ಮೈಸೂರು, ಸೆ.26(ವೈಡಿಎಸ್)-ಮೈಸೂರು ಜಿಲ್ಲಾದÀ್ಯಂತ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಕೊರೊನಾ ಪರೀಕ್ಷೆ ನಡೆಸಲು ಆಸಕ್ತ ರಿಂದ ಅರ್ಜಿ ಆಹ್ವಾನಿಸಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಖಾಸಗಿ ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ದತ್ತಾಂಶ ನಮೂದಕರನ್ನು ನೇಮಿಸಿ ಕೊಳ್ಳುವ ಅಗತ್ಯವಿದೆ. ಸರ್ಕಾರವು ಪ್ರಯೋಗ ಶಾಲಾ ತಂತ್ರಜ್ಞರು ಲಭ್ಯವಿಲ್ಲದಿದ್ದಲ್ಲಿ ನರ್ಸಿಂಗ್ ಅಂಡ್ ಪ್ಯಾರಾ ಮೆಡಿಕಲ್ ಪರ್ಸನಲ್, ಡಿಪೆÇ್ಲಮಾ ಹೋಲ್ಡರ್ಸ್, ವಿಜ್ಞಾನ ಪದವೀಧರರನ್ನು ಸದರಿ ಕಾರ್ಯಕ್ಕೆ ನಿಯೋಜಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಕೊರೊನಾ ಪರೀಕ್ಷೆಗೆ ನೇಮಕ ಮಾಡಿಕೊಳ್ಳುವವರಿಗೆ ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಪ್ರಯೋಗ ಶಾಲಾ ತಂತ್ರಜ್ಞರಿಗೆ ಮಾಸಿಕವಾಗಿ 10 ಸಾವಿರ ರೂ., + ಪ್ರತಿ ಗಂಟಲು ದ್ರವ ತೆಗೆಯು ವಿಕೆಗೆ 15ರೂ. ಹಾಗೂ ದತ್ತಾಂಶ ನಮೂದಕರಿಗೆ 14 ಸಾವಿರ ರೂ. ಸಂಭಾವನೆ ನೀಡಲಾಗುವುದು. ಆಸಕ್ತರು ಡಿಹೆಚ್‍ಓ ಕಚೇರಿ ಅಥವಾ ಸಂಬಂಧಪಟ್ಟ ತಾಲೂಕು ವೈದ್ಯಾ ಧಿಕಾರಿಗಳ ಕಚೇರಿಯಲ್ಲಿ ಸೆ.30ರೊಳಗೆ ದಾಖಲಾತಿಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳುವುದು.