ಐದು ವರ್ಷಗಳ ಹಿಂದಿನ ಕೊಲೆ ಪ್ರಕರಣ; ಆರು ಮಂದಿ ಆರೋಪಿಗಳು ದೋಷ ಮುಕ್ತ
ಕೊಡಗು

ಐದು ವರ್ಷಗಳ ಹಿಂದಿನ ಕೊಲೆ ಪ್ರಕರಣ; ಆರು ಮಂದಿ ಆರೋಪಿಗಳು ದೋಷ ಮುಕ್ತ

December 4, 2018

ವಿರಾಜಪೇಟೆ:  ಕಳೆದ ಐದು ವರ್ಷಗಳ ಹಿಂದೆ ಇಲ್ಲಿನ ಕೊಡವ ಸಮಾಜದ ಬಳಿ ಕತ್ತಿಯಿಂದ ಕುತ್ತಿಗೆಗೆ ಕಡಿದು ಕಾಳಪ್ಪ (35) ಎಂಬಾತನನ್ನು ಕೊಲೆ ಮಾಡಿದ ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ಎರಡನೇ ಸೆಷನ್ಸ್ ನ್ಯಾಯಾ ಲಯದ ನ್ಯಾಯಾಧೀಶರಾದ ಬಿ.ಜಿ.ರಮಾ ಆರು ಮಂದಿ ಆರೋಪಿಗಳನ್ನು ದೋಷಮುಕ್ತರೆಂದು ತೀರ್ಪು ನೀಡಿದ್ದಾರೆ.

28-8-2013ರಂದು ಅಪರಾಹ್ನ 4ಗಂಟೆಯ ವೇಳೆ ಶಾಲೆಯಿಂದ ಮಗುವನ್ನು ಕರೆದುಕೊಂಡು ಬರಲು ತ್ರಿವೇಣಿ ಶಾಲೆಯ ಮುಂದೆ ಕಾಳಪ್ಪ ಎಂಬುವರು ಬೈಕ್‍ನಲ್ಲಿ ಕುಳಿತಿ ದ್ದಾಗ ಅದೇ ಪ್ರದೇಶದ ನಿವಾಸಿಗಳಾದ ಗಜೇಂದ್ರ, ಸಚೀಂದ್ರ, ಮನೋಜ್ ಕುಮಾರ್, ತಮಿಳರ ಜೀವನ್, ಎಂ. ಜೀವನ್ ಹಾಗೂ ಎಂ.ಮುತ್ತಣ್ಣ ಎಂಬ ಆರು ಮಂದಿ ಕಾಳಪ್ಪನನ್ನು ಕುತ್ತಿಗೆ ಕಡಿದು ಕೊಲೆ ಮಾಡಿದರೆಂದೂ ಆರೋಪಿಸಿ ಕೊಡಗು ಜಿಲ್ಲಾ ಅಪರಾಧ ದಳದವರು ಆರು ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು. ಎಸಿಬಿ ಸಿಐ ಸತೀಶ್ ಕುಮಾರ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಕಾಳಪ್ಪನನ್ನು ಕೊಲೆ ಮಾಡಿರುವುದನ್ನು ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ವಿಫಲಗೊಂಡಿದ್ದರಿಂದ ನ್ಯಾಯಾಧೀಶರಾದ ಬಿ,ಜಿ.ರಮಾ ಆರು ಮಂದಿಯನ್ನು ಬಿಡುಗಡೆಗೊಳಿಸಿ ದ್ದಾರೆ. ಆರೋಪಿಗಳ ಪರ ಬಿ.ರತ್ನಾಕರ ಶೆಟ್ಟಿ ವಕಾಲತ್ತು ವಹಿಸಿದ್ದರು.

Translate »