ಲಯನ್ಸ್ ಕ್ಲಬ್ ಆಫ್ ಮೈಸೂರು ಕ್ಲಾಸಿಕ್ ನೂತನ ತಂಡದ ಪದಗ್ರಹಣ
ಮೈಸೂರು

ಲಯನ್ಸ್ ಕ್ಲಬ್ ಆಫ್ ಮೈಸೂರು ಕ್ಲಾಸಿಕ್ ನೂತನ ತಂಡದ ಪದಗ್ರಹಣ

July 17, 2020

ಮೈಸೂರು, ಜು.16- ಅಂತರ ರಾಷ್ಟ್ರೀಯ ಲಯನ್ಸ್ ಕ್ಲಬ್‍ಗಳ ಒಕ್ಕೂಟ, ಜಿಲ್ಲೆ 317ಎ ಇದರ ಲಯನ್ಸ್ ಕ್ಲಬ್ ಆಫ್ ಮೈಸೂರು ಕ್ಲಾಸಿಕ್ ನೂತನ ಪದಾ ಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಲಯನ್ ಡಾ. ನಾಗರಾಜ್ ವಿ.ಬೈರಿ, ಪಿಎಂಜೆಎಫ್ ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಇತ್ತೀಚೆಗೆ ನಗರದ ಖಾಸಗಿ ಹೊಟೇಲ್‍ನಲ್ಲಿ ಉದ್ಘಾಟಿಸಿದರು.

ಅಧ್ಯಕ್ಷರಾಗಿ ಲಯನ್ ಕೆ.ಶಿವಪ್ಪ, ಕಾರ್ಯದರ್ಶಿಯಾಗಿ ಲಯನ್ ಮಂಜು ನಾಥ್, ಖಜಾಂಚಿಯಾಗಿ ಲಯನ್ ಸಿ.ಕೃಷ್ಣ ನೇಮಕಗೊಂಡರು. ಕ್ಲಬ್‍ನ 16 ನೂತನ ಸÀದಸ್ಯರನ್ನು ಲಯನ್ ಎನ್. ಜಯರಾಮು, ಎಂಜೆಎಫ್, ಜಿಲ್ಲಾ ರಾಯ ಭಾರಿ ಸೇರ್ಪಡಿಸಿದರು. ಸಭೆಯ ಅಧ್ಯ ಕ್ಷತೆಯನ್ನು ಪೂರ್ವ ಅಧ್ಯಕ್ಷ ಲಯನ್ ಎನ್. ಹೆಚ್.ವಿಶ್ವನಾಥ್ ವಹಿಸಿದ್ದರು. ಪ್ರಾಂತೀಯ ಅಧ್ಯಕ್ಷ ಲಯನ್ ಕೆ.ಎನ್.ದೇವಪ್ರಸಾದ್, ವಲಯ ಅಧ್ಯಕ್ಷ ಲಯನ್ ಎ.ಎಂ.ನಾಗಣ್ಣ ಹಾಗೂ ಇತರ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Translate »