ಮೈಸೂರು ಸಶಸ್ತ್ರ ಪಡೆಗಳ ಮಾಜಿ ಸೈನಿಕರ ಸಂಘ ನಾಳೆ ಉದ್ಘಾಟನೆ
ಮೈಸೂರು

ಮೈಸೂರು ಸಶಸ್ತ್ರ ಪಡೆಗಳ ಮಾಜಿ ಸೈನಿಕರ ಸಂಘ ನಾಳೆ ಉದ್ಘಾಟನೆ

January 30, 2021

ಮೈಸೂರು, ಜ.29(ಎಂಟಿವೈ)- ಮಾಜಿ ಸೈನಿಕರ ಕುಂದು ಕೊರತೆ ನಿವಾರಿಸಲು, ಕೇಂದ್ರ-ರಾಜ್ಯ ಸರ್ಕಾರದ ಸೌಲಭ್ಯಗಳನ್ನು ದೊರ ಕಿಸಿಕೊಡಲು ಹೊಸದಾಗಿ ರಚಿಸ ಲಾಗಿರುವ `ಮೈಸೂರು ಸಶಸ್ತ್ರಪಡೆಗಳ ಮಾಜಿ ಸೈನಿಕರ ಸಂಘ’ದ ಉದ್ಘಾಟನಾ ಸಮಾರಂಭ ಜ.31ರ ಬೆಳಿಗ್ಗೆ 10.30ಕ್ಕೆ ಜಯಲಕ್ಷ್ಮಿಪುರಂನಲ್ಲಿರುವ ಕೊಡಗು ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಲಿದ್ದು, ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ಹಾಗೂ ಪ್ರತಾಪ ಸಿಂಹ ಉದ್ಘಾಟಿಸಲಿದ್ದಾರೆ ಎಂದು ನೂತನ ಸಂಘದ ಅಧ್ಯಕ್ಷ ಪಿ.ಕೆ.ಬಿದ್ದಪ್ಪ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿ ನಡೆಸಿದ ಅವರು, ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ತನ್ವೀರ್ ಸೇಠ್, ಮಾಜಿ ಶಾಸಕ ವಾಸು, ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ, ನಗರ ಪೆÇಲೀಸ್ ಆಯುಕ್ತ ಚಂದ್ರಗುಪ್ತ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮತ್ತಿತರರು ಭಾಗವಹಿಸಲಿದ್ದಾರೆ. ನಿವೃತ್ತ ಮೇ.ಜನರಲ್ ಕೆ.ಕೆ.ಮೂರ್ತಿ, `ಮೈಸೂರು ಮಿತ್ರ’ ಪತ್ರಿಕೆ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತಕುಮಾರ್ ಗೌಡ, ಮಾಜಿ ಸೈನಿಕರ ಕಲ್ಯಾಣ-ಪುನರ್ ವಸತಿ ಇಲಾಖೆ ಉಪ ನಿರ್ದೇಶಕ ಬಾಲಸುಬ್ರಹ್ಮಣ್ಯ, ನಿವೃತ್ತ ಬ್ರಿಗೇಡಿಯರ್ ವಿ.ಕೆ.ಅಡ್ಡಪ್ಪ, ಲೆ.ಕರ್ನಲ್ ಸಿ.ವಿ.ರಾಜೇಂದ್ರ ವಿಶೇಷ ಆಹ್ವಾನಿತರಾಗಿರುವರು ಎಂದರು.

ಸನ್ಮಾನ: 2ನೇ ಮಹಾಯುದ್ಧದಲ್ಲಿ(ಲಾಹೋರ್, ಪಿರೋಜ್ ಪುರ) ಭಾರತೀಯ ಸೇನೆ ಯೋಧರಾಗಿದ್ದ ಸಿ.ಪಿ.ಅನಂತ ಪದ್ಮನಾಭ (97), 1962ರಲ್ಲಿ ಚೀನಾ ಹಾಗೂ 1965ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತೀಯ ನೌಕಾಪಡೆಯ ಮೇಚಂಡ ಎ.ಕರುಂಬಯ್ಯ(80), 1962ರಲ್ಲಿ ಚೀನಾ ಹಾಗೂ 1971ರ ಬಾಂಗ್ಲಾದೇಶ ವಿರುದ್ಧ ಯುದ್ಧದಲ್ಲಿ ಪಾಲ್ಗೊಂಡಿದ್ದ ಕೆ.ಟಿ. ಅನಂತರಾಮಯ್ಯ(81) ಹಾಗೂ ಜಮ್ಮು-ಪೂಂಚ್ ಸೆಕ್ಟರ್‍ನಲ್ಲಿ ಪೆಟ್ರೋಲಿಂಗ್ ಮಾಡುವಾಗ ಹುತಾತ್ಮರಾದ ಎನ್.ಎಸ್.ಮಹೇಶ್ ಅವರ ತಾಯಿ ರತ್ನಮ್ಮ(62) ಅವರನ್ನು ಸನ್ಮಾನಿಸಲಾಗುತ್ತಿದೆ ಎಂದರು.

ಮಾಜಿ ಸೈನಿಕರು-ಅವಲಂಬಿತರ ಕುಂದುಕೊರತೆ ನಿವಾರಿಸಿ, ರಾಜ್ಯ, ಕೇಂದ್ರ ಸರ್ಕಾರದ ಅನುದಾನಗಳನ್ನು ಮಾಜಿ ಸೈನಿಕರು, ಅವರ ಅವಲಂಬಿತರಿಗೆ ದೊರಕಿಸಿಕೊಡುವುದು, ಇಲಾಖೆಗಳಿಂದ ಸಮಸ್ಯೆಯಾಗಿದ್ದರೆ ಕೋರ್ಟ್ ಮೊರೆ ಹೋಗಿ ಇತ್ಯರ್ಥಪಡಿಸು ವುದು, ಮಾಜಿ ಸೈನಿಕರ ಮರಣ ವೇಳೆ ಅವರ ಕುಟುಂಬಕ್ಕೆ ಆರ್ಥಿಕ ನೆರವು, ಸ್ವಚ್ಛ ಭಾರತ ಅಭಿಯಾನ ಅನುಷ್ಠಾನ, ಹಿಂದುಳಿದ ಜನಾಂಗದವರಿಗೆ ಕಾನೂನಿನ ನೆರವು, ಜಿಲ್ಲೆಯ ಎಲ್ಲ ತಾಲೂಕು ಗಳಿಗೂ 2 ತಿಂಗಳಿಗೊಮ್ಮೆ ಭೇಟಿ ನೀಡಿ ಮಾಜಿ ಸೈನಿಕರ ಕುಂದು ಕೊರತೆ ಆಲಿಸಿ ಕ್ರಮ ಕೈಗೊಳ್ಳುವುದು, ಸರ್ಕಾರದ ಅನುದಾನದಲ್ಲಿ ತರಬೇತಿ ಶಾಲೆ ತೆರೆದು ಮಕ್ಕಳಿಗೆ ತರಬೇತಿ ನೀಡುವುದು, ಮಾಜಿ ಸೈನಿಕರ ಆರೋಗ್ಯ ಸಮಸ್ಯೆಗೆ ನೆರವಾಗುವುದು ಸಂಘದ ಉದ್ದೇಶ ಎಂದರು. ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಕಚೇರಿ ಸುತ್ತ 20-25 ಚದರಡಿ ಡಾಂಬರು ಹಾಕಬೇಕಿದೆ, ಮೈಸೂರಲ್ಲಿ `ಯುದ್ಧ ಸ್ಮಾರಕ’ ನಿರ್ಮಿಸಬೇಕಿದೆ, ಇಸಿಹೆಚ್‍ಎಸ್ ಪಾಲಿ ಕ್ಲಿನಿಕ್‍ಗೆ, ಸಿಎಸ್‍ಡಿ ಕ್ಯಾಂಟೀನ್‍ಗೆ ಸ್ವಂತ ಕಟ್ಟಡ ನಿರ್ಮಿ ಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷ ಕೆ.ಕೆ.ಉತ್ತಪ್ಪ, ಕಾರ್ಯದರ್ಶಿ ಪುಟ್ಟಸ್ವಾಮಿ, ಜಂಟಿ ಕಾರ್ಯದರ್ಶಿ ಜಿ.ರಾಜೇಂದ್ರನ್, ಖಜಾಂಚಿ ಕಾಳಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

 

Translate »