ಮೈಸೂರು ಪೆÇಲೀಸ್ ಶ್ವಾನ ಪಡೆಯ ಬಾಂಬ್ ಪತ್ತೆ ದಳದ ‘ಲಕ್ಕಿ’ ಇನ್ನಿಲ
ಮೈಸೂರು

ಮೈಸೂರು ಪೆÇಲೀಸ್ ಶ್ವಾನ ಪಡೆಯ ಬಾಂಬ್ ಪತ್ತೆ ದಳದ ‘ಲಕ್ಕಿ’ ಇನ್ನಿಲ

October 23, 2020

ಮೈಸೂರು, ಅ.22- ಮೈಸೂರಿನ ಪೆÇಲೀಸ್ ಶ್ವಾನ ದಳದಲ್ಲಿದ್ದ ಹೆಣ್ಣು ನಾಯಿ ‘ಲಕ್ಕಿ’ ಸಾವಿಗೀಡಾಗಿದೆ. ಪೊಲೀಸ್ ಶ್ವಾನ ಪಡೆಯ ಸಿಬ್ಬಂದಿಯಾಗಿ 9 ಸಾವಿರ ರೂ ವೇತನ ಪಡೆಯುತ್ತಿದ್ದ ‘ಲಕ್ಕಿ’ ಬಹಳ ಚತುರ ನಾಯಿ ಎಂದೇ ಹೆಸರಾಗಿತ್ತು.

ಹೆಡ್ ಕಾನ್‍ಸ್ಟೆಬಲ್‍ಗಳಾದ ಮಂಜುನಾಥ್ ಹಾಗೂ ಮೂರ್ತಿ ಉಸ್ತುವಾರಿಯಲ್ಲಿ ಲಕ್ಕಿ ಕಾರ್ಯ ನಿರ್ವಹಿಸುತ್ತಿತ್ತು. ನಗರದ ವ್ಯಕ್ತಿಯೊಬ್ಬರಿಂದ ಈ ಶ್ವಾನವನ್ನು ಖರೀದಿಸಿದ್ದ ಜಿಲ್ಲಾ ಶ್ವಾನ ದಳದ ಪೆÇಲೀಸರು, ಅದಕ್ಕೆ `ಲಕ್ಕಿ’ ಎಂದು ಹೆಸರಿಟ್ಟಿದ್ದರು. ಕಾರ್ಯ ಆರಂಭಿಸಿದ ಕೆಲವೇ ದಿನಗಳಲ್ಲಿ ಲಕ್ಕಿ ಕೇವಲ ಮೈಸೂರು ಮಾತ್ರವಲ್ಲ ಬೇರೆ ಜಿಲ್ಲೆಗಳಲ್ಲೂ ಕರ್ತವ್ಯಕ್ಕೆ ಹಾಜರಾಗಿದ್ದಳು. ಮಂಗಳೂರು, ಮಂಡ್ಯ, ಹಾಸನ, ಚಿಕ್ಕಮಗಳೂರು ಹೀಗೆ ಅನೇಕ ಜಿಲ್ಲೆಗಳಲ್ಲಿ ಗಣ್ಯರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಬಾಂಬ್ ತಪಾಸಣೆ ಕೆಲಸವನ್ನು ಲಕ್ಕಿ ಯಶಸ್ವಿಯಾಗಿ ನಿರ್ವಹಿಸಿದ್ದಳು. ಮೈಸೂರು ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಚಾಮುಂಡಿ ಬೆಟ್ಟ, ಅರಮನೆಯಲ್ಲಿನ ಬಾಂಬ್ ತಪಾಸಣೆ ಹೊಣೆಯೂ ಲಕ್ಕಿ ಮೇಲಿತ್ತು. ಈ ಎಲ್ಲಾ ಕಾರ್ಯವನ್ನೂ ಆಕೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು.

ಬೆಂಗಳೂರಿನ ನುರಿತ ತಜ್ಞರಿಂದ ತರಬೇತಿ ಕೊಡಿಸಲಾಗಿತ್ತು. 6 ತಿಂಗಳ ಕಠಿಣ ತರಬೇತಿ ನಂತರ ಜಿಲ್ಲಾ ಶ್ವಾನ ದಳದಲ್ಲಿ ಸ್ಪೋಟಕ ತಪಾಸಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. 2018ರಲ್ಲಿ ನಡೆದ ದಕ್ಷಿಣ ವಲಯ ಪೆÇಲೀಸ್ ಕ್ರೀಡಾಕೂಟದಲ್ಲಿ ಶೌರ್ಯ, ಜಾಣ್ಮೆ ಪ್ರದರ್ಶಿಸಿದ್ದ ಲಕ್ಕಿ ಕಂಚಿನ ಪದಕ ಗೆದ್ದಿದ್ದಳು. ಹಲವಾರು ಅಣಕು ಪ್ರದರ್ಶನದಲ್ಲಿ ಬಾಂಬ್ ಪತ್ತೆ ಮಾಡುವಲ್ಲಿ ಎತ್ತಿದ ಕೈ ಆಗಿದ್ದ ಲಕ್ಕಿ, ಪೆÇಲೀಸ್ ಇಲಾಖೆಯ ಅಧಿಕಾರಿಗಳಿಗೂ ಅಚ್ಚುಮೆಚ್ಚಾಗಿದ್ದಳು. ಆಕೆಯ ಸೌಮ್ಯ ಸ್ವಭಾವವನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಅನಾರೋಗ್ಯಕ್ಕೆ ತುತ್ತಾಗಿ ಸಾವಿಗೀಡಾಗಿದ್ದು, ಪೆÇಲೀಸ್ ಇಲಾಖೆಗೆ ತುಂಬಲಾರದ ನಷ್ಟವುಂಟಾಗಿದೆ. ಲಕ್ಕಿ ನಿಧನಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಎಆರ್‍ನ ಡಿವೈಎಸ್‍ಪಿ ಸತೀಶ್, ಶ್ವಾನ ದಳದ ಸಿಬ್ಬಂದಿ ಅಂತಿಮ ಗೌರವ ನಮನ ಸಲ್ಲಿಸಿದ್ದಾರೆ. ಲಕ್ಕಿಯ ಅಂತ್ಯಸಂಸ್ಕಾರವನ್ನು ಶ್ವಾನದಳದ ಆವರಣದಲ್ಲೇ ವಿಧಿ ವಿಧಾನಗಳಂತೆ ನೆರವೇರಿಸಲಾಯಿತೆಂದು ಹೇಳಲಾಗಿದೆ.್ಲ

Translate »