ಎನ್‍ಟಿಎಂ ಶಾಲೆ ಸ್ಥಳಾಂತರ ಖಂಡಿಸಿ ಪ್ರತಿಭಟನೆ
ಮೈಸೂರು

ಎನ್‍ಟಿಎಂ ಶಾಲೆ ಸ್ಥಳಾಂತರ ಖಂಡಿಸಿ ಪ್ರತಿಭಟನೆ

February 6, 2022

ಮೈಸೂರು,ಫೆ.5(ಪಿಎಂ)-ಮೈಸೂರಿನ ಮಹಾ ರಾಣಿ ಮಾದರಿ (ಎನ್‍ಟಿಎಂ) ಶಾಲೆ ಸ್ಥಳಾಂತರ ಖಂಡಿಸಿ ಎನ್‍ಟಿಎಂ ಶಾಲೆ ಉಳಿಸಿ ಹೋರಾಟಗಾರರು ಶನಿ ವಾರವೂ ಪ್ರತಿಭಟನೆ ನಡೆಸಿದರು.

ಶಾಲೆ ಎದುರು ಜಮಾಯಿಸಿದ ಪ್ರತಿಭಟ ನಾಕಾರರು, ಶಾಲೆಯನ್ನು ಎದುರಿಗಿರುವ ಮಹಾರಾಣಿ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ಕಟ್ಟಡಕ್ಕೆ ಸ್ಥಳಾಂತರ ಮಾಡಿ ರುವುದು ಸರಿಯಲ್ಲ. ಶಾಲೆ ಕಟ್ಟಡಕ್ಕೆ ತನ್ನದೇ ಆದ ಪರಂಪರೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಲಾಯಿತು.

ನೆಲಸಮ ಮಾಡದಂತೆ ಮನವಿ: ಎನ್‍ಟಿಎಂ ಶಾಲೆ ನೆಲಸಮಕ್ಕೆ ಪಾಲಿಕೆಯಿಂದ ಆದೇಶ ನೀಡದಂತೆ ಕೋರಿ ಸದರಿ ಶಾಲೆ ಉಳಿಸಿ ಹೋರಾಟಗಾರ ಎಂ.ಮೋಹನ್‍ಕುಮಾರ್ ಗೌಡ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ ದ್ದಾರೆ. ಶಾಲೆ ಕಟ್ಟಡ ಸಂಬಂಧ ರಾಜ್ಯ ಹೈಕೋರ್ಟ್‍ನಲ್ಲಿ ದಾವೆ ಹೂಡಲಾಗಿದೆ. ಈ ಕುರಿತಂತೆ ಆದೇಶ ಹೊರಬರಬೇಕಿ ರುವುದು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಶಾಲೆ ಕಟ್ಟಡ ನೆಲಸಮಕ್ಕೆ ಪಾಲಿಕೆಯಿಂದ ಆದೇಶ ನೀಡಬಾರದೆಂದು ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ ಕೋರಲಾಗಿದೆ. ಶಾಲೆಪರ ಹೋರಾಟಗಾರರಾದ ಎಂ. ಮೋಹನ್‍ಕುಮಾರ್‍ಗೌಡ, ಪುರುಷೋ ತ್ತಮ್, ಹೊಸಕೋಟೆ ಬಸವರಾಜು, ಮರಂ ಕಯ್ಯ, ಉಗ್ರನರಸಿಂಹೇಗೌಡ ಮತ್ತಿತ ರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »