ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಾ ಅಧಿವೇಶನ
ಮೈಸೂರು

ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಾ ಅಧಿವೇಶನ

December 18, 2022

ಮೈಸೂರು, ಡಿ.17(ಎಸ್‍ಬಿಡಿ)- ಲಿಂಗಾ ಯತ ಪ್ರತ್ಯೇಕ ಧರ್ಮಕ್ಕಾಗಿ ಆಗ್ರಹಿಸಿ ಮುಂದಿನ ಜನವರಿಗೆ ಬೀದರ್‍ನಲ್ಲಿ `ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಾ ಅಧಿವೇಶನ’ ಆಯೋಜಿಸಲು ಜಾಗತಿಕ ಲಿಂಗಾಯತ ಮಹಾಸಭಾ ನಿರ್ಧರಿಸಿದೆ.

ಮೈಸೂರಿನ ಹೊಸಮಠದಲ್ಲಿ ಶನಿವಾರ ಜಾಗತಿಕ ಲಿಂಗಾಯತ ಮಹಾಸಭಾದ 2022-23ನೇ ಸಾಲಿನ ತೃತೀಯ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಪದಾಧಿಕಾರಿಗಳು ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರೂ ಆದ ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಎಸ್.ಎನ್. ಕೆಂಪೇಗೌಡರ ಮಾತನಾಡಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮುಂದುವರೆಯ ಲಿದ್ದು, ಜನವರಿ ಕೊನೆಯ ವಾರ ಬೀದರ್‍ನಲ್ಲಿ ರಾಜಕೀಯೇತರ ಮಹಾ ಅಧಿವೇಶನ ಆಯೋ ಜಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾ ಗಿದೆ. ಜೊತೆಗೆ ಬಸವತತ್ವ ವಿರೋಧಿಗಳಿಗೆ ಸಂದರ್ಭಾನುಸಾರ ತಕ್ಕ ಉತ್ತರ ನೀಡುವ ನಿಟ್ಟಿ ನಲ್ಲೂ ಹಲವು ನಿರ್ಣಯಗಳನ್ನು ಕೈಗೊಳ್ಳಲಾ ಗಿದೆ ಎಂದರು. ನಾವು ಹಿಂದೂಸ್ತಾನದ ಲಿಂಗಾ ಯತ ಧರ್ಮೀಯರು ಎಂದು ಹೆಮ್ಮೆಯಿಂದ ಹೇಳುತ್ತೇವೆ. ಹಾಗೆಯೇ ವೀರಶೈವ ಎನ್ನುವುದು ಧರ್ಮವಲ್ಲ ಅದು ಲಿಂಗಾಯತ ಧರ್ಮದ ನೂರೆಂಟು ಪಂಗಡಗಳಲ್ಲಿ ಒಂದು. ಆದರೆ ಇತ್ತೀಚಿನ ಬೆಳ ವಣಿಗೆಯಲ್ಲಿ ವೀರಶೈವ-ಲಿಂಗಾಯತ ಎಂದು ಜೋಡಿಸಿಕೊಂಡು ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿ ರುವುದು ಗಮನಕ್ಕೆ ಬಂದಿದೆ. ಇದನ್ನು ಲಿಂಗಾಯತ ಮಹಾಸಭಾ ವಿರೋಧಿಸುತ್ತದೆ ಎಂದು ಹೇಳಿದರು.

ಲಿಂಗಾಯತರು ಹಾಗೂ ಲಿಂಗಾಯತ ಮಠಾ ಧೀಶರಿಂದ ಧರ್ಮೀಯರ ಜ್ವಲಂತ ಸಮಸ್ಯೆಗಳಿಗೆ ಸಮರ್ಪಕ ಸ್ಪಂದನೆ ವ್ಯಕ್ತವಾಗುತ್ತಿದೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಭೆ ಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ನೂರಕ್ಕೂ ಹೆಚ್ಚು ಜನ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. `ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯ ರಿಲ್ಲ’ ಎಂಬ ಬಸವತತ್ವವನ್ನು ಹೇಳುವ ಕೆಲ ಮಠಾ ಧೀಶರು ಹಾಗೂ ರಾಜಕಾರಣಿಗಳು ಅದಕ್ಕೆ ವಿರುದ್ಧ ವಾಗಿ ನಡೆದು ಬಸವಣ್ಣನವರಿಗೂ ದ್ರೋಹ ಮಾಡು ತ್ತಿದ್ದಾರೆ. ಅನೈತಿಕ ಚಟುವಟಿಕೆ ಸಂಬಂಧಿತ ಪ್ರಕರಣಗಳ ಬಗ್ಗೆ ನಿರ್ಣಯಿಸುವ ಹಕ್ಕು ನ್ಯಾಯಾಲಯಕ್ಕಿದೆ. ಇದರಲ್ಲಿ ಮಹಾಸಭಾ ಮಧ್ಯಪ್ರವೇಶ ಮಾಡಬಾರದು ಎಂದು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಖಂಡ್ರೆ ವಿರುದ್ಧ ಕಿಡಿ: ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಮಾತನಾಡಿ, ಅಖಿಲ ಭಾರತ ವೀರಶೈವ ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ವಿರಕ್ತ ಮಠಗಳ ಮಠಾಧೀಶರು ನಾಚಿಕೆಪಡಬೇಕೆಂದಿ ರುವುದು ಖಂಡನೀಯ. ಅವರಿಗೆ ಐತಿಹಾಸಿಕ ಸಂಗತಿಗಳ ಅರಿವಿಲ್ಲ. ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಕರಾದ ಶ್ರೀ ಹಾನಗಲ್ ಕುಮಾರಸ್ವಾಮಿ ಅವರು ವಿರಕ್ತ ಮಠದ ಸಂಪ್ರ ದಾಯ ಅನುಸರಿಸುತ್ತಿದ್ದರು. ಅವರೆಂದೂ ವಿರಕ್ತ ಮಠ ಪರಂಪರೆಯನ್ನು ವಿರೋಧಿಸಿದವರಲ್ಲ. ಏನೂ ತಿಳಿಯದೆ ಮಾತನಾಡುವ ಈಶ್ವರ ಖಂಡ್ರೆ ಹಾಗೂ ಅದರ ಅಧ್ಯಕ್ಷರಾದ ಶಾಮನೂರು ಶಿವ ಶಂಕರಪ್ಪ ನಾಚಿಕೆಪಡಬೇಕು. ಶಾಮನೂರು ನನ್ನ ವಿರುದ್ಧ ಏಕವಚನದಲ್ಲಿ ನಿಂದಿಸಿದ್ದಾರೆ. ನಾನು ನವ ತರುಣನಲ್ಲ ಆದರೆ ಅವರಷ್ಟು ವೃದ್ಧನಲ್ಲ. ಹಾಗಾಗಿ ಅವರ ಕೋಪ ವಯಸ್ಸಿನ ಗುಣವೆಂದು ಸುಮ್ಮನಿದ್ದೇನೆ. ನುಂಗಿ ನೀರು ಕುಡಿದಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಒಂದೇ ಒಂದು ಉದಾ ಹರಣೆ ನೀಡಿದರೂ ಅವರ ಸೇವಕನಾಗುತ್ತೇನೆ. ಆದರೆ ಅವರು ಬೃಹತ್ ಆಸ್ಪತ್ರೆ ನಿರ್ಮಾಣಕ್ಕೆ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಅದರ ನೀರನ್ನೇ ಕುಡಿದಿದ್ದಾರೆ. ಇಂತಹ ನೂರಾರು ಪ್ರಕರಣಗಳನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದರು.

2 ಲಕ್ಷ ಜನರ ನಿರೀಕ್ಷೆ: ಲಿಂಗಾಯತ ಮಹಾಸಭಾ ಬೀದರ್ ಜಿಲ್ಲಾಧ್ಯಕ್ಷ ಬಸವರಾಜ ದನ್ನೂರು ಮಾತನಾಡಿ, ಬೀದರ್ ಜಿಲ್ಲೆಯಿಂದಲೇ 2017ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಆರಂಭವಾಗಿ ರಾಷ್ಟ್ರಾದ್ಯಂತ ಸಂಚಲನವಾಗಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರಕ್ಕೆ ಶಿಫಾರಸು ಮಾಡಿದರಾದರೂ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ. ಇದೀಗ ಬಸವಕಲ್ಯಾಣದಿಂದಲೇ ರಾಷ್ಟ್ರದುದ್ದಕ್ಕೂ ಪ್ರತ್ಯೇಕ ಧರ್ಮದ ಕಹಳೆ ಮೊಳಗಲಿದೆ. ಜನವರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಾ ಅಧಿವೇಶನದಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆಯಿದೆ. ಇದಕ್ಕೂ ಪೂರ್ವದಲ್ಲಿ ಜ.12ರಿಂದ 14ರವರೆಗೆ ಕೂಡಲಸಂಗಮದಲ್ಲಿ 36ನೇ ಶರಣ ಮೇಳ ಜರುಗಲಿದೆ ಎಂದು ತಿಳಿಸಿದರು.

ಕಳಂಕರಹಿತರಾದರೆ ನಮ್ಮವರು: ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಜಿ.ಬಿ.ಪಾಟೀಲ್ ಚಿತ್ರದುರ್ಗದ ಮುರುಘಾಶ್ರೀಗಳ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಗುರುಗಳು ಕಳಂಕರಹಿತರಾಗಿರಬೇಕು ಎನ್ನುವುದು ಲಿಂಗಾಯತರ ಆಶಯ. ಶ್ರೀಗಳ ವಿರುದ್ಧದ ಆಪಾದನೆ ಬಗ್ಗೆ ನ್ಯಾಯಾಲಯ ತೀರ್ಮಾನಿಸುತ್ತದೆ. ಅಲ್ಲಿಯವರೆಗೆ ಶ್ರೀಗಳಿಗೆ ಬೆಂಬಲ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಈಗಾಗಲೇ ತೀರ್ಮಾನಿಸಲಾಗಿದೆ. ಶ್ರೀಗಳು ಕಳಂಕರಹಿತರಾಗಿ ಹೊರಬಂದರೆ ನಮ್ಮವರಾಗುತ್ತಾರೆ. ನ್ಯಾಯಾಲಯ ಶಿಕ್ಷೆ ವಿಧಿಸಿದರೆ ಅವರು ಅನುಭವಿಸುತ್ತಾರೆ ಎಂದರು. ಈ ವೇಳೆ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ರಾಷ್ಟ್ರೀಯ ಬಸವಸೇನೆ ಅಧ್ಯಕ್ಷ ಶಂಕರ್ ಗುಡಸ್, ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಮೈಸೂರು ಜಿಲ್ಲಾಧ್ಯಕ್ಷ ಶರಣ ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಮರಪ್ಪ ಸೇರಿದಂತೆ ಸುಮಾರು 20 ಜಿಲ್ಲೆಗಳ ಪದಾಧಿಕಾರಿಗಳು ಹಾಜರಿದ್ದರು.

Translate »