ಮೈಸೂರಲ್ಲಿ ನಾಳೆಯಿಂದ ಅನ್ವಯಿಕ ಸೂಕ್ಷ್ಮಜೀವಿಶಾಸ್ತ್ರದ ರಾಷ್ಟ್ರೀಯ ವಿಚಾರ ಸಂಕಿರಣ
ಮೈಸೂರು

ಮೈಸೂರಲ್ಲಿ ನಾಳೆಯಿಂದ ಅನ್ವಯಿಕ ಸೂಕ್ಷ್ಮಜೀವಿಶಾಸ್ತ್ರದ ರಾಷ್ಟ್ರೀಯ ವಿಚಾರ ಸಂಕಿರಣ

September 26, 2018

ಮೈಸೂರು:  ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ವತಿಯಿಂದ ಸೆ.27 ಮತ್ತು 28ರಂದು ಜೆಎಸ್‍ಎಸ್ ಫಾರ್ಮಸಿ ಕಾಲೇಜಿನ ರಾಜೇಂದ್ರ ಸಭಾಂಗಣದಲ್ಲಿ ಅನ್ವಯಿಕ ಸೂಕ್ಷ್ಮ ಜೀವಿಶಾಸ್ತ್ರ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಸಂಯೋಜಕ ಪ್ರೊ.ಜಿ.ಕೆ.ಚಂದ್ರಶೇಖರಪ್ಪ ಮಂಗಳವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ ವೈರಾಣುಗಳು ಎಲ್ಲಾ ರೀತಿಯ ಔಷಧಗಳಿಗೆ ಒಗ್ಗಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೇರೆ ಔಷಧಿ ತಯಾರಿಕೆಗೆ ಯಾವ ರೀತಿಯಲ್ಲಿ ಸೂಕ್ಷ್ಮ ಜೀವಿಶಾಸ್ತ್ರ ಬಳಸಿಕೊಳ್ಳಬಹುದು ಎಂಬ ಇನ್ನಿತರೆ ವಿಷಯಗಳ ಬಗ್ಗೆ ವಿಚಾರ ಸಂಕಿರಣದಲ್ಲಿ ವಿಸ್ತøತ ಚರ್ಚೆ ನಡೆಯಲಿದೆ ಎಂದು ಹೇಳಿದರು.

ಸೆ.27ರಂದು ಬೆಳಿಗ್ಗೆ 10 ಗಂಟೆಗೆ ವಿಚಾರ ಸಂಕಿರಣ ಉದ್ಘಾಟನೆಯಾಗಲಿದ್ದು, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡಾ.ಬಿ.ಸುರೇಶ್, ಡಾ.ಕೆ.ಎಸ್.ಮಂಜು ಇನ್ನಿತರರು ಭಾಗವಹಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಡಾ.ಬಿ.ಮಂಜುನಾಥ್, ವಿಭಾಗದ ಪ್ರಮುಖರಾದ ಡಾ.ಕಾಂತೇಶ್, ಗೋಪಿನಾಥ್ ಇದ್ದರು.

Translate »