`ನೂತನ ಶಿಕ್ಷಣ ನೀತಿ ಸ್ವಾಗತಾರ್ಹ’
ಮೈಸೂರು

`ನೂತನ ಶಿಕ್ಷಣ ನೀತಿ ಸ್ವಾಗತಾರ್ಹ’

January 24, 2021

ಮೈಸೂರು,ಜ.23(ಎಸ್‍ಪಿಎನ್)- ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಎಸ್.ವಿದ್ಯಾಶಂಕರ್ ಹೇಳಿದರು.

ಮೈಸೂರು ಹೆಬ್ಬಾಳ ಕೈಗಾರಿಕಾ ವಲಯ ದಲ್ಲಿರುವ ವಿವೇಕಾನಂದ ಟೀಚರ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್ ನಿಂದ ಪೂರ್ವ ಪ್ರಾಥಮಿಕ ಶಾಲೆಗಳ ಶಿಕ್ಷಕರ 6 ತಿಂಗಳ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

ಜಾಗತಿಕ ಮಟ್ಟದ ವಿವಿಧ ಕ್ಷೇತ್ರಗಳಲ್ಲಿ ಪೈಪೋಟಿ ನಡೆಸಬೇಕಾದರೆ ನಮ್ಮ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಾಲಾ ಹಂತದಿಂದ ಸ್ನಾತಕೋತ್ತರ ಪದವಿವರೆಗೂ ಆಮೂಲಾಗ್ರ ಬದಲಾವಣೆ ಅಗತ್ಯ. ಈ ನಿಟ್ಟಿ ನಲ್ಲಿ ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿ ಜಾರಿ ಗೊಳಿಸುತ್ತಿ ರುವುದು ಉತ್ತಮ ಬೆಳವಣಿಗೆ. ನೂತನ ಶಿಕ್ಷಣ ನೀತಿಯಲ್ಲಿ 5+3+3+4 ವಿಭಾಗಗಳಾಗಿ ವಿಂಗಡಿಸಲಾಗಿದೆ ಎಂದರು.

ಟೈಟಾನ್ ಕಂಪನಿ ಉಪಾ ಧ್ಯಕ್ಷ ಎನ್.ಇ.ಶ್ರೀಧರ್, ವಿವೇ ಕಾನಂದ ಯೂತ್ ಮೂವ್ ಮೆಂಟ್ ಸಂಸ್ಥಾಪಕ ಡಾ.ಬಾಲಸುಬ್ರ ಹ್ಮಣ್ಯಂ, ಡಯಟ್ ರೀಡರ್ ಎಸ್. ಮಂಜುಳಾ, ಪೋದಾರ್ ಇಂಟರ್‍ನ್ಯಾಷ ನಲ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ಕೃಷ್ಣ ಬಂಗೇರ, ಎಸ್‍ವಿವೈಎಂನ ಸಿಇಓ ಜಿ.ಎಸ್.ಕುಮಾರ್ ಮತ್ತು ಸಿಬ್ಬಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Translate »