ಇಂಡಿಯಾ ಗೇಟ್‍ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್‍ರ  ಹಾಲೋಗ್ರಾಮ್ ಪ್ರತಿಮೆ ಅನಾವರಣ
News

ಇಂಡಿಯಾ ಗೇಟ್‍ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್‍ರ ಹಾಲೋಗ್ರಾಮ್ ಪ್ರತಿಮೆ ಅನಾವರಣ

January 24, 2022

ನವದೆಹಲಿ, ಜ.23- ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಪ್ರತಿಷ್ಠಿತ ಇಂಡಿಯಾ ಗೇಟ್ ವಲಯದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಹಾಲೋಗ್ರಾಮ್ ಪ್ರತಿಮೆಯನ್ನು ಅನಾವರಣ ಮಾಡಿದರು.

ಇಂಡಿಯಾ ಗೇಟ್‍ನ ಹಿಂದೆ ಇರುವ ಮೇಲಾವರಣದ ಮಂಟಪ ದಲ್ಲಿ ಗ್ರಾನೈಟ್ ಪ್ರತಿಮೆ ನಿರ್ಮಾಣವಾಗುವವರೆಗೂ ಅವರ ಹಾಲೋಗ್ರಾಮ್ ಪ್ರತಿಮೆ ಇರಲಿದೆ ಎಂದು ಸರ್ಕಾರ ತಿಳಿಸಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 2019, 2020, 2021 ಮತ್ತು 2022ರ ಸುಭಾಷ್ ಚಂದ್ರ ಬೋಸ್ ಆಪ್ತ ಪ್ರಬಂ ಧನ್ ಪುರಸ್ಕಾರಗಳನ್ನು ಪ್ರದಾನ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, “ಐತಿಹಾಸಿಕ ಸ್ಥಳದಲ್ಲಿ ಐತಿಹಾಸಿಕ ಸಂದರ್ಭ ದಲ್ಲಿ” ಪ್ರತಿಮೆ ಅನಾವರಣಗೊಂಡಿದೆ ಎಂದರು. ಸ್ವತಂತ್ರ ಭಾರತದ ಕನಸಿನಲ್ಲಿ ಎಂದಿಗೂ ನಂಬಿಕೆ ಕಳೆದುಕೊಳ್ಳಬೇಡಿ. ಭಾರತವನ್ನು ಅಲುಗಾಡಿಸುವ ಶಕ್ತಿ ಜಗತ್ತಿನ ಯಾವ ದೇಶಕ್ಕೂ ಇಲ್ಲ ಎಂದು ನೇತಾಜಿ ಹೇಳುತ್ತಿದ್ದರು. ಇಂದು ನಾವು ಅವರ ಸ್ವತಂತ್ರ ಭಾರತದ ಕನಸುಗಳನ್ನು ನನಸು ಮಾಡುವ ಗುರಿ ಹೊಂದಿದ್ದೇವೆ. ಸ್ವಾತಂತ್ರ್ಯದ 100ನೇ ವರ್ಷ 2047ರ ಮೊದಲು ನವ ಭಾರತದ ಗುರಿ ನಮ್ಮದಾಗಿದೆ ಎಂದು ಪ್ರಧಾನಿ ಹೇಳಿದರು.

ಸುಭಾಷ್ ಚಂದ್ರಬೋಸ್ ಆಪ್ತ ಪ್ರಬಂಧನ್ ಪುರಸ್ಕಾರ: ಸಮಾರಂಭದಲ್ಲಿ ಪ್ರಧಾನಿ ಮೋದಿ, 2019, 2020, 2021 ಮತ್ತು 2022 ರ ಸುಭಾಸ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರಗಳನ್ನು ಸಹ ಪ್ರದಾನ ಮಾಡಿದರು. ಸಮಾರಂಭದಲ್ಲಿ ಒಟ್ಟು ಏಳು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಕೊಡುಗೆಯನ್ನು ಗುರುತಿಸಲು ಮತ್ತು ಗೌರವಿಸಲು ಕೇಂದ್ರವು ವಾರ್ಷಿಕ ಸುಭಾಸ್ ಚಂದ್ರ ಬೋಸ್ ಆಪ್ತ್ ಪ್ರಬಂಧನ್ ಪುರಸ್ಕಾರವನ್ನು ಸ್ಥಾಪಿಸಿದೆ. ಈ ಪ್ರಶಸ್ತಿಯ ಸಂಸ್ಥೆಗೆ ದೊರೆತದಲ್ಲಿ 51 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ವ್ಯಕ್ತಿಗೆ ದೊರೆತಲ್ಲಿ 5 ಲಕ್ಷ ರೂಪಾಯಿ ನಗದು ಬಹುಮಾನ ಒಳಗೊಂಡಿದೆ.

ಆಪ್ತ ಪ್ರಬಂಧನ್ ಪ್ರಶಸ್ತಿ ಪುರಸ್ಕೃತರು: 2019: ಗಾಜಿಯಾಬಾದ್ ಎನ್ ಡಿಆರ್ ಎಫ್ 8ನೇ ಬೆಟಾಲಿಯನ್, 2020: ವಿಪತ್ತು ನಿಯಂತ್ರಣ ಮತ್ತು ನಿರ್ವಹಣಾ ಕೇಂದ್ರ (ಡಿಎಂಎಂಸಿ), ಉತ್ತಾರಖಂಡ, 2020: ಕುಮಾರ್ ಮುನ್ನನ್ ಸಿಂಗ್ (ವೈಯಕ್ತಿಕ), 2021: ರಾಜೇಂದ್ರ ಕುಮಾರ್ ಭಂಡಾರಿ (ವೈಯಕ್ತಿಕ), 2021: ಸುಸ್ಥಿರ ಪರಿಸರ ಮತ್ತು ಪರಿಸರ ಅಭಿವೃದ್ಧಿ ಸೊಸೈಟಿ (ಸೀಡ್ಸ್), 2022: ಗುಜರಾತ್ ವಿಪತ್ತು ನಿರ್ವಹಣಾ ಸಂಸ್ಥೆ (ಜಿಐಡಿಎಂ), 2022: ವಿನೋದ್ ಶರ್ಮ, ಸಿಕ್ಕಿಂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ (ವೈಯಕ್ತಿಕ).

Translate »