ಮೈಸೂರು ಜಿಲ್ಲಾ ಗ್ರಾಮೀಣ ಟಾಸ್ಕ್‍ಫೋರ್ಸ್ ಸಮಿತಿ ಸಭೆ ಮನೆ ಮನೆ ಸಮೀಕ್ಷೆಯಲ್ಲಿ ಶೇ.68.1ರಷ್ಟು ಸಾಧನೆ
ಮೈಸೂರು

ಮೈಸೂರು ಜಿಲ್ಲಾ ಗ್ರಾಮೀಣ ಟಾಸ್ಕ್‍ಫೋರ್ಸ್ ಸಮಿತಿ ಸಭೆ ಮನೆ ಮನೆ ಸಮೀಕ್ಷೆಯಲ್ಲಿ ಶೇ.68.1ರಷ್ಟು ಸಾಧನೆ

June 2, 2021

ಮೈಸೂರು, ಜೂ.1(ಆರ್‍ಕೆಬಿ)- ಮೈಸೂರು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೋವಿಡ್ -19 ಮನೆ ಮನೆ ಸಮೀಕ್ಷಾ ಕಾರ್ಯದಲ್ಲಿ ಗಣನೀಯ ಸಾಧನೆ ಮಾಡಲಾಗಿದ್ದು, ಇದು ವರೆಗೆ ಒಟ್ಟು 3,29,746 ಮನೆಗಳ ಸಮೀಕ್ಷೆ ಮಾಡುವ ಮೂಲಕ ಶೇ.68.1ರಷ್ಟು ಸಾಧನೆ ಮಾಡಲಾಗಿದೆ ಎಂದು ಮೈಸೂರು ಗ್ರಾಮೀಣ ಟಾಸ್ಕ್‍ಫೋರ್ಸ್ ಸಂಚಾಲಕರೂ ಆಗಿ ರುವ ಮೈಸೂರು ಜಿಪಂ ಸಿಇಓ ಎ.ಎಂ. ಯೋಗೀಶ್ ಮಂಗಳವಾರ ಜಿಪಂ ಸಭಾಂ ಗಣದಲ್ಲಿ ನಡೆದ ಗ್ರಾಮೀಣ ಟಾಸ್ಕ್‍ಫೋರ್ಸ್ ಸಮಿತಿಗೆ ಮಾಹಿತಿ ನೀಡಿದರು.

ಜಿಲ್ಲೆಯ ಒಟ್ಟು 8 ತಾಲೂಕುಗಳಲ್ಲಿ 266 ಗ್ರಾಮ ಪಂಚಾಯಿತಿಗಳಿದ್ದು, 1760 ಗ್ರಾಮ ಗಳಿವೆ. ಇದರಲ್ಲಿ 4,84,295 ಒಟ್ಟು ಕುಟುಂಬ ಗಳಿದ್ದು, ಈ ಪೈಕಿ 3,29,746 ಮನೆ ಮನೆ ಸಮೀಕ್ಷೆ ಮಾಡಲಾಗಿದೆ. ಇನ್ನೂ 1,17, 977 ಕುಟುಂಬಗಳ ಮನೆ ಮನೆ ಸಮೀಕ್ಷೆ ಬಾಕಿ ಉಳಿದಿದೆ ಎಂದು ವಿವರಿಸಿದರು.

ಮನೆ ಮನೆ ಸಮೀಕ್ಷೆಯಲ್ಲಿ ತಿ.ನರಸೀ ಪುರ ತಾಲೂಕಿನಲ್ಲಿ 59,969 ಕುಟುಂಬ ಗಳ ಪೈಕಿ 56,046 ಕುಟುಂಬಗಳ ಸಮೀಕ್ಷೆ ನಡೆಸುವ ಮೂಲಕ ಶೇ.93.5ರಷ್ಟು ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಉಳಿದಂತೆ ಹುಣ ಸೂರು ತಾಲೂಕಿನಲ್ಲಿ 66,570 ಕುಟುಂಬ ಗಳ ಪೈಕಿ 61,050 (ಶೇ.91.7), ಪಿರಿಯಾ ಪಟ್ಟಣ ತಾಲೂಕಿನಲ್ಲಿ 50,071 ಕುಟುಂಬಗಳ ಪೈಕಿ 45,248 ಕುಟುಂಬಗಳ ಸಮೀಕ್ಷೆ (ಶೇ. 90.4) ಪೂರ್ಣಗೊಳಿಸಿದೆ. ಉಳಿದಂತೆ ಹೆಚ್.ಡಿ.ಕೋಟೆ- ಶೇ.57.5, ಕೆ.ಆರ್.ನಗರ (ಶೇ.77.4), ಮೈಸೂರು ತಾಲೂಕು- ಶೇ.41.5, ನಂಜನಗೂಡು-ಶೇ.59.7, ಸರಗೂರು- ಶೇ.32.9ರಷ್ಟ ಸಮೀಕ್ಷೆ ನಡೆಸಲಾಗಿದೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮೀಣ ಕೋವಿಡ್ ಟಾಸ್ಕ್‍ಫೋರ್ಸ್ ಸದಸ್ಯರಾದ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತಕುಮಾರ್, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್, ಕಾಂಪೋಸ್ಟ್ ನಿಗಮ ಅಧ್ಯಕ್ಷ ಎಸ್.ಮಹದೇವಯ್ಯ, ಖಾದಿ ನಿಗಮದ ಅಧ್ಯಕ್ಷ ಕೃಷ್ಣಪ್ಪ ಇನ್ನಿತರರು ಮನೆ ಮನೆ ಸಮೀಕ್ಷೆ ಕಾರ್ಯಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಿದರು.

ವೈದ್ಯರ ನಡೆ ಹಳ್ಳಿಯ ಕಡೆಗೆ ಕಾರ್ಯ ಕ್ರಮದಡಿ ಪ್ರತೀ ತಾಲೂಕಿಗೆ 5 ಸಂಚಾರಿ ಆಂಬುಲೆನ್ಸ್ ನೀಡಲಾಗಿದ್ದು, ತಲಾ ಒಬ್ಬ ವೈದ್ಯ, ನರ್ಸ್, ಅಂಗನವಾಡಿ, ಆಶಾ ಕಾರ್ಯಕರ್ತೆ ಹಾಗೂ ಸ್ವ್ಯಾಬ್ ಪರೀಕ್ಷಾ ಸಿಬ್ಬಂದಿ ಇರುವ ಆಂಬುಲೆನ್ಸ್ ಹಳ್ಳಿ ಹಳ್ಳಿ ಗಳಿಗೆ ಹೋಗಿ ಕೋವಿಡ್ ಪರೀಕ್ಷಾ ಕಾರ್ಯ ನಡೆಸಲಿದ್ದು, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಇನ್ನೆರಡು ದಿನದಲ್ಲಿ ಉದ್ಘಾ ಟನೆ ನೆರವೇರಿಸಲಿದ್ದಾರೆ ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತಕುಮಾರ್ ಸಭೆಯ ಬಳಿಕ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಸಭೆಯಲ್ಲಿ ಮನೆ ಮನೆ ಸಮೀಕ್ಷೆ, ಕೋವಿಡ್ ಮಿತ್ರ ಕೇಂದ್ರಗಳಿಗೆ ಟಾಸ್ಕ್ ಫೋರ್ಸ್ ಸಮಿತಿ ಭೇಟಿ, ಕೋವಿಡ್ ಕೇರ್ ಸೆಂಟರ್‍ಗಳಿಗೆ ಭೇಟಿ ನೀಡಿ ಸಮಸ್ಯೆ ಮತ್ತು ವ್ಯವಸ್ಥೆಗಳ ಪರಿಶೀಲನೆ, ಜೊತೆಗೆ ಕೋವಿಡ್ ಲಸಿಕಾ ಕಾರ್ಯವನ್ನು ಪರಿ ಶೀಲಿಸಲು ಸಭೆಯಲ್ಲಿ ತೀರ್ಮಾನಿಸ ಲಾಯಿತು ಎಂದರು. ಇದೇ ವೇಳೆ ಗ್ರಾಮಾಂತರ ಪ್ರದೇಶದಲ್ಲಿ ಸಣ್ಣಪುಟ್ಟ ಕ್ಲಿನಿಕ್‍ಗಳಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿರುವ ಬಗ್ಗೆ ದೂರು ಗಳಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಂತಹ ಕ್ಲಿನಿಕ್‍ಗಳನ್ನು ಮುಚ್ಚಿಸಲು ಸಭೆಯ ಗಮನ ಸೆಳೆದಿದ್ದಾಗಿ ತಿಳಿಸಿದರು. ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಕೃಷ್ಣರಾಜು, ಡಿಹೆಚ್‍ಓ ಡಾ.ಟಿ.ಅಮರ ನಾಥ್ ಇನ್ನಿತರರು ಉಪಸ್ಥಿತರಿದ್ದರು.

Translate »