ಬಾರದ ಲೋಕಕ್ಕೆ ಜಾರಿದ ಸಂಗೀತ ಮಾಂತ್ರಿಕನಿಗೆ ರಂಗಾಯಣದಲ್ಲಿ ಸಂಗೀತ ನುಡಿನಮನ
ಮೈಸೂರು

ಬಾರದ ಲೋಕಕ್ಕೆ ಜಾರಿದ ಸಂಗೀತ ಮಾಂತ್ರಿಕನಿಗೆ ರಂಗಾಯಣದಲ್ಲಿ ಸಂಗೀತ ನುಡಿನಮನ

September 27, 2020

ಮೈಸೂರು, ಸೆ.26(ಎಂಟಿವೈ)- ಅನಾ ರೋಗ್ಯದಿಂದ ಶುಕ್ರವಾರ ನಿಧನರಾದ ಸಂಗೀತ ಲೋಕ ದಿಗ್ಗಜ, ಗಾನಗಂಧರ್ವ ಎಸ್.ಬಿ.ಬಾಲಸುಬ್ರಹ್ಮಣ್ಯಂ ಅವರ ಆತ್ಮಕ್ಕೆ ಶಾಂತಿ ಕೋರಿ ಮೈಸೂರು ರಂಗಾಯಣ ದಲ್ಲಿ ಶನಿವಾರ ಬೆಳಗ್ಗೆ ಸಂಗೀತ ನುಡಿ ನಮನ ಅರ್ಪಿಸಲಾಯಿತು.

ಭೂಮಿಗೀತದ ಆವರಣದಲ್ಲಿ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಜಂಟಿ ನಿರ್ದೇಶಕ ಎಂ.ಎನ್.ಮಲ್ಲಿಕಾರ್ಜುನ ಸ್ವಾಮಿ, ಹಿರಿಯ ರಂಗಕರ್ಮಿ ಪ್ರಶಾಂತ ಹೀರೆಮಠ ಮತ್ತಿತರರು ಎಸ್‍ಪಿಬಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅಡ್ಡಂಡ ಕಾರ್ಯಪ್ಪ, ಹಲವು ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿರುವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಂಗೀತ ಲೋಕ ದಿಗ್ಗಜ, ಸಂಗೀತ ಮಾಂತ್ರಿಕ ಆಗಿದ್ದರು. ಬಹುತೇಕ ಜನರು ಬಾಲಸುಬ್ರಹ್ಮಣ್ಯಂ ಅವರನ್ನು ಖುದ್ದಾಗಿ ನೋಡಿರದಿದ್ದರೂ ಅವರು ಹಾಡಿ ರುವ ಗೀತೆಗಳು ಮನೆ ಮನೆಯನ್ನೂ ತಲು ಪಿದ್ದವು. ದನಗಾಯಿ, ಕಾರ್ಮಿಕ ವರ್ಗ, ಕೃಷಿಕರೂ ಸೇರಿದಂತೆ ಎಲ್ಲಾ ವರ್ಗಗಳ ಜನರೂ ಎಸ್‍ಪಿಬಿ ಹಾಡುಗಳನ್ನು ಗುನು ಗುವುದನ್ನು ಕಾಣ ಬಹುದು. ತಾವು ಹಾಡಿರುವ ಗೀತೆ ಗಳಿಂದಲೇ ಪ್ರತಿ ಮನೆಗೂ ಎಸ್‍ಪಿಬಿ ತಲುಪಿದ್ದರು. ಕುಗ್ರಾಮಗಳಲ್ಲಿಯೂ ಅವರ ಹಾಡುಗಳು ಛಾಪು ಮೂಡಿಸಿ ದ್ದವು. ಒಂದೇ ದಿನ 20 ಹಾಡುಗಳನ್ನು ರೆಕಾರ್ಡಿಂಗ್ ಮಾಡುವ ಮೂಲಕ ತಮ್ಮ ಸಾಮಥ್ರ್ಯ ಹಾಗೂ ಅನುಭವವನ್ನು ಸಾಬೀತು ಪಡಿಸಿದ್ದ ಚೈತನ್ಯಪೂರ್ಣ ಚೇತನ. ಅವರು ನಮ್ಮನ್ನು ದೈಹಿಕವಾಗಿ ಅಗಲಿದ್ದರೂ ಗೀತೆಗಳ ಮೂಲಕ ಅಮರರಾಗಿರುತ್ತಾರೆ ಎಂದರು.

ಇದೇ ವೇಳೆ ರಂಗಾಯಣದ ರೆಪ ರ್ಟರಿ ಗಾಯಕ ರಾಮಚಂದ್ರ ಹಡಪದ ಅವರು ಗಾಯಕ ಎಸ್.ಪಿ.ಬಾಲಸುಬ್ರ ಹ್ಮಣ್ಯಂ ಹಾಡಿರುವ ಕೆಲವು ಗೀತೆಗಳನ್ನು ಹಾಡಿ ಸಂಗೀತ ನಮನ ಸಲ್ಲಿಸಿದರು.

 

 

 

Translate »