ಸುಳ್ಯ ದಂತ ವೈದ್ಯಕೀಯ ಕಾಲೇಜು ಹಾಸ್ಟೆಲ್‍ನಲ್ಲಿ  ಮೈಸೂರಿನ ಯುವತಿ ಆತ್ಮಹತ್ಯೆ
ಮೈಸೂರು

ಸುಳ್ಯ ದಂತ ವೈದ್ಯಕೀಯ ಕಾಲೇಜು ಹಾಸ್ಟೆಲ್‍ನಲ್ಲಿ  ಮೈಸೂರಿನ ಯುವತಿ ಆತ್ಮಹತ್ಯೆ

July 5, 2018

ಮೈಸೂರು: ಸುಳ್ಯದ ದಂತ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೈಸೂರು ಯುವತಿ ಕಾಲೇಜಿನ ಹಾಸ್ಟೆಲ್‍ನಲ್ಲಿ ಬುಧವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಟೆರೆಶಿಯನ್ ಕಾಲೇಜು ಸಮೀ ಪದ ಗುರುರಾಜ ಬಡಾವಣೆಯ ಕಾವೇರಿ ಮಾರ್ಗದ ನಿವಾಸಿ, ವಿ.ಕೆ.ಬೇಕರಿ ಮಾಲೀಕ ರಮೇಶ್ ಎಂಬುವರ ಪುತ್ರಿ ಸುಮನ(19) ಆತ್ಮಹತ್ಯೆ ಮಾಡಿಕೊಂಡವರು.

ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ ಸುಮನ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರತಿಷ್ಠಿತ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇಂದು ಬೆಳಿಗ್ಗೆ ಸುಮನ, ಪೋಷಕರಿಗೆ ಕರೆ ಮಾಡಿ, ಪರೀಕ್ಷೆಯನ್ನು ಚೆನ್ನಾಗಿ ಬರೆದಿಲ್ಲ. ಕಡಿಮೆ ಅಂಕ ಬರುತ್ತದೆಂದು ಹೇಳಿದ್ದಾಳೆ.

ಈ ವೇಳೆ ಪೋಷಕರು, ಈ ಬಾರಿ ಕಡಿಮೆ ಅಂಕ ಬಂದರೇನು. ಮುಂದಿನ ಪರೀಕ್ಷೆಯಲ್ಲಿ ಚೆನ್ನಾಗಿ ಪಡೆದರಾಯಿತು ಎಂದು ಸಮಾಧಾನ ಮಾಡಿ ದ್ದಾರೆ. ಆಗ ಕರೆ ಕಟ್ಟಾಗಿದೆ. ನಂತರ ಹಾಸ್ಟೆಲ್‍ನ ತನ್ನ ಕೊಠಡಿಯಲ್ಲಿ ಯಾರು ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾಳೆ. ಹೊರ ಹೋಗಿದ್ದ ಕ್ಲಾಸ್‍ಮೆಟ್ ಕೊಠ ಡಿಗೆ ಬಂದು ನೋಡಿದಾಗ ದುರಂತ ಬೆಳಕಿಗೆ ಬಂದಿದೆ. ನಂತರ ಹಾಸ್ಟೆಲ್ ಸಿಬ್ಬಂದಿ, ಸುಮನ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಈ ಸಂಬಂಧ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು, ಮೃತ ದೇಹದ ಮರಣೋತ್ತರ ಪರೀಕ್ಷೆ ನಂತರ ದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ ಎಂದು ಪೊಲೀ ಸರು ಮಾಹಿತಿ ನೀಡಿದ್ದಾರೆ.

Translate »