ಮೈಸೂರು ಮೇಯರ್ ಚುನಾವಣೆ; ಕಾಂಗ್ರೆಸ್ ನಾಯಕರಿಂದ ಮಾಹಿತಿ ಪಡೆದ ಎಐಸಿಸಿ ವೀಕ್ಷಕ
ಮೈಸೂರು

ಮೈಸೂರು ಮೇಯರ್ ಚುನಾವಣೆ; ಕಾಂಗ್ರೆಸ್ ನಾಯಕರಿಂದ ಮಾಹಿತಿ ಪಡೆದ ಎಐಸಿಸಿ ವೀಕ್ಷಕ

March 3, 2021

ಮೈಸೂರು, ಮಾ.2(ಎಸ್‍ಪಿಎನ್)- ಮೈಸೂರು ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಚುನಾ ವಣೆ ಮುಗಿದ ನಂತರ ಕಾಂಗ್ರೆಸ್‍ನಲ್ಲಿ ಉಂಟಾಗಿರುವ ಗೊಂದಲಗಳ ಬಗ್ಗೆ ಮಾಹಿತಿ ಪಡೆಯಲು ಎಐಸಿಸಿ ವೀಕ್ಷಕ ಮಧು ಯಾಸ್ಕಿಗೌಡ್ ಅವರು ಮಂಗಳ ವಾರ ಮೈಸೂರಿನಲ್ಲಿ ಸಭೆ ನಡೆಸಿದರು.

ಜಲದರ್ಶಿನಿಯಲ್ಲಿ ಮೈಸೂರು ನಗರ ಪಾಲಿಕೆ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾ ಧ್ಯಕ್ಷ ಆರ್.ಧ್ರುವನಾರಾಯಣ್, ಕಾಂಗ್ರೆಸ್ ಮೈಸೂರು ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್ ಸೇರಿದಂತೆ ಇತರೆ ಕೆಲವು ಮುಖಂಡರಿಂದ ಫೆ.24ರ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಬಳಿಕ ಪಕ್ಷದಲ್ಲಿ ಉಂಟಾದ ಗೊಂದಲ ಬಗ್ಗೆ ಮಾಹಿತಿ ಪಡೆದರು.

ಕಾಂಗ್ರೆಸ್‍ನಿಂದ ಮೇಯರ್ ಅಭ್ಯರ್ಥಿ ಯಾಗಿದ್ದ ಶಾಂತಕುಮಾರಿ, ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯೆ ಪುಷ್ಪಲತಾ ಜಗ ನ್ನಾಥ್, ಅಯೂಬ್ ಖಾನ್, ಗೋಪಿ, ಶೋಭ ಮತ್ತಿತರೆ ಸದಸ್ಯರು ಘಟನೆ ಸಂಬಂಧ ಮಾಹಿತಿ ನೀಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತ ನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್, ಫೆ.24ರಂದು ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಉಳಿಸಿಕೊಳ್ಳಲು ಜೆಡಿಎಸ್ ನಾಯಕ ರನ್ನು ಮನವೊಲಿಸುವಂತೆ ಶಾಸಕ ತನ್ವೀರ್ ಸೇಠ್ ಅವರಿಗೆ ಪೂರ್ಣ ಜವಾಬ್ಬಾರಿ ವಹಿಸ ಲಾಗಿತ್ತು. ನಾನು, ಶಾಸಕ ತನ್ವೀರ್ ಸೇಠ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತಿ ತರರು ಜೆಡಿಎಸ್ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಸಾ.ರಾ. ಮಹೇಶ್ ಸೇರಿದಂತೆ ಇತರೆ ಮುಖಂಡರನ್ನು ಭೇಟಿಯಾಗಿ ಹಿಂದಿನ ಒಪ್ಪಂದದಂತೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಮನವಿ ಮಾಡಿದೆವು. ಈ ನಿಟ್ಟಿನಲ್ಲಿ ಕೊನೆ ಕ್ಷಣದವರೆಗೂ ಪ್ರಯತ್ನ ಪಟ್ಟೆವು. ಆದರೆ, ಅದು ಸಾಧ್ಯವಾಗಲಿಲ್ಲ ಎಂದರು.

ಕೊನೆ ಕ್ಷಣದಲ್ಲಿ ಬಿಜೆಪಿಯವರೆಗೆ ಮೇಯರ್ ಸ್ಥಾನ ಹೋಗಬಾರದು ಎಂಬ ಏಕೈಕ ಉದ್ದೇಶದಿಂದ ಶಾಸಕ ತನ್ವೀರ್ ಸೇಠ್ ಅವರು, ಮೇಯರ್ ಸ್ಥಾನ ಜೆಡಿಎಸ್‍ಗೆ ಹಾಗೂ ಉಪ ಮೇಯರ್ ಸ್ಥಾನ ನಮ್ಮ ಪಕ್ಷಕ್ಕೆ ಉಳಿಸಿಕೊಳ್ಳುವ ನಿರ್ಧಾ ರಕ್ಕೆ ಬಂದಿದ್ದಾರೆ. ನಿರ್ಧಾರಕ್ಕೆ ಬರುವ ಮುನ್ನ ಪಕ್ಷದ ಅಧ್ಯಕ್ಷರು ಹಾಗೂ ಸಿದ್ದರಾಮಯ್ಯ ನವರ ಗಮನಕ್ಕೆ ತಂದು ಮುಂದುವರೆ ದಿದ್ದರೆ ಚೆನ್ನಾಗಿತ್ತು ಎಂಬುದು ನನ್ನ ಅಭಿಪ್ರಾಯ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಈ ಘಟನೆ ನಡೆದ ನಂತರ ಶಾಸಕ ತನ್ವೀರ್ ಸೇಠ್ ಅವರ ಬೆಂಬಲಿಗರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಶಾಸಕ ತನ್ವೀರ್ ಸೇಠ್, ಘಟನೆ ಸಂಬಂಧ ಮಾಧ್ಯಮ ಗಳಿಗೆ ಹೇಳಿಕೆ ನೀಡಿದರು. ಈ ಸನ್ನಿವೇಶ ವನ್ನು ಸ್ಪಲ್ಪ ಜಾಗೃತಿಯಿಂದ ನಿಭಾಯಿಸಿ ದ್ದರೆ, ಸಮಸ್ಯೆ ಇಷ್ಟೊಂದು ಜಟಿಲ ವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಮಾಜಿ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಹಾಗೂ ಅವರ ವಿರುದ್ಧವೇ ಧಿಕ್ಕಾರ ಕೂಗಿರುವುದನ್ನು ಪಕ್ಷದ ಹೈಕ ಮಾಂಡ್ ಬಹಳ ಗಂಭೀರವಾಗಿ ಪರಿಗಣಿ ಸಿದೆ. ಹಾಗಾಗಿ ಫೆ.24ರ ಘಟನಾವಳಿ ಬಗ್ಗೆ ಪೂರ್ಣ ವಿವರವನ್ನು ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು ಸೇರಿದಂತೆ ಇತರೆ ಮುಖಂಡರಿಂದ ಪಡೆದು ಕರ್ನಾಟಕದಲ್ಲಿನ ಪಕ್ಷದ ಉಸ್ತುವಾರಿ ರಣದೀಪ್ ಸುರ್ಜೆ ವಾಲಾ ಅವರಿಗೆ ಮಧು ಯಾಸ್ಕಿ ಗೌಡ್ ಅವರು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ವೀಕ್ಷಕ ಮಧು ಯಾಸ್ಕಿ ಗೌಡ್ ಅವರನ್ನು ಪಕ್ಷದ ಮೈಸೂರು ಘಟಕದಿಂದ ಸನ್ಮಾನಿಸಲಾಯಿತು.

 

 

Translate »