ಕೊರೊನಾ ಸೋಂಕಿತರ ಚಿಕಿತ್ಸೆಗೆ   ವರದಾನವಾದ ಹೊಸ ಜಿಲ್ಲಾಸ್ಪತ್ರೆ
ಮೈಸೂರು

ಕೊರೊನಾ ಸೋಂಕಿತರ ಚಿಕಿತ್ಸೆಗೆ  ವರದಾನವಾದ ಹೊಸ ಜಿಲ್ಲಾಸ್ಪತ್ರೆ

May 26, 2020

ಮೈಸೂರು,ಮೇ 25(ಆರ್‍ಕೆ)-ಮೊದ ಮೊದಲು ಅತೀ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ಹರಡಿದ್ದ ಮೈಸೂರಿನಲ್ಲಿ ಚಿಕಿತ್ಸೆ ನೀಡಲು ನೂತನ ಜಿಲ್ಲಾ ಆಸ್ಪತ್ರೆ ಕಟ್ಟಡ ವರದಾನವಾಗಿದೆ.

ಆರಂಭದಲ್ಲಿ ಸೋಂಕು ಕಾಣಿಸಿಕೊಂಡಾಗ ವೈದ್ಯ ಕೀಯ ಚಿಕಿತ್ಸೆ ನೀಡಲು ಪ್ರತ್ಯೇಕ ಆಸ್ಪತ್ರೆ ಅಗತ್ಯ ವಿದ್ದಾಗ ಜಿಲ್ಲಾಡಳಿತಕ್ಕೆ ತಲೆನೋವಾಗಿತ್ತು. ಬೇರೆ ಮಾರ್ಗವಿಲ್ಲದೆ ಮೊದಲು ಕೆ.ಆರ್.ಆಸ್ಪತ್ರೆ ಆವರಣ ದಲ್ಲಿ ಖಾಲಿ ಇದ್ದ ಜಯದೇವ ಹೃದ್ರೋಗ ಘಟಕದ ನ್ಯೂ ಓಪಿಡಿ-ಐಪಿಡಿ ಬ್ಲಾಕ್ ಕಟ್ಟಡವನ್ನೇ ಕೋವಿಡ್ -19 ಆಸ್ಪತ್ರೆಯನ್ನಾಗಿ ಪರಿವರ್ತಿಸಿ, ಕೊರೊನಾ ವೈರಸ್ ಸೋಂಕಿತರನ್ನಿರಿಸಿ ಚಿಕಿತ್ಸೆ ನೀಡಲಾಗಿತ್ತು.

ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗು ತ್ತಿದ್ದಂತೆಯೇ ಬೆಡ್‍ಗಳ ಸೌಲಭ್ಯದ ಕೊರತೆ ಕಂಡು ಬಂದ ಕಾರಣ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಕಂಗಾಲಾಗಿದ್ದಾಗ ಕಂಡು ಬಂದಿದ್ದು ಜಿಲ್ಲಾ ಆಸ್ಪತ್ರೆ ಹೊಸ ಕಟ್ಟಡ. ಕೇವಲ ಸಿವಿಲ್ ಕಾಮಗಾರಿ ಪೂರ್ಣಗೊಂಡು ಒಂದು ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಆಸ್ಪತ್ರೆ ಯಲ್ಲಿ ಉಪಕರಣಗಳು, ಪೀಠೋಪಕರಣ, ಸಿಬ್ಬಂದಿ ಸೌಲಭ್ಯವಿಲ್ಲದ ಕಾರಣ ಅಲ್ಲಿ ವೈದ್ಯಕೀಯ ಸೇವೆ ಇನ್ನು ಆರಂಭವಾಗಿರಲಿಲ್ಲ.

ಜೊತೆಗೆ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಕೋವಿಡ್ -19 ರೋಗಿಗಳನ್ನಿರಿಸಿದ್ದ ಕಾರಣ, ಅಲ್ಲಿನ ಓಪಿಡಿ, ಐಪಿಡಿ, ಅಪಘಾತ ಚಿಕಿತ್ಸಾ ವಿಭಾಗ, ಶಸ್ತ್ರಚಿಕಿತ್ಸೆ, ಚೆಲು ವಾಂಬ ಹಾಗೂ ಮಕ್ಕಳ ಆಸ್ಪತ್ರೆ ರೋಗಿಗಳಿಗೆ ಸೋಂಕು ಹರಡುವ ಭೀತಿ ಇತ್ತು. ಆದ್ದರಿಂದ ಇಡೀ ಆಸ್ಪತ್ರೆ ಆವ ರಣದಲ್ಲಿ ವೈದ್ಯಕೀಯ ಸೇವೆಗಳನ್ನೇ ಸ್ಥಗಿತಗೊಳಿಸು ವುದು ಅನಿವಾರ್ಯವಾಗಿತ್ತು. ಸಾರ್ವಜನಿಕರು, ವೈದ್ಯರು ಹಾಗೂ ವೈದ್ಯಕೇತರ ಸಿಬ್ಬಂದಿ ಸಹ ಕೆ.ಆರ್.ಆಸ್ಪತ್ರೆಗೆ ಹೋಗಲು ಹೆದರುತ್ತಿದ್ದರು. ಆ ವೇಳೆ ಎಚ್ಚೆತ್ತ ಜಿಲ್ಲಾಡ ಳಿತವು ಕೊರೊನಾ ಸೋಂಕಿತರನ್ನು ಕೆ.ಆರ್.ಆಸ್ಪತ್ರೆ ಯಿಂದ ಜಿಲ್ಲಾಸ್ಪತ್ರೆ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ಧರಿಸಿತು.

ಅದಕ್ಕಾಗಿ ಕೇವಲ ಕಟ್ಟಡ ಸಿದ್ಧವಿದ್ದ ಜಿಲ್ಲಾ ಆಸ್ಪತ್ರೆಗೆ ಮಂಚ, ಹಾಸಿಗೆ, ವೆಂಟಿಲೇಟರ್ ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯವನ್ನು ಒದಗಿಸಿ ಅತೀ ಕಡಿಮೆ ಅವಧಿಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮಾಡಿದ ಜಿಲ್ಲಾ ಆಡಳಿತವು ಕೋವಿಡ್-19 ಆಸ್ಪತ್ರೆಯನ್ನಾಗಿ ಸಜ್ಜುಗೊಳಿ ಸಿತು. ನ್ಯೂ ಬ್ರ್ಯಾಂಡ್ ಆಸ್ಪತ್ರೆಯಾದ್ದರಿಂದ ಕೊರೊನಾ ಸೋಂಕಿತರ ಚಿಕಿತ್ಸೆಗೆ ಜಿಲ್ಲಾಸ್ಪತ್ರೆ ಕಟ್ಟಡ ಹೇಳಿ ಮಾಡಿಸಿದಂತಾಗಿರುವುದರಿಂದ ಅಲ್ಲಿ ದಾಖಲಿ ಸಲಾಗಿದ್ದ ಎಲ್ಲಾ 90 ರೋಗಿಗಳೂ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಆದರು. ನಂತರ ಪಾಸಿಟಿವ್ ಬಂದ ಇಬ್ಬರು ಸೋಂಕಿತರೂ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನಿತರ ಯಾವುದೇ ರೋಗಿಗಳಿಲ್ಲದಿರುವುದು ವಸತಿ ಪ್ರದೇಶದಿಂದ ತುಸು ಅಂತರದಲ್ಲಿರುವುದು, ಆಂಬುಲೆನ್ಸ್ ವಾಹನಗಳು ಓಡಾಡಲು ಮುಖ್ಯ ರಸ್ತೆ ಸಂಪರ್ಕ ಸೇರಿದಂತೆ ಕೋವಿಡ್-19 ಆಸ್ಪತ್ರೆಗೆ ಬೇಕಾದ ಎಲ್ಲಾ ಅನುಕೂಲಗಳೂ ಜಿಲ್ಲಾ ಆಸ್ಪತ್ರೆಯ ಲ್ಲಿರುವುದರಿಂದ ಅದು ಉಪಯುಕ್ತಕಾರಿಯಾಗಿದೆ. ಈ ರೀತಿ ನ್ಯೂ ಬ್ರ್ಯಾಂಡ್ ಆಸ್ಪತ್ರೆ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಲಭ್ಯವಾಗಿರುವುದು ಇಡೀ ರಾಜ್ಯದಲ್ಲೇ ಮೈಸೂರು ಮೊದಲನೆಯದು ಎಂದು ಅಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಹಾಗೂ ನರ್ಸ್‍ಗಳು ಅಭಿಪ್ರಾಯಪಟ್ಟಿದ್ದಾರೆ.

ಅದರಿಂದಾಗಿ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ ಸಕಲ ವೈದ್ಯ ಕೀಯ ಸೌಲಭ್ಯ ದೊರೆತಂತಾಗಿದ್ದು, ಕೋವಿಡ್-19 ಪ್ರಕರಣಗಳು ಕೊನೆಗೊಂಡ ನಂತರ ಸ್ಯಾನಿ ಟೈಸ್ ಮಾಡಿದ ನಂತರ ಅಲ್ಲಿ ಜನರಲ್ ವೈದ್ಯ ಕೀಯ ಸೇವೆಗಳನ್ನು ಆರಂಭ ಮಾಡಬಹುದಾ ಗಿದೆ. ಕೊರೊನಾ ಸೋಂಕು ಬಾರದಿದ್ದಲ್ಲಿ ಇನ್ನೂ ಕನಿಷ್ಠ 6 ತಿಂಗಳು ಜಿಲ್ಲಾಸ್ಪತ್ರೆ ಹಾಗೆಯೇ ಖಾಲಿ ಉಳಿಯುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

 

 

Translate »