ಸಾಂಸ್ಕøತಿಕ ನಗರಿ ಮೈಸೂರಲ್ಲಿ ಕಟ್ಟೆಚ್ಚರ
ಮೈಸೂರು

ಸಾಂಸ್ಕøತಿಕ ನಗರಿ ಮೈಸೂರಲ್ಲಿ ಕಟ್ಟೆಚ್ಚರ

December 3, 2021

ಮೈಸೂರು, ಡಿ.2(ಎಂಟಿವೈ)- ಕೊರೊನಾ ರೂಪಾಂತರಿ `ಒಮಿಕ್ರಾನ್’ ಬೆಂಗಳೂರಲ್ಲಿ ಪತ್ತೆಯಾಗುತ್ತಿದ್ದಂತೆ ಸಾಂಸ್ಕøತಿಕ ನಗರಿ ಮೈಸೂರಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸೋಂಕಿ ನಿಂದಾಗುವ ಜೀವಹಾನಿ ತಡೆಗಟ್ಟಲು ಲಸಿಕೆ ಅಭಿಯಾನ ಚುರುಕುಗೊಳಿಸಲು ಸೂಚಿಸಲಾಗಿದೆ.
ಅಂತರರಾಷ್ಟ್ರೀಯ ಪ್ರಯಾಣಿಕರ ನೇರ ಸಂಪರ್ಕವಿಲ್ಲದಿ ರುವುದರಿಂದ ಮೈಸೂರಿಗೆ ಒಮಿಕ್ರಾನ್ ಸೋಂಕು ಹರಡು ವುದು ವಿರಳ ಎಂಬ ಭಾವನೆಯಿತ್ತು. ಆದರೂ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿತ್ತು. ಈ ನಡುವೆ ಬೆಂಗಳೂರಲ್ಲಿ ಇಬ್ಬರಲ್ಲಿ ರೂಪಾಂತರಿ ಒಮಿಕ್ರಾನ್ ಪತ್ತೆಯಾಗಿರುವುದರಿಂದ ಮೈಸೂರಿನ ಜನರ ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಸೋಂಕು ವ್ಯಾಪಿಸದಂತೆ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಜಿಲ್ಲೆಯ ಜನರ ಹಿತ ಕಾಯಲು ಮುಂದಾಗಿದೆ.

ಲಸಿಕೆ ಪಡೆದುಕೊಂಡು ಜೀವ ಹಾನಿಯಿಂದ ತಪ್ಪಿಸಿಕೊಳ್ಳಿ
-ಡಿಸಿ ಮನವಿ: ಕೊರೊನಾ ಸೋಂಕು, ರೂಪಾಂತರಿಗಳಾದ ಒಮಿಕ್ರಾನ್, ಡೆಲ್ಟಾದಿಂದ ಜಿಲ್ಲೆಯ ಜನರ ಪ್ರಾಣ ರಕ್ಷಿಸಲು ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲಾ ಕ್ರಮ ಕೈಗೊಂಡಿದೆ.

ಆದರೆ ಜನರು ಮಾತ್ರ ಸಹಕರಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ವಿಷಾದಿಸಿದ್ದಾರೆ. `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಸೋಂಕಿನಿಂದ ಪಾರಾಗಲು ಲಸಿಕೆ ಪಡೆಯುವುದೊಂದೇ ಮಾರ್ಗವಾಗಿದೆ. ಆದರೆ ಶೇ.35ರಷ್ಟು ಮಂದಿ ಇಂದಿಗೂ ಎರಡನೇ ಡೋಸ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ. ಎರಡು ಡೋಸ್ ಲಸಿಕೆ ಪಡೆದವರಿಗೆ ಸೋಂಕಿನಿಂದ ಪ್ರಾಣ ಹಾನಿ ತಪ್ಪಿಸಬಹುದು. ಎರಡನೇ ಡೋಸ್ ಪಡೆಯದೇ ಇರುವವರು ಜಿಲ್ಲೆಯಲ್ಲಿ 2 ಲಕ್ಷ ಮಂದಿ ಇದ್ದಾರೆ. ಅದರಲ್ಲೂ ವಿದ್ಯಾವಂತರೇ ಹೆಚ್ಚಾಗಿರುವ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ 1 ಲಕ್ಷ ಮಂದಿ ಎರಡನೇ ಡೋಸ್ ಪಡೆದಿಲ್ಲ. ಒಂದು ಲಸಿಕೆ ಪಡೆದ ನಂತರ ನಾನು ಸದೃಢನಾಗಿದ್ದೇನೆ ಎಂಬ ಭಾವನೆ ಕೆಲವರಲ್ಲಿದೆ. ಇದರಿಂದಾಗಿಯೇ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಎಷ್ಟೇ ಸದೃಢರಾಗಿದ್ದರೂ ಕೊರೊನಾ ಸೋಂಕಿನ ಅಪಾಯದಿಂದ ಪಾರಾಗಲು ಸಾಧ್ಯವಿಲ್ಲ. ಇದು ಎರಡನೇ ಅಲೆಯಲ್ಲಿ ಸ್ಪಷ್ಟವಾಗಿದೆ. ಲಸಿಕೆ ಪಡೆಯದೇ ಇರುವವರು ಎಚ್ಚೆತ್ತುಕೊಂಡು ಸಮೀಪದ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಪ್ರತಿದಿನ 25 ಸಾವಿರ ಮಂದಿಗೆ ಲಸಿಕೆ ಹಾಕುವ ಗುರಿ ನಮ್ಮ ಮುಂದೆ ಇದೆ. ಆದರೆ ಪ್ರಸ್ತುತ ಕೇವಲ 5 ಸಾವಿರ ಮಂದಿ ಮಾತ್ರ ಲಸಿಕೆ ಪಡೆದುಕೊಳ್ಳುತಿದ್ದಾರೆ. ಎಲ್ಲರಿಗೂ ಲಸಿಕೆ ಹಾಕುವುದಕ್ಕಾಗಿ ಜಿಲ್ಲೆಯಲ್ಲಿ 3.8 ಲಕ್ಷ ಡೋಸ್ ಲಸಿಕೆ ದಾಸ್ತಾನು ಇಟ್ಟುಕೊಳ್ಳಲಾಗಿದೆ. ಬೆಂಗಳೂರಲ್ಲಿ ಒಮಿಕ್ರಾನ್ ಪತ್ತೆಯಾಗಿರುವುದನ್ನು ಮೈಸೂರು ಜಿಲ್ಲೆಯ ಜನತೆ ಗಂಭೀರವಾಗಿ ಪರಿಗಣಿಸಬೇಕು. ಆ ಮೂಲಕ ಲಸಿಕೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

Translate »