ರೈತರನ್ನು ಉದ್ಯಮಿಗಳಾಗಿಸಲು ಹೊಸ ಕೃಷಿ ಮಸೂದೆ ಸಹಕಾರಿ
ಮೈಸೂರು

ರೈತರನ್ನು ಉದ್ಯಮಿಗಳಾಗಿಸಲು ಹೊಸ ಕೃಷಿ ಮಸೂದೆ ಸಹಕಾರಿ

October 14, 2020

ಮುಂಬೈ, ಅ. 13- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಐತಿ ಹಾಸಿಕ ಹೊಸ ಕೃಷಿ ಸುಧಾರಣೆಗಳು ರೈತ ರನ್ನು ಉದ್ಯಮಿಗಳ ನ್ನಾಗಿಸಲು ಸಹಕಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಾಜಿ ಕೇಂದ್ರ ಸಚಿವ ಬಾಳಾ ಸಾಹೇಬ್ ವಿಖೆ ಪಾಟೀಲ್ ಅವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಹಾಗೂ ಅಹ್ಮದ್‍ನಗರ ಜಿಲ್ಲೆಯಲ್ಲಿರುವ ಪ್ರವರ ಗ್ರಾಮೀಣ ಶೈಕ್ಷಣಿಕ ಸಮಾಜದ ಮರುನಾಮಕರಣ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ ನಾಡಿರುವ ಪ್ರಧಾನಿ ಮೋದಿ, ತಮ್ಮ ಸರ್ಕಾರ ರೈತರ ಆದಾಯವನ್ನು ಹೆಚ್ಚಿಸು ವತ್ತ ಗಮನ ಕೇಂದ್ರೀಕರಿಸಿದೆ ಎಂದಿದ್ದಾರೆ.

ಕೃಷಿ ಮಸೂದೆಗಳನ್ನು ಐತಿಹಾಸಿಕ ಎಂದು ಹೇಳಿರುವ ಪ್ರಧಾನಿ ಮೋದಿ, “ಕೃಷಿ ಹಾಗೂ ಕೃಷಿಕರನ್ನು ಅನ್ನದಾತರ ಪಾತ್ರದಿಂದ ಉದ್ಯೋಗದಾತ (ಉದ್ಯಮಿ) ರನ್ನಾಗಿಸುವುದಕ್ಕೆ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ” ಎಂದು ಜನತೆಗೆ ತಿಳಿಸಿ ದ್ದಾರೆ. ಗುಜರಾತ್, ಮಹಾರಾಷ್ಟ್ರ, ಹರ್ಯಾಣ, ಪಂಜಾಬ್‍ಗಳಲ್ಲಿ ಹೆಚ್ಚಿನ ಪ್ರಮಾಣದ ಹಾಲು, ಸಕ್ಕರೆ, ಗೋಧಿ ಉತ್ಪಾದನೆಯನ್ನು ಉಲ್ಲೇಖಿಸಿರುವ ಮೋದಿ, ಈ ರೀತಿಯ ಸ್ಥಳೀಯ ಮಾದರಿ ಗಳು ದೇಶವನ್ನು ಮುಂದೆ ಕೊಂಡೊ ಯ್ಯುತ್ತವೆ ಎಂದು ಹೇಳಿದ್ದಾರೆ.

 

 

 

Translate »