ಕಚ್ಚಾಟ, ಆರೋಪ, ಪ್ರತ್ಯಾರೋಪದಿಂದ ಮೈಸೂರು  ಮಾನÀ ಹರಾಜು ಹಾಕುತ್ತಿರುವ ಸಂಸದ, ಶಾಸಕರು
ಮೈಸೂರು

ಕಚ್ಚಾಟ, ಆರೋಪ, ಪ್ರತ್ಯಾರೋಪದಿಂದ ಮೈಸೂರು ಮಾನÀ ಹರಾಜು ಹಾಕುತ್ತಿರುವ ಸಂಸದ, ಶಾಸಕರು

June 3, 2021

ಮೈಸೂರು, ಜೂ.2(ಆರ್‍ಕೆಬಿ)- ಜಿಲ್ಲೆ ಯಲ್ಲಿ ಕೊರೊನಾ ಸೋಂಕಿತರು ಮತ್ತು ಮರಣಗಳು ಹೆಚ್ಚುತ್ತಿದ್ದರೂ ಆಡಳಿತ ಪಕ್ಷದ ಸಂಸದ, ಶಾಸಕರು, ಅಧಿಕಾರಿಗಳು ಪರ ಸ್ಪರ ಕಚ್ಚಾಟ, ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿರುವುದನ್ನು ಮಾಜಿ ಸಂಸದರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ್ ಇಂದಿಲ್ಲಿ ಖಂಡಿಸಿದರು.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಗೆ ಒಳ್ಳೊಳ್ಳೆಯ ರಾಜ ಕಾರಣಿಗಳು ಅನೇಕ ಕೊಡುಗೆಗಳನ್ನು ನೀಡಿ ದ್ದಾರೆ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಗಳು ಜಿಲ್ಲೆಯ ಅಭಿವೃದ್ಧಿಗೆ ದುಡಿದಿದ್ದಾರೆ. ಇಂತಹ ಜಿಲ್ಲೆಯ ಮಾನ ಮತ್ತು ಗೌರವ ವನ್ನು ಆರೋಪ ಪ್ರತ್ಯಾರೋಪಗಳಿಂದ ಈಗ ಹರಾಜು ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ 2ನೇ ಅಲೆಯಲ್ಲಿ ಬೆಂಗ ಳೂರಿನ ನಂತರ ಮೈಸೂರಿನಲ್ಲಿಯೆ ಸೋಂಕಿ ತರು ಮತ್ತು ಮರಣದ ಸಂಖ್ಯೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಪರಸ್ಪರ ನಿಂದನೆ, ಆರೋಪ, ಪ್ರತ್ಯಾರೋಪ ಬಿಟ್ಟು ಒಗ್ಗಟ್ಟಿ ನಿಂದ ಕೆಲಸ ಮಾಡಿದ್ದರೆ ಜಿಲ್ಲೆಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದರು.
ಸಂಸದ ಪ್ರತಾಪ್‍ಸಿಂಹ, ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್ ನೀಡಿ ರುವ ಹೇಳಿಕೆಗಳು, ಅದಕ್ಕೆ ಜಿಲ್ಲಾಧಿಕಾರಿ ಗಳು ನೀಡಿರುವ ಉತ್ತರಗಳನ್ನು ನೋಡಿ ದರೆ ಸಾವಿನ ಮನೆಯಲ್ಲಿ ಗಳ ಇರಿದಂತಾ ಗಿದೆ. ಈ ಶೀತಲ ಸಮರಕ್ಕೆ ಕಾರಣವೇನು? ಇದು ಜನರಿಗೆ ತಿಳಿಯಬೇಕು ಎಂದರು.

ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‍ಡಿ ಆರ್‍ಎಫ್)ಯ 41 ಕೋಟಿ ರೂ.ಗಳ ಹಣದ ಟೆಂಡರ್ ಯಾರಿಗೆ ನೀಡಲಾಗಿದೆ? ಖಾಸಗಿ ಆಸ್ಪತ್ರೆಗಳ ವಿರುದ್ಧ ಕೈಗೊಂಡ ಕ್ರಮಗಳೇನು? ಸ್ಟೆಪ್‍ಡೌನ್ ಆಸ್ಪತ್ರೆಗಳ ಕಿಕ್ ಬ್ಯಾಕ್ ಪಡೆದವರು ಯಾರು? ಇವೆ ಲ್ಲವೂ ಬಹಿರಂಗವಾಗಬೇಕು ಎಂದು ಆಗ್ರಹಿಸಿದರು. ಹಿರಿಯರಾದ ಎಂಎಲ್‍ಸಿ ಎ.ಹೆಚ್.ವಿಶ್ವನಾಥ್ ಜಿಲ್ಲೆಯ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಉಸ್ತುವಾರಿ ಸಚಿವರಾಗಲೀ, ಸಂಸದರಾಗಲೀ, ಶಾಸಕ ರಾಗಲೀ ಯಾರೂ ಉತ್ತರ ನೀಡದೇ ಮೌನ ವಹಿಸಿರುವುದೇಕೆ? ಎಂದು ಪ್ರಶ್ನಿಸಿದರು. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಹಾಗಾಗಿ ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ನ್ಯಾಯಾಧೀಶರು ನೀಡಿ ರುವ ವರದಿಯ ಬಗ್ಗೆ ಕ್ರಮಕ್ಕಾಗಿ ನಿರೀಕ್ಷಿಸಿ ದ್ದೇವೆ. ಆದರೆ ಈ ಭಂಡ ಸರ್ಕಾರ ದುರಂತದ ಬಗ್ಗೆ ಯಾರ ಮೇಲೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸರ್ಕಾರ ದಿವಾಳಿಯಾಗಿದೆಯೇ: ಮೈಸೂರು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ 15 ದಿನದಿಂದ ಔಷಧಿಗಳಲ್ಲ. ಕೇಳಿ ದರೆ ಕೇವಲ 2 ದಿನಕ್ಕಾಗುವಷ್ಟು ಔಷಧಿ ಮಾತ್ರ ನೀಡಿದ್ದಾರೆ. ಸರ್ಕಾರದಲ್ಲಿ ಹಣ ವಿಲ್ಲವೇ? ಸರ್ಕಾರ ದಿವಾಳಿಯಾಗಿದೆಯೇ? ಎಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಪ್ರಶ್ನಿಸಿದರು. ಸುದ್ದಿಗೋಷ್ಠಿ ವೇಳೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ವಕ್ತಾರ ಹೆಚ್.ಎ.ವೆಂಕಟೇಶ್, ಮಾಜಿ ಮೇಯರ್‍ಗಳಾದ ಚಿಕ್ಕಣ್ಣ, ಪುಷ್ಪ ಲತಾ ಚಿಕ್ಕಣ್ಣ, ಕೆಪಿಸಿಸಿ ಕಾನೂನು ಘಟ ಕದ ರಾಜ್ಯ ಕಾರ್ಯದರ್ಶಿ ಕವಿತಾ ಕಾಳೆ, ಪದಾಧಿಕಾರಿಗಳಾದ ಈಶ್ವರ ಚಕ್ಕಡಿ, ಶಿವಣ್ಣ, ಗಿರೀಶ್ ಇನ್ನಿತರರು ಉಪಸ್ಥಿತರಿದ್ದರು.

Translate »