ಅ.16ರಿಂದ 31ರವರೆಗೆ ಮೈಸೂರು ಲಿಟರರಿ ಫೆಸ್ಟಿವಲ್
ಮೈಸೂರು

ಅ.16ರಿಂದ 31ರವರೆಗೆ ಮೈಸೂರು ಲಿಟರರಿ ಫೆಸ್ಟಿವಲ್

October 13, 2021

ಮೈಸೂರು,ಅ.12(ಪಿಎಂ)-ಮೈಸೂರು ಲಿಟರರಿ ಫೆÇೀರಂ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ಜಂಟಿ ಆಶ್ರಯದಲ್ಲಿ ಅ.16ರಿಂದ 31ರವ ರೆಗೆ `ಮೈಸೂರು ಸಾಹಿತ್ಯ ಸಂಭ್ರಮ-2021 (ಮೈಸೂರು ಲಿಟರರಿ ಫೆಸ್ಟಿವಲ್) ವಚ್ರ್ಯುಯಲ್ ಆಗಿ ನಡೆಯಲಿದೆ. ಬಹುತೇಕ ಸಾಹಿತ್ಯ ಗೋಷ್ಠಿಗಳು ಆನ್‍ಲೈನ್‍ನಲ್ಲಿ ನಡೆದರೆ, ಕೆಲವು ವಚ್ರ್ಯುಯಲ್ ಜೊತೆಗೆ ಭೌತಿಕವಾಗಿಯೂ ನಡೆಯಲಿವೆ.

ಮೈಸೂರಿನ ನಜರ್‍ಬಾದಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಅ.5 ರಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆ ಯರ್ ಮೈಸೂರು ಲಿಟರರಿ ಫೆಸ್ಟಿವಲ್‍ಗೆ ಮುಂಗಡವಾಗಿ ಚಾಲನೆ ನೀಡಿ ದರು. ಈ ಸಾಹಿತ್ಯೋತ್ಸವದಲ್ಲಿ ಆಂಗ್ಲ ಸಾಹಿತ್ಯದ ಪ್ರಖ್ಯಾತ ಕಾದಂಬರಿಕಾರ ಲಂಡನ್‍ನ ಜೆಫ್ರಿ ಆರ್ಚರ್ ಸೇರಿದಂತೆ ದೇಶ-ವಿದೇಶದ ಪ್ರಸಿದ್ಧ ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿಯೂ ಲೇಖಕರು, ಸಾಹಿತಿಗಳ ಗೋಷ್ಠಿಗಳು ನಡೆಯಲಿವೆ. ಈ ಕುರಿತಂತೆ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಮೈಸೂರು ಲಿಟರರಿ ಫೆÇೀರಂ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ಸಂಸ್ಥಾಪಕ ಟ್ರಸ್ಟಿ ಶುಭಾ ಸಂಜಯ್ ಅರಸ್, ಸತತವಾಗಿ ಆಯೋಜಿಸು ತ್ತಿರುವ 5ನೇ ಸಾಹಿತ್ಯೋತ್ಸವ ಇದಾಗಿದೆ. ಈ ವರ್ಚು ಯಲ್ ಸಂಭ್ರಮದಲ್ಲಿ ಭಾಗವಹಿಸಲು ಜಗತ್ತಿನ ಎಲ್ಲಾ ಭಾಗದವರಿಗೂ ಅವಕಾಶವಿದೆ ಎಂದರು.
ಅಭಿನೇತ್ರಿ ಶಬಾನಾ ಆಜ್ಮೀ ತಮ್ಮ ಅನುಭವ-ಅನಿಸಿಕೆಗಳನ್ನು ನಮ್ಮೊಡನೆ ಹಂಚಿಕೊಳ್ಳಲಿದ್ದಾರೆ. ಮುಂಬೈನಿಂದ ಅಶ್ವಿನ್ ಸಾಂಘಿ, ಲಂಡನ್‍ನಿಂದ ಆಡ್ರಿಯನ್ ಲೇವಿ, ಅಮೆರಿಕಾದಿಂದ ನವಾಜ್ ಅಹ ಮ್ಮದ್, ಅಲಕಾ ಜೋಷಿ ಅವರು ಪಾಲ್ಗೊಂಡು ಸಾಹಿತ್ಯೋತ್ಸವದ ಸಡಗರ ಹೆಚ್ಚಿಸಲಿದ್ದಾರೆ. ನಾಗಾಲ್ಯಾಂಡಿನಿಂದ ಕಿರಿಯ ಲೇಖಕಿ ಅವಿನ್ಯೋ ಕೀರೆ ಅವರು ಹೊಸ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಿರುತೆರೆಯಲ್ಲಿ ನಟನೆ-ನಿರ್ದೇಶನದಲ್ಲಿ ತಮ್ಮದೇ ಛಾಪು ಮೂಡಿಸಿರುವ ಟಿ.ಎನ್.ಸೀತಾರಾಮ್ ತಮ್ಮ ಕಥಾಹಂದರಗಳ ಕುರಿತು ಮಾತನಾಡಲಿ ದ್ದಾರೆ. ಕರ್ನಾಟಕದ ಚಿರಪರಿಚಿತ ಪರಿಸರ ತಜ್ಞ ಜೋಡಿಯಾದ ಕೃಪಾಕರ್ ಮತ್ತು ಸೇನಾನಿಯವರು ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

Translate »