ಕೂಲಿಯೂ ಇಲ್ಲ, ಮಾಸಾಶನವೂ  ಬಂದಿಲ್ಲ, ಜೀವನ ನಿರ್ವಹಣೆ ಕಷ್ಟ.. ಕಷ್ಟ…
ಮೈಸೂರು

ಕೂಲಿಯೂ ಇಲ್ಲ, ಮಾಸಾಶನವೂ ಬಂದಿಲ್ಲ, ಜೀವನ ನಿರ್ವಹಣೆ ಕಷ್ಟ.. ಕಷ್ಟ…

June 2, 2021

ಮೈಸೂರು, ಜೂ.1(ಎಸ್‍ಪಿಎನ್)- ಲಾಕ್‍ಡೌನ್‍ನಿಂದಾಗಿ ನರೇಗಾ ಕೂಲಿಯೂ ಸಿಗುತ್ತಿಲ್ಲ, ಮೂರು ತಿಂಗಳಿಂದ ಮಾಸಾ ಶನವೂ ಬಂದಿಲ್ಲ. ಇದರಿಂದ ಜೀವನ ನಿರ್ವಹಣೆಯೇ ಕಷ್ಟವಾಗುತ್ತಿದೆ ಎಂದು ವರುಣಾ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು.

ಮೈಸೂರು ತಾಲೂಕು ವರುಣಾ ಗ್ರಾಮಸ್ಥ ರಾದ ಮಾದಯ್ಯ, ಮಲ್ಲಯ್ಯ, ದೊಡ್ಡ ಮಾದಯ್ಯ, ಸಿದ್ದು, ರಂಗಸ್ವಾಮಿ, ನಾಗಮ್ಮ, ಲಿಂಗಮ್ಮ ಸೇರಿದಂತೆ ಇತರರು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿ, ಕೊರೊನಾ ಸಂಕಷ್ಟದ ನಡುವೆ ಅಂಗವಿಕಲರು, ವೃದ್ಧಾಪ್ಯ, ವಿಧವಾ ಹಾಗೂ ಇತರೆ ಮಾಸಾಶನ ಕಳೆದ ಮೂರು ತಿಂಗಳು ಬಿಡುಗಡೆಗೊಂಡಿಲ್ಲ. ಇದರ ಬಗ್ಗೆ ತಾಲೂಕು ಅಧಿಕಾರಿಗಳ ಬಳಿ ವಿಚಾರಿಸಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಸಂಬಂಧ ಜಿಲ್ಲಾಡಳಿತ ಗಮನಹರಿಸ ಬೇಕು ಎಂದು ಒತ್ತಾಯಿಸಿದರು.

ಕೂಲಿ ಸಿಗುತ್ತಿಲ್ಲ: ವರುಣಾ ಗ್ರಾಮದ ಬಹುತೇಕ ನಿವಾಸಿಗಳು ಕೃಷಿ, ಕಟ್ಟಡ ಕೆಲಸ, ಮೈಸೂರಿನ ಕಾರ್ಖಾನೆಗಳಲ್ಲಿ ಕೆಲಸ ಮಾಡು ವವರೇ ಹೆಚ್ಚಾಗಿದ್ದು, ಕೊರೊನಾ ನಿರ್ಬಂಧದಿಂದಾಗಿ ಕೆಲಸಕ್ಕೆ ಹೋಗಲು ಸಾಧ್ಯ ವಾಗುತ್ತಿಲ್ಲ. ಇದರ ನಡುವೆ ಮಾಸಾ ಶನವೂ ಬಿಡುಗಡೆಯಾಗದಿದ್ದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗು ತ್ತಿದೆ. ನರೇಗಾ ಯೋಜನೆ ಅನುಷ್ಠಾನಗೊಳಿ ಸಲು ಜಿಲ್ಲಾಡಳಿತ ಗಮನಹರಿಸಲಿ ಎಂದು ವರುಣಾ ಗ್ರಾಮದ ನಿವಾಸಿ ದೊಡ್ಡ ಮಾದಯ್ಯ ಮನವಿ ಮಾಡಿದರು.

ನಿಯಂತ್ರಣಕ್ಕೆ ಬರುತ್ತಿದೆ: ಜನರ ನಿರ್ಲಕ್ಷ್ಯ ದಿಂದಾಗಿ ನಮ್ಮ ಗ್ರಾಪಂ ವ್ಯಾಪ್ತಿಯ 5 ಹಳ್ಳಿಗಳಲ್ಲಿ ಕೊರೊನಾ ಹೆಚ್ಚು ಕಾಣಿಸಿ ಕೊಂಡಿತ್ತು. ಇದೀಗ ತಾಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮದಿಂದಾಗಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ತಿಳಿಸಿದರು.
ವರುಣಾ ಗ್ರಾಪಂ ವ್ಯಾಪ್ತಿಗೆ ಚಿಕ್ಕಹಳ್ಳಿ, ಚೋರ್ನಹಳ್ಳಿ, ದಡ್ಡಿಕೆರೆ, ಪಿಳ್ಳಹಳ್ಳಿ ಗ್ರಾಮ ಗಳು ಸೇರಿವೆ. ಇದರಲ್ಲಿ ಪಿಳ್ಳಹಳ್ಳಿ ಹಾಗೂ ಚಿಕ್ಕಹಳ್ಳಿಯ 20-30 ಮಂದಿ ಹಾಗೂ ಇತರೆ ಹಳ್ಳಿಯಲ್ಲಿ 10-15 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದರಲ್ಲಿ ಹಲವರು ಗುಣಮುಖರಾಗಿ ಮನೆಗೆ ವಾಪಸ್ ಬಂದಿದ್ದಾರೆ. 4-5 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದರು.

ಕೊರೊನಾ 2ನೇ ಅಲೆ ಬಗ್ಗೆ ಮೊದ ಮೊದಲು ಗ್ರಾಮದ ಜನರಲ್ಲಿ ಜಾಗೃತಿ ವಹಿಸುವ ಬಗ್ಗೆ ನಿರ್ಲಕ್ಷ್ಯ ಭಾವನೆಯಿತ್ತು. ಸಾವು-ನೋವು ಹಾಗೂ ಆಸ್ಪತ್ರೆಗೆ ದಾಖ ಲಾದವರ ಸಂಖ್ಯೆ ಹೆಚ್ಚಾದಂತೆ ಜನರಲ್ಲಿ ಜಾಗೃತಿ ಮೂಡಿತು. ನಂತರ ಜನರೇ ಸ್ವಯಂ ಪ್ರೇರಿತರಾಗಿ 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಮುಂದಾದರು. ಇವರಿಗೆ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಪಂ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಸಾಥ್ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಬಡಾಯಿ ಜನಪ್ರತಿನಿಧಿಗಳು ಇತ್ತ ಸುಳಿ ದಿಲ್ಲ: ಚುನಾವಣೆ ಘೋಷಣೆಯಾದಾಗ ಕಾಂಗ್ರೆಸ್, ಬಿಜೆಪಿ ಪಕ್ಷದ ಕಾರ್ಯಕರ್ತ ರೆಲ್ಲರೂ ಮತದಾರರ ಮನೆ ಬಾಗಿಲಿಗೆ ಬಂದು ಕಾಡಿಬೇಡಿ ಮತ ಹಾಕಿಸಿಕೊಂಡಿ ದ್ದಾರೆ. ಅಂದು ಹೋದವರು ಇಲ್ಲಿಯ ವರೆಗೂ ಪತ್ತೆಯಾಗಿಲ್ಲ. ಸರ್ಕಾರ ನೀಡಿ ರುವ ಉಚಿತ ಪಡಿತರ ಬಿಟ್ಟರೆ, ಜನಪ್ರತಿ ನಿಧಿಗಳಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ತಿಳಿಸಿದರು.

Translate »