ಪಾಲಿಕೆಗೆ 12 ಕೋಟಿ ನೀಡಲು ಮುಡಾ ಸಮ್ಮತಿ
ಮೈಸೂರು

ಪಾಲಿಕೆಗೆ 12 ಕೋಟಿ ನೀಡಲು ಮುಡಾ ಸಮ್ಮತಿ

March 21, 2022

ಮೈಸೂರು, ಮಾ.೨೦(ಆರ್‌ಕೆ)- ಹಲವು ತಿಂಗಳುಗಳಿAದ ಕತ್ತಲೆಯಿಂದ ಕೂಡಿರುವ ಮೈಸೂರಿನ ರಿಂಗ್ ರಸ್ತೆಗೆ ಕೊನೆಗೂ ಬೀದಿ ದೀಪದ ಸಮಸ್ಯೆಗೆ ಮುಕ್ತಿ ದೊರೆಯಲಿದೆ.
ಇಲಿ, ಹೆಗ್ಗಣಗಳು ಕೇಬಲ್ ತಿಂದಿರುವುದರಿAದ ಹೊರವರ್ತುಲ ರಸ್ತೆಯ ಬೀದಿದೀಪಗಳು ಕಾರ್ಯ ನಿರ್ವಹಿಸದಿದ್ದರಿಂದ ರಾತ್ರಿಯಾಗುತ್ತಿದ್ದಂತೆಯೇ ೪೨ ಕಿಮೀ ಉದ್ದದ ರಸ್ತೆ ಸಂಪೂರ್ಣ ಕಗ್ಗತ್ತಲೆ ಯಿಂದ ಕೂಡಿರುತ್ತಿತ್ತು. ಇದರಿಂದ ಅಪಘಾತಗಳು ಸಂಭವಿಸಿ ಸಾವು-ನೋವುಗಳಾಗುವುದಲ್ಲದೇ, ಮದ್ಯಪಾನ ಮಾಡುವವರು, ಕ್ರಿಮಿನಲ್‌ಗಳಿಗೆ ರಿಂಗ್‌ರಸ್ತೆ ತಾಣವಾಗಿದೆ. ಏಕಾಂಗಿಯಾಗಿ ಅಥವಾ ಕುಟುಂಬದವರೊAದಿಗೆ ವಾಹನದಲ್ಲಿ ಓಡಾಡಲು ಕಷ್ಟವಾಗುತ್ತಿದೆ ಎಂದು ಸಾರ್ವ ಜನಿಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದರು.

ದಿನದಿಂದ ದಿನಕ್ಕೆ ಸಮಸ್ಯೆ ಉಲ್ಬಣವಾಗುತ್ತಿ ರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನಿರ್ದೇಶನದಂತೆ ಸಂಸದ ಪ್ರತಾಪ್ ಸಿಂಹ, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಅವರು ರಿಂಗ್ ರಸ್ತೆ ಬೀದಿದೀಪ ಸಮಸ್ಯೆಗೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.

ವರ್ಷದ ೩೬೫ ದಿನಗಳ ಪ್ರತಿ ರಾತ್ರಿಯೂ ರಿಂಗ್ ರಸ್ತೆ ದೀಪ ಕಾರ್ಯನಿರ್ವಹಿಸುವಂತೆ ಮಾಡುವ ಸಂಬAಧ ಸಂಸದ ಪ್ರತಾಪ್‌ಸಿಂಹ ಹಾಗೂ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಶನಿ ವಾರ ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ಬೀದಿದೀಪಗಳ ಸಂಪರ್ಕ ಕೇಬಲ್ ಅಳವಡಿಸಿ ೪೨ ಕಿಮೀ ಉದ್ದದ ರಿಂಗ್ ರಸ್ತೆಯಲ್ಲಿರುವ ೪,೫೦೦ ಕಂಬಗಳಿಗೆ ೯೦ ಮತ್ತು ೧೨೦ ವೋಲ್ಟ್ ಎಲ್‌ಇಡಿ ಬಲ್ಬ್ ಗಳನ್ನು ಅಳವಡಿಸಲು ೧೨ ಕೋಟಿ ರೂ. ಹಣ ನೀಡಲು ಸಮ್ಮತಿಸಿದ ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಅವರು ಪ್ರಸಕ್ತ ಸಾಲಿನ ಪ್ರಾಧಿಕಾರದ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲು ಸದಸ್ಯರ ಅನುಮತಿ ಪಡೆಯುವುದಾಗಿಯೂ ತಿಳಿಸಿದರು.
ಮುಡಾ ನೀಡಿದ ಹಣದಲ್ಲಿ ರಿಂಗ್ ರಸ್ತೆಯ ಬೀದಿದೀಪದ ಕಂಬಗಳಿಗೆ ಕೇಬಲ್ ಮತ್ತು ಬಲ್ಬ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವುದರ ಜೊತೆಗೆ ಪ್ರತೀ ತಿಂಗಳು ಬರುವ ಮಾಸಿಕ ವಿದ್ಯುತ್ ಬಿಲ್ ಪಾವತಿಸುವುದಲ್ಲದೇ ಬೀದಿದೀಪಗಳನ್ನು ನಿರ್ವಹಿ ಸುವ ಜವಾಬ್ದಾರಿಯನ್ನೂ ಹೊರುವಂತೆ ಪ್ರತಾಪ್ ಸಿಂಹ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಟ್ಟಾರೆ ರಿಂಗ್ ರಸ್ತೆ ಬೀದಿದೀಪಗಳಿಗೆ ಕೇಬಲ್ ಸಂಪರ್ಕ ಕಲ್ಪಿಸಿ ಎಲ್‌ಇಡಿ ಬಲ್ಬ್ ಅಳವಡಿಸಿ ಅಗತ್ಯವಿರುವ ೧೨ ಕೋಟಿ ರೂ.ಗಳನ್ನು ಮೈಸೂರು ನಗರ ಪಾಲಿಕೆಗೆ ನೀಡಲು ಮುಡಾ ಆಯುಕ್ತ ಡಿ.ಬಿ. ನಟೇಶ್ ಸಮ್ಮತಿಸಿದರೆ, ಪ್ರಾಧಿಕಾರದ ಹಣದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಿ, ವಿದ್ಯುತ್ ಸಂಪರ್ಕ ಕಲ್ಪಿಸುವುದರೊಂದಿಗೆ ಪ್ರತೀ ತಿಂಗಳು ರಿಂಗ್ ರಸ್ತೆ ಸ್ಟಿçÃಟ್ ಲೈಟ್‌ಗಳ ವಿದ್ಯುತ್ ಬಿಲ್ ಪಾವತಿಸಲು ಮೈಸೂರು ಮಹಾನಗರ ಪಾಲಿಕೆ ಕಮಿಷನರ್ ಲಕ್ಷಿö್ಮÃಕಾಂತ ರೆಡ್ಡಿ ಒಪ್ಪಿಗೆ ಸೂಚಿಸಿದರು.

ಇನ್ನೊಂದು ವಾರದೊಳಗಾಗಿ ಟೆಂಡರ್ ಕರೆದು ಪೂರ್ಣಗೊಂಡ ತಕ್ಷಣ ಕಾಮಗಾರಿ ಆರಂಭಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲಾಗುವುದು, ಎರಡೂವರೆ ತಿಂಗಳೊ ಳಗಾಗಿ ರಿಂಗ್ ರಸ್ತೆಯಲ್ಲಿ ದೀಪಗಳು ಬೆಳಗುವಂತೆ ಮಾಡುತ್ತೇವೆ ಎಂದು ನಗರ ಪಾಲಿಕೆ ಸೂಪರಿಂ ಟೆಂಡಿAಗ್ ಇಂಜಿನಿಯರ್ ಮಹೇಶ್ ತಿಳಿಸಿದ್ದಾರೆ.
ಎಲ್‌ಇಡಿ ಬಲ್ಬ್ಗಳನ್ನು ಹಾಕುವುದರಿಂದ ನಮಗೆ ಶೇ.೭೦ರಷ್ಟು ವಿದ್ಯುತ್ ಉಳಿತಾಯವಾಗುವ ಕಾರಣ ಶೇ.೩೦ರಷ್ಟು ಶುಲ್ಕವನ್ನು ಪ್ರತೀ
ತಿಂಗಳು ಪಾವತಿಸಿ ಬೀದಿ ದೀಪಗಳನ್ನು ನಾವೇ ನಿರ್ವಹಣೆ ಮಾಡುತ್ತೇವೆ ಎಂದರು.

ಹಲವು ತಿಂಗಳಿನಿAದ ರಿಂಗ್ ರಸ್ತೆ ಬೀದಿ ದೀಪದ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ, ಕಳೆದ ವರ್ಷ ದಸರಾ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅವರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ರಿಂಗ್ ರಸ್ತೆ ಬೀದಿ ದೀಪಗಳಿಗೆ ಬಲ್ಬ್ ಅಳವಡಿಸಲಾಗಿತ್ತು. ಅವು ಎರಡು ತಿಂಗಳಷ್ಟೇ ಉರಿದವು, ನಂತರ ಕಾರ್ಯ ಸ್ಥಗಿತಗೊಂಡವು. ಮೇಂಟೆನೆನ್ಸ್ ಮತ್ತು ವಿದ್ಯುತ್ ಬಿಲ್ ಪಾವತಿ ಜವಾಬ್ದಾರಿ ಯಾರು ಹೊರಬೇಕೆಂಬುದರ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ರಿಂಗ್ ರಸ್ತೆ ಬೀದಿ ದೀಪಗಳ ವಿದ್ಯುತ್ ಶುಲ್ಕ ಪಾವತಿಸದೇ ಇರುವುದರಿಂದ ಬಾಕಿ ಉಳಿದಿದೆ. ಇದೀಗ ಬಾಕಿ ಬಿಲ್ ಪಾವತಿಸಿ ೧೨ ಕೋಟಿ ರೂ. ಹಣವನ್ನು ನೀಡಲು ಮುಡಾ ಒಪ್ಪಿದೆ. ಈಗಾಗಲೇ ೪೨ ಕಿಮೀ ಉದ್ದದ ಹೊರ ವರ್ತುಲ ರಸ್ತೆ ಬೀದಿ ದೀಪಗಳ ಸ್ಥಿತಿಯನ್ನು ಪರಿಶೀಲಿಸಿ ಸಮೀಕ್ಷೆ ನಡೆಸಿರುವ ಪಾಲಿಕೆ ಅಧಿಕಾರಿಗಳಿಗೆ ಟೆಂಡರ್ ಕರೆಯಲು ಸಿದ್ಧತೆ ನಡೆಸಿದ್ದಾರೆ.

 

Translate »