ನಾಳೆ ಮೈಸೂರು ನಗರ ಬಂದ್; ಯಶಸ್ಸಿಗೆ ಮುಖಂಡರ ಚರ್ಚೆ
ಮೈಸೂರು

ನಾಳೆ ಮೈಸೂರು ನಗರ ಬಂದ್; ಯಶಸ್ಸಿಗೆ ಮುಖಂಡರ ಚರ್ಚೆ

February 6, 2022

ಮೈಸೂರು,ಫೆ.5(ಪಿಎಂ)- ಗಣರಾಜ್ಯೋ ತ್ಸವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ತೆಗೆಸಿದ ಆರೋಪ ಎದುರಿ ಸುತ್ತಿರುವ ರಾಯಚೂರು ಜಿಲ್ಲಾ ನ್ಯಾಯಾ ಧೀಶ ಮಲ್ಲಿಕಾರ್ಜುನಗೌಡರ ವಿರುದ್ಧ ಶೀಘ್ರ ಕ್ರಮಕ್ಕೆ ಆಗ್ರಹಿಸಿ ಫೆ.7ರ ಮೈಸೂರು ನಗರ ಬಂದ್ ಸಂಬಂಧ ಶನಿವಾರ ಪೂರ್ವಭಾವಿ ಸಭೆ ನಡೆಸಲಾಯಿತು.

ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಅಂದು ಬೆಳಗ್ಗೆ 6ರಿಂದ ಸಂಜೆ 5ರವರೆಗೆ ನಗರದಲ್ಲಿ ಬಂದ್ ಆಚರಣೆಗೆ ಕರೆ ನೀಡಲಾಗಿದೆ. ಈ ಸಂಬಂಧ ಮೈಸೂರಿನ ಪುರಭವನ ಆವ ರಣದಲ್ಲಿ ವಿವಿಧ ಸಂಘಟನೆಗಳ ಮುಖಂ ಡರು ಪೂರ್ವಾಭಾವಿ ಸಭೆ ನಡೆಸಿ, ಬಂದ್‍ನ ರೂಪುರೇಷೆಗಳ ಕುರಿತು ಚರ್ಚಿಸಿದರು.

ಅಂದು ಬೆಳಗ್ಗೆ 6ಕ್ಕೆ ಎಲ್ಲಾ ಸಂಘಟನೆ ಮುಖಂಡರು ಪುರಭವನ ಆವರಣದಲ್ಲಿ ಸಮಾವೇಶಗೊಂಡು ನಂತರದಲ್ಲಿ ದ್ವಿಚಕ್ರ ವಾಹನಗಳ ಮೂಲಕ ನಗರದ ಎಲ್ಲಾ ಬಡಾ ವಣೆ ಹಾಗೂ ವಾಣಿಜ್ಯ ಕೇಂದ್ರಗಳ ಕಡೆ ಗಳಲ್ಲಿ ಜಾಥಾ ತೆರಳುವುದು. ಬಳಿಕ ಬೆಳಗ್ಗೆ 10ಕ್ಕೆ ಪುರಭವನ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಲು ನಿರ್ಣಯಿಸಲಾಯಿತು.

ಎಲ್ಲಾ ಸ್ತರದ ಜನಪ್ರತಿನಿಧಿಗಳು, ಪ್ರಗತಿ ಪರ ಚಿಂತಕರು, ವಿದ್ಯಾರ್ಥಿ ಸಂಘಟನೆ ಗಳು, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವ್ಯಾಪಾರಿ ಸಂಘ ಗಳು ಸೇರಿದಂತೆ ಮೈಸೂರಿನ ಸಮಸ್ತ ನಾಗರಿಕರು ಬಂದ್ ಬೆಂಬಲಿಸುವಂತೆ ಕೋರಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಪ್ರಸ್ತಾವಿಕವಾಗಿ ಮಾತನಾ ಡಿದ ಮಾಜಿ ಮೇಯರ್ ಪುರುಷೋತ್ತಮ್, 30ಕ್ಕೂ ಹೆಚ್ಚು ಸಂಘಟನೆಗಳು ಮೈಸೂರು ಬಂದ್‍ಗೆ ಬೆಂಬಲ ನೀಡಿವೆ. ಸಾಮೂ ಹಿಕ ನಾಯಕತ್ವದಲ್ಲಿ ಮೈಸೂರು ಬಂದ್ ಯಶಸ್ವಿಗೊಳಿಸಬೇಕಾಗಿದೆ. ಶಾಂತಿಯುತ ವಾಗಿ ಪ್ರತಿಯೊಬ್ಬರು ಬಂದ್‍ಗೆ ಸಹಕಾರ ನೀಡುವಂತೆ ಮನವರಿಕೆ ಮಾಡಬೇಕು. ಮುಖ್ಯವಾಗಿ ಸರ್ಕಾರಿ ಕಚೇರಿ, ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳು ಬಂದ್ ಆಗು ವಂತೆ ಸಂಬಂಧಿಸಿದವರ ಸಹಕಾರ ಪಡೆಯಬೇಕು. ಸಂಘಟನೆಗಳು ತಮ್ಮ ವ್ಯಾಪ್ತಿಯಲ್ಲಿ ಬಂದ್ ಯಶಸ್ವಿಯಾಗು ವಂತೆ ಸಾರ್ವಜನಿಕರ ಸಹಕಾರ ಪಡೆಯ ಬೇಕು ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‍ಕುಮಾರ್ ಮಾತನಾಡಿ, ಇದು ರಾಜಕಾರಣದ ಬಂದ್ ಅಲ್ಲ. ರಾಷ್ಟ್ರ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಗೌರವ ತೋರಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಮೈಸೂರು ಬಂದ್‍ಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ಬಂದ್‍ಗೆ ಸಹಾಯವಾಗಲೆಂದು 10 ಸಾವಿರ ದೇಣಿಗೆ ನೀಡುವುದಾಗಿ ತಿಳಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಬೆಟ್ಟಯ್ಯ ಕೋಟೆ ಮಾತ ನಾಡಿ, ಭಾನುವಾರ ಸಂಜೆ ಬಂದ್‍ನ ಪೂರ್ವಭಾವಿ ಯಗಿ ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡುವುದು ಸೂಕ್ತ ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾದ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಘಟನೆ ನಡೆದು 9 ದಿನಗಳೇ ಕಳೆದರೂ ಮಲ್ಲಿಕಾರ್ಜುನಗೌಡರ ವಿರುದ್ಧ ಯಾವುದೇ ಸಣ್ಣ ಕ್ರಮ ಕೈಗೊಂಡಿಲ್ಲ. ಇದು ಅತ್ಯಂತ ಖಂಡನೀಯ. ಇವರ ವಿರುದ್ಧ ಗಂಭೀರ ಕ್ರಮದೊಂದಿಗೆ ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲಾತಿ ಜಾರಿ ಗೊಳಿಸಬೇಕೆಂಬುದೂ ಈ ಹೋರಾಟದ ಮತ್ತೊಂದು ಪ್ರಮುಖ ಅಂಶ. ಅಂದು ಬೆಳಗ್ಗೆ ಪುರಭವನ ಆವರಣದಲ್ಲಿ ಅಂಬೇ ಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶಾಂತಿಯುತ ಪ್ರತಿಭಟನೆ ಶುರುವಿನೊಂದಿಗೆ ಬಂದ್ ಆಚರಿಸೋಣ ಎಂದರು. ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗ ವಾನ್, ಎಸ್‍ಸಿ-ಎಸ್‍ಟಿ ವಕೀಲರ ಸಂಘದ ಅಧ್ಯಕ್ಷ ತಿಮ್ಮಯ್ಯ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್.ಭಾಸ್ಕರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂ ಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »