ನೆಹರು ಯುವ ಕೇಂದ್ರದ ಸ್ಥಾಪನಾ ದಿನ ಆಚರಣೆ
ಮೈಸೂರು

ನೆಹರು ಯುವ ಕೇಂದ್ರದ ಸ್ಥಾಪನಾ ದಿನ ಆಚರಣೆ

November 15, 2020

ಮೈಸೂರು, ನ.14(ಪಿಎಂ)- ಮೈಸೂ ರಿನ ಸರಸ್ವತಿಪುರಂನ ಯೂತ್ ಹಾಸ್ಟೆಲ್ ಸಭಾಂಗಣದಲ್ಲಿ ಶನಿವಾರ ನೆಹರು ಯುವ ಕೇಂದ್ರದ ಸ್ಥಾಪನಾ ದಿನ ಆಚರಿಸಲಾಯಿತು.

ನೆಹರು ಯುವ ಕೇಂದ್ರ ಮೈಸೂರು, ಯೂತ್ ಹಾಸ್ಟೆಲ್ ಹಾಗೂ ಶ್ರೀ ತಲ ಕಾವೇರಿ ಮಹಿಳಾ ವಿದ್ಯಾಸಂಸ್ಥೆ ಸಂಯುಕ್ತಾಶ್ರಯ ದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ ಉದ್ಘಾಟಿಸಿದರು. ಬಳಿಕ ಮಾತ ನಾಡಿದ ಅವರು, ಯುವ ಸಮುದಾಯ ನಮ್ಮ ದೇಶದ ಶಕ್ತಿ. ಇಂತಹ ಶಕ್ತಿಯನ್ನು ಇಮ್ಮಡಿ ಗೊಳಿಸುವ ನಿಟ್ಟಿನಲ್ಲಿ ನೆಹರು ಯುವ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಯುವ ಜನರು ಶ್ರದ್ಧೆ, ಬದ್ಧತೆ ಯಿಂದ ಮುನ್ನಡೆದರೆ ಅವರು ತಮ್ಮ ಜೀವನ ವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಲೋಕಾಯುಕ್ತ ಜಿಲ್ಲಾ ಅಧೀಕ್ಷಕಿ ಪಿ.ವಿ.ಸ್ನೇಹಾ ಮಾತನಾಡಿ, ಕೊರೊನಾ ಇಳಿಮುಖ ಆಗುತ್ತಿದೆ ಎಂಬುದು ಸಂತಸದ ವಿಷಯ. ಆದರೆ ಮುನ್ನೆಚ್ಚರಿಕಾ ಕ್ರಮಗಳತ್ತ ಹೆಚ್ಚು ಆದ್ಯತೆ ನೀಡುವುದನ್ನು ಯಾರೂ ಮರೆಯುವಂತಿಲ್ಲ. ನೆಹರು ಯುವ ಕೇಂದ್ರ ಯುವ ಸಮುದಾಯದ ಸದೃಡ ಗೊಳಿಸುವಲ್ಲಿ ಮಹತ್ವದ ಪಾತ್ರ ನಿರ್ವ ಹಿಸುತ್ತಿದೆ. ಇದರೊಂದಿಗೆ ಅಧಿಕಾರಿ ವರ್ಗ ಸೇರಿದಂತೆ ಎಲ್ಲರೂ ಕೈಜೋಡಿಸ ಬೇಕು ಎಂದು ತಿಳಿಸಿದರು.

ಹಿಂದೆ ಮಕ್ಕಳಿಗೆ ಕಥೆ ಹೇಳುತ್ತ ಇಲ್ಲವೇ ಆಕಾಶದಲ್ಲಿ ಚಂದ್ರನ ತೋರಿಸುತ್ತ ಊಟ ಮಾಡಿಸುತ್ತಿದ್ದ ತಾಯಂದಿರು ಇಂದು ಮೊಬೈಲ್ ಮುಂದೆ ಕುರಿಸಿ ಮಕ್ಕಳಿಗೆ ಊಟ ಮಾಡಿಸುವ ಸನ್ನಿವೇಶ ನಿರ್ಮಾಣವಾಗಿದೆ. ಆ ಮೂಲಕ ಮೊಬೈಲ್ ಹಾಗೂ ಸಾಮಾ ಜಿಕ ಜಾಲತಾಣಗಳಿಗೇ ಹೆಚ್ಚು ಆದ್ಯತೆ ನೀಡ ಲಾಗುತ್ತಿದೆ ಎಂದು ವಿಷಾದಿಸಿದರು.

ಶ್ರೀ ತಲಕಾವೇರಿ ಮಹಿಳಾ ವಿದ್ಯಾಸಂಸ್ಥೆ ಮೂಲಕ ಹೊಲಿಗೆ ತರಬೇತಿ ಪಡೆದ ಜಿಲ್ಲೆಯ ವಿವಿಧ ಭಾಗಗಳ 29 ಮಹಿಳೆಯ ರಿಗೆ ಇದೇ ವೇಳೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಅಲ್ಲದೆ, ನೆಹರು ಯುವ ಕೇಂದ್ರದಲ್ಲಿ ಡಿ ದರ್ಜೆ ನೌಕರರಾಗಿ ಸೇವೆ ಸಲ್ಲಿಸಿ 2017ರಲ್ಲಿ ನಿವೃತ್ತಿಯಾದರೂ ಈಗಲೂ ಕಚೇರಿಗೆ ಬಂದು ಕಾರ್ಯ ನಿರ್ವ ಹಿಸುತ್ತಿರುವ ಪುಟ್ಟರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಖಾಸಗಿ ಕಂಪನಿಯ ಹೆಚ್‍ಆರ್ ವಿಭಾಗದ ವ್ಯವಸ್ಥಾಪಕ ಕೆ.ಆರ್. ರಾಜೇಂದ್ರಪ್ರಸಾದ್, ಶ್ರೀ ತಲಕಾವೇರಿ ಮಹಿಳಾ ವಿದ್ಯಾಸಂಸ್ಥೆ ಅಧ್ಯಕ್ಷೆ ನಳಿನಿ ತಮ್ಮಯ್ಯ, ಯುವ ಕೇಂದ್ರದ ಜಿಲ್ಲಾ ಯುವ ಜನ ಸಮನ್ವಯಾಧಿಕಾರಿ ಎಸ್.ಸಿದ್ದ ರಾಮಪ್ಪ ಮತ್ತಿತರರು ಹಾಜರಿದ್ದರು.

Translate »