ಕುತ್ತುವರಸೆನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ಮೈಸೂರಿಗ
ಮೈಸೂರು

ಕುತ್ತುವರಸೆನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ಮೈಸೂರಿಗ

July 9, 2020

ಮೈಸೂರು, ಜು.8- ಕುತ್ತುವರಸೆ (ಭಾರತೀಯ ಸಮರ ಕಲೆಗಳ ಒಂದು ಪ್ರಾಕಾರ)ಯ, ಪರಾರ್ಥಃ ಮಹಾಗುರು ಎಂದು ಕರೆಸಿಕೊಳ್ಳುವ ಎಸ್.ಕೃಷ್ಣ ಮೂರ್ತಿಯವರು ಇತ್ತೀಚೆಗಷ್ಟೆ ಓಶೋ ಕಾಯ್ ಮಾರ್ಷಲ್ ಆಟ್ರ್ಸ್ ಅಕಾಡೆಮಿಯ ಗ್ರ್ಯಾಂಡ್ ಮಾಸ್ಟರ್ ಹಾಗೂ ಸಂಸ್ಥಾಪಕ ರಾಗಿರುವ ಡಾ.ಡಿ.ಮುನಿರುದ್ದಿನ್ ಶರೀಫ್ ರವರಿಂದ ‘ಗ್ರ್ಯಾಂಡ್ ಮಾಸ್ಟರ್’ ಬಿರುದನ್ನು ಪಡೆಯುವ ಮೂಲಕ ಭಾರತದ ಮಾರ್ಷಲ್ ಆಟ್ರ್ಸ್‍ನ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗಿ ದ್ದಾರೆ. ಕೃಷ್ಣಮೂರ್ತಿಯವರ ಈ ಸಾಧನೆಯನ್ನು ನೋಬೆಲ್ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್ ಗುರುತಿಸಿ ಜುಲೈ 1ರಂದು ಹೊಸ ವಿಶ್ವ ದಾಖಲೆಯೆಂದು ಪರಿಗಣಿಸಿ ತನ್ನ ನೋಬೆಲ್ ಬುಕ್ ಆಫ್ ವರ್ಡ್ ರೆಕಾಡ್ರ್ಸ್‍ನಲ್ಲಿ ದಾಖಲಿಸಿಕೊಂಡಿತು. ಮಾರ್ಷಲ್ ಆಟ್ರ್ಸ್‍ನಲ್ಲಿ ಮಾಡಿರುವ ಸಾಧನೆಗೆ ಇವರಿಗೆ ಶೌರ್ಯ ರತ್ನ ರಾಜ್ಯ ಪ್ರಶಸ್ತಿ, ಕರ್ನಾಟಕ ವಿಕಾಸ ರತ್ನ ರಾಜ್ಯ ಪ್ರಶಸ್ತಿ, ಭಾರತ ವಿಕಾಸ ರತ್ನ ರಾಷ್ಟ್ರ ಪ್ರಶಸ್ತಿ, ಯುವ ಭಾರತ ಗೌರವ ರಾಷ್ಟ್ರ ಪ್ರಶಸ್ತಿ, ಅವಾರ್ಡ್ ಆಫ್ ಎಕ್ಸಲೆನ್ಸ್ ಇನ್ ಇಂಟರ್‍ನ್ಯಾಷನಲ್ ಹಾಲ್ ಆಫ್ ಫೇಮ್ (ಮಾಸ್ಟರ್ ಆಫ್ ದಿ ಇಯರ್), ಭಾರತೀಯ ಮಾರ್ಷಲ್ ಆಟ್ರ್ಸ್ ಅಥಾರಿಟಿಯ ಮಾನ್ಯತೆ ದೊರಕಿದೆ.

ಭಾರತದ ಅತ್ಯುತ್ತಮ ಮಾರ್ಷಲ್ ಆಟ್ರ್ಸ್ ತರಬೇತುದಾರರಲ್ಲಿ ಇವರು ಒಬ್ಬರು. ತಮ್ಮ ಏಳನೇ ವಯಸ್ಸಿನಿಂದಲೇ ಮಾರ್ಷಲ್ ಆಟ್ರ್ಸ್‍ನ ಅಭ್ಯಾಸ ಮಾಡುತ್ತಿರುವ ಕೃಷ್ಣಮೂರ್ತಿಯವರಿಗೆ ಇಪ್ಪತ್ತೇಳು ವರ್ಷಗಳ ಅನುಭವವಿದೆ. ಓಶೋ ಕಾಯ್ ಮಾರ್ಷಲ್ ಆಟ್ರ್ಸ್ ಅಕಾಡೆಮಿಯಿಂದ ಮಾರ್ಷಲ್ ಆಟ್ರ್ಸ್‍ನಲ್ಲಿ ಎಂಟನೇ ಬ್ಲ್ಯಾಕ್ ಬೆಲ್ಟ್ ಡಿಗ್ರಿ ಪಡೆದಿರುವ ಇವರು ಹಲವಾರು ಜಿಲ್ಲಾ, ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಮಾರ್ಷಲ್ ಆಟ್ರ್ಸ್ ಕ್ಷೇತ್ರದ ಪ್ರಮುಖರಲ್ಲಿ ಒಬ್ಬರಾದ ಇವರು ಕರ್ನಾಟಕ ರಾಜ್ಯ ಕರಾಟೆ ಅಸೋಸಿ ಯೇಷನ್‍ನ ರಾಜ್ಯ ಕಾರ್ಯದರ್ಶಿಗಳಾಗಿ, ಭಾರತೀಯ ಕರಾಟೆ ಅಸೋಸಿಯೇಷನ್‍ನ ರಾಷ್ಟ್ರೀಯ ವೈಸ್ ಪ್ರೆಸಿಡೆಂಟ್ ಆಗಿ, ವರ್ಡ್ ಫುಲ್ ಕಾಂಟ್ಯಾಕ್ಟ್ ಕರಾಟೆ ಫೆಡ ರೇಷನ್‍ನ ಸೆಕ್ರೆಟರಿ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

Translate »