ಇನ್ನೆರಡು ದಿನ ಸೋಂಕು ದಾಖಲಾಗದಿದ್ದಲ್ಲಿ ಮೈಸೂರು ಆರೆಂಜ್ ವಲಯ
ಮೈಸೂರು

ಇನ್ನೆರಡು ದಿನ ಸೋಂಕು ದಾಖಲಾಗದಿದ್ದಲ್ಲಿ ಮೈಸೂರು ಆರೆಂಜ್ ವಲಯ

May 13, 2020

ಮೈಸೂರು, ಮೇ 12(ಎಂಟಿವೈ)- ಕೊರೊನಾ ಸೋಂಕು ಮುಕ್ತವಾಗುವ ಹಂತದಲ್ಲಿರುವ ಮೈಸೂರಿಗೆ, ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಹೊರ ರಾಜ್ಯದಿಂದ ಆಗಮಿಸುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.

ಮೈಸೂರು ಜಿಲ್ಲೆಯಲ್ಲಿ ಸತತ 12ನೇ ದಿನವೂ ಹೊಸ ಸೋಂಕಿತ ಪ್ರಕರಣ ಪತ್ತೆಯಾಗಿಲ್ಲ. ಕೋವಿಡ್-19 ಪ್ರೊಟೋ ಕಾಲ್ ಅನುಸಾರ ಇನ್ನೆರಡು ದಿನ ಯಾವುದೇ ಹೊಸ ಪ್ರಕರಣ ದಾಖಲಾಗ ದಿದ್ದರೆ ಸದ್ಯ ರೆಡ್ eóÉೂೀನ್‍ನಲ್ಲಿರುವ ಮೈಸೂರು, ಆರೆಂಜ್ eóÉೂೀನ್ ವ್ಯಾಪ್ತಿಗೆ ಬರುತ್ತದೆ. ನಂತರದಲ್ಲಿ ಮತ್ತಷ್ಟು ನಿರ್ಬಂಧ ಗಳ ಸಡಿಲಿಕೆಯಾಗಬಹುದು. ಸದ್ಯ ವ್ಯಾಪಾರ ವಹಿವಾಟು ಸ್ಥಗಿತವಾಗಿರುವ ಮೈಸೂರಿನ 91 ವಾಣಿಜ್ಯ ರಸ್ತೆಗಳಲ್ಲಿ ಚಟು ವಟಿಕೆ ಆರಂಭಿಸಲು ಅವಕಾಶ ದೊರಕ ಬಹುದು. ಗ್ರಾಮೀಣ ಪ್ರದೇಶದಲ್ಲಿರುವ ಒಂದಷ್ಟು ನಿರ್ಬಂಧಗಳಲ್ಲೂ ಬದಲಾ ವಣೆಯಾಗಬಹುದು. ಸುಮಾರು 50 ದಿನಗಳ ವನವಾಸದಲ್ಲಿರುವ ಜನ, ಹಿಂದಿ ನಂತೆ ಬದುಕು ನಡೆಸಲು ಅನುಕೂಲಕರ ಸ್ಥಿತಿ ನಿರ್ಮಾಣವಾಗಬಹುದು. ಇದ ಕ್ಕಾಗಿ ಮೈಸೂರಿನ ಜನತೆ ಪ್ರಾರ್ಥಿಸುತ್ತಿದ್ದಾರೆ.

ಜುಬಿಲಂಟ್ ಹಾಗೂ ತಬ್ಲಿಘಿ ಜಮಾತ್ ಮೂಲದಿಂದ ಕೊರೊನಾ ಸೋಂಕಿತರ ಸಂಖ್ಯೆ 90ಕ್ಕೆ ತಲುಪಿದಾಗ ಎಲ್ಲರಲ್ಲೂ ಭೀತಿ ಹೆಚ್ಚಾಗಿತ್ತು. ಸದ್ಯ ಈ ಸಂಖ್ಯೆ ಏರಿಕೆಯಾಗಲಿಲ್ಲ. ಗುಣಮುಖರಾಗಿ ಬಿಡುಗಡೆಗೊಳ್ಳುವವರ ಸಂಖ್ಯೆ ಹೆಚ್ಚಾ ಯಿತು. ಈವರೆಗೆ 86 ಜನ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದು, ಇನ್ನುಳಿದ 4 ಮಂದಿ ಸೋಂಕಿತರ ಆರೋಗ್ಯವೂ ಸುಧಾರಿಸಿದ್ದು,ಕೆಲವೇ ದಿನದಲ್ಲಿ ಹೊರ ಬರಬಹುದು. ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು, ಆರೋಗ್ಯ, ಪೊಲೀಸ್ ಇನ್ನಿತರ ಇಲಾಖೆಗಳ ಸಮನ್ವಯ ಪರಿಶ್ರಮದಿಂದ ಮೈಸೂರು ಆರೆಂಜ್ eóÉೂೀನ್ ಹೊಸ್ತಿಲಲ್ಲಿ ನಿಂತಿದೆ. ಆದರೆ ಲಾಕ್‍ಡೌನ್ ಮೂರನೇ ಅವಧಿ ಯಲ್ಲಿ ಕೆಲ ನಿರ್ಬಂಧಗಳಲ್ಲಿ ಸಡಿಲಿಕೆ ಯಾದ್ದರಿಂದ ಕಳೆದ 5 ದಿನಗಳಲ್ಲಿ ಹೊರ ರಾಜ್ಯಗಳಿಂದ 433ಕ್ಕೂ ಹೆಚ್ಚು ಮಂದಿ ಮೈಸೂರಿಗೆ ವಾಪಸ್ಸಾಗಿದ್ದಾರೆ. ಅದರಲ್ಲೂ ಸೋಂಕಿತರು ಹೆಚ್ಚಿರುವ ಮಹಾ ರಾಷ್ಟ್ರ, ತಮಿಳುನಾಡಿನಿಂದಲೂ ಹೆಚ್ಚು ಜನ ಬಂದಿದ್ದಾರೆ. ವಿವಿಧ ರಾಜ್ಯ ಗಳಿಂದ ಆಗಮಿಸಿದ ಎಲ್ಲರಿಗೂ ಚೆಕ್ ಪೋಸ್ಟ್‍ಗಳಲ್ಲೇ

ಸ್ಕ್ರೀನಿಂಗ್‍ಗೆ ಮಾಡಿ , ಅವರ ವೈಯಕ್ತಿಕ ವಿವರ ದಾಖಲಿಸಿಕೊಂಡು, ಫೆಸಿಲೇಟೆಡ್ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿದೆ. 10 ದಿನದ ನಂತರ ಸ್ವ್ಯಾಬ್ ಪರೀಕ್ಷೆ ನಡೆಸಿ, ಸೋಂಕು ದೃಢಪಟ್ಟವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತದೆ.

ಅಲ್ಲದೆ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಉಸಿರಾಟದ ಸಮಸ್ಯೆ(ಎಸ್‍ಎಆರ್‍ಆರ್‍ಐ), ಸರ್ಜರಿಗೆ ಒಳಗಾಗಿರುವವರಲ್ಲಿ ಕೊರೊನಾಗೆ ಹೋಲು ವಂತಹ ರೋಗ ಲಕ್ಷಣ ಕಂಡು ಬಂದರೆ, ಅಂತಹವರ ಸ್ವ್ಯಾಬ್ ಸ್ಯಾಂಪಲ್ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಈವರೆಗೆ ಇಬ್ಬರಲ್ಲಿ ಮಾತ್ರ ಸೋಂಕು ದೃಢವಾಗಿರುವುದರಿಂದ ಮೈಸೂರಿನಲ್ಲಿ ಸಮುದಾಯ ಪ್ರಸರಣದ ಆತಂಕ ದೂರಾಗಿದೆ. ಈವರೆಗೆ 5197 ಮಂದಿ ಮೇಲೆ ನಿಗಾ ಇಡಲಾಗಿತ್ತು. ಇವರಲ್ಲಿ 4760 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. 5484 ಮಂದಿಯ ಸ್ವ್ಯಾಬ್ ಪರೀಕ್ಷೆ ನಡೆಸಿದ್ದು, 90 ಮಂದಿಯಲ್ಲಿ ಸೋಂಕು ದೃಢವಾಗಿತ್ತು. ಇವರಲ್ಲಿ ಇನ್ನು 4 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ.

ಹೊರ ರಾಜ್ಯಗಳಿಂದ ಬರುವವರು ಸ್ಕ್ರೀನಿಂಗ್ ಪರೀಕ್ಷೆ ಹಾಗೂ ಕ್ವಾರಂಟೈನ್‍ನಿಂದ ತಪ್ಪಿಸಿಕೊಳ್ಳಬಾರದು ಎಂದು ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ ಹೋಂ ಕ್ವಾರಂಟೈನ್ ಮಾಡಿದರೆ, ಹೊರಗಡೆ ಓಡಾಡುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕೆ ಎಲ್ಲರನ್ನೂ ಕಡ್ಡಾಯವಾಗಿ ಫೆಸಿಲೇಟೆಡ್(ಲಾಡ್ಜ್) ಕ್ವಾರಂಟೈನ್ ಮಾಡಿ, ನಿಗಾ ವಹಿಸಲಾಗಿದೆ. ಆದರೂ ಸದ್ಯ ಸುರಕ್ಷಿತವಾಗಿರುವ ಮೈಸೂರಿಗೆ ಹೊರ ರಾಜ್ಯಗಳಿಂದ ಹೆಚ್ಚು ಜನ ಆಗಮಿಸುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಭೀತಿಯಿದೆ. ಆದರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿರುವುದರಿಂದ ಈ ಬಗ್ಗೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.

Translate »