ಗೆ 10.30ಕ್ಕೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಗಳ ನಿರ್ದೇಶನಾಲಯದ ಆಯುಕ್ತ ಗುಂಜನ್ ಕೃಷ್ಣ ಉದ್ಘಾಟಿಸಲಿದ್ದಾರೆ. ಕಾಸಿಯಾ ಉಪಾಧ್ಯಕ್ಷ ರಾಜು, ಎಂಎಸ್‍ಎಂಇ ಅಪರ ನಿರ್ದೇ ಶಕ ಹೆಚ್.ಎಂ.ಶ್ರೀನಿವಾಸ್, ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಎಂಎಸ್‍ಎಂಎಇ ಮಂತ್ರಾ ಲಯದ ಉಪ ನಿರ್ದೇಶಕ ಪಿಯೂಷ್ ಅಗರ ವಾಲ್, ಎಂಎಸ್ ಎಂಇ ಕೌನ್ಸಿಲ ಅಧ್ಯಕ್ಷ ರವಿಕೋಟಿ ಭಾಗವಹಿಸಲಿದ್ದಾರೆ ಎಂದರು.

ಸೂಕ್ಷ್ಮಮತ್ತು ಸಣ್ಣ ಉದ್ಯಮಗಳ ಸರಬರಾಜಿನ ಬಾಕಿ ಪಾವತಿ ವಸೂಲಿ ಕಾಯಿದೆಯು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ಗಳು, ಉದ್ಯಮಗಳಿಗೆ, ಭಾರೀ ಮತ್ತು ದೊಡ್ಡ ಕೈಗಾರಿಕೆಗಳು, ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳಿಗೆ ಸರಬರಾಜು ಮಾಡುವ ಕೈಗಾರಿಕಾ ಉತ್ಪನ್ನಗಳ ಪಾವತಿಯ ವಿಳಂಬ ವನ್ನು ತಪ್ಪಿಸಲಿದೆ. ಕೆಲವು ಸಂದರ್ಭಗಳಲ್ಲಿ 6 ತಿಂಗಳಿಂದ ಹಲವು ವರ್ಷಗಳವರೆಗೆ ಖರೀದಿ ಸಂಸ್ಥೆಗಳು ಬಾಕಿ ಪಾವತಿಸದೆ ಸಣ್ಣ ಕೈಗಾರಿಕೆಗಳು ದುಡಿಮೆ ಬಂಡವಾಳದ ಕೊರತೆಯಿಂದಾಗಿ ರೋಗಗ್ರಸ್ಥವಾಗಿ ಉದ್ಯಮ ಗಳು ಮುಚ್ಚಲ್ಪಡುತ್ತವೆ. ಇದರಿಂದ ಅರಿವು ಮಹತ್ವ ಪಡೆದಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸ ಕ್ತರು 100 ರೂ. ಪ್ರವೇಶ ಶುಲ್ಕದೊಂದಿಗೆ ಡಿ.16ರೊಳಗೆ www.msme mysuru. com ಮೂಲಕ ನೋಂದಾಯಿಸಿಕೊಳ್ಳ ಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 8217647961, 9986444654 ಸಂಪ ರ್ಕಿಸಲು ಕೋರಿದರು. ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಸ್ಥಳದಲ್ಲಿ ನೋಂದಣಿ ಪ್ರಕ್ರಿಯೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನೆರವಾಗಲಿದೆ ಈ ಕಾಯಿದೆ: ಭಾರತ ಸರ್ಕಾ ರದ ಎಂಎಸ್‍ಎಂಇಡಿ ವಿಳಂಬ ಪಾವತಿ ಕಾಯಿದೆ 2006 ರಂತೆ ಭಾರೀ, ಮಧ್ಯಮ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಭಾರತದ ಎಲ್ಲ ಸೂಕ್ಷ್ಮ ಮತ್ತು ಸಣ್ಣ ಕೈಗಾ ರಿಕೆಗಳಿಗೆ ತಮ್ಮ ಖರೀದಿಯ ಪಾವತಿ ಯನ್ನು ಖರೀದಿಸಿದ 45 ದಿನದೊಳಗೆ ಸರಬ ರಾಜುದಾರ ಕೈಗಾರಿಕೆಗೆ ಪಾವತಿಸಬೇಕು. 45 ದಿನಗಳ ನಂತರ ವಿಳಂಬಿತ ಅವಧಿಗೆ ಪಿಎಲ್‍ಆರ್ ದರದ ಮೂರರಷ್ಟು ಬಡ್ಡಿ ಸಹಿತ ಬಾಕಿ ಮೊತ್ತವನ್ನು ಸರಬರಾಜು ದಾರರಿಗೆ ಪಾವತಿಸಬೇಕು. ಖರೀದಿದಾರರು ತಮ್ಮ ಬ್ಯಾಲೆನ್ಸ್ ಶೀಟ್‍ನಲ್ಲಿ ಸರಬರಾಜು ದಾರನಿಗೆ ಪಾವತಿಸಬೇಕಾದ ಬಾಕೀ ಪಾವತಿ ಹಾಗೂ ಬಡ್ಡಿ ಸಹಿತ ಬಾಕಿ ಮೊತ್ತ ವನ್ನು ಬಾಕಿದಾರರ ಪಟ್ಟಿಯಲ್ಲಿ ಉಲ್ಲೇಖಿಸಬೇಕು. ಖರೀದಿದಾರರಿಂದ ಬರಬೇಕಾದ ಬಾಕಿ ವಸೂಲಿಗಾಗಿ ಸರಬರಾಜುದಾರರು ರಾಜ್ಯ ಸರ್ಕಾರದ ಎಂಎಸ್‍ಇಎಫ್‍ಸಿಗೆ ದೂರು ನೀಡಬಹುದು ಎಂದರು. ಸುದ್ದಿಗೋಷ್ಠಿ ಯಲ್ಲಿ ಎಂಎಸ್‍ಎಂಇ ಕೌನ್ಸಿಲ್ ಅಧ್ಯಕ್ಷ ರವಿ ಕೋಟಿ, ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಪದಾಧಿಕಾರಿಗಳಾದ ಸತೀಶ್, ರಾಜು ಇತರರು ಉಪಸ್ಥಿತರಿದ್ದರು.

Translate »