ಮದ್ಯ ಮಳಿಗೆ ಆರಂಭದ ವಿರುದ್ಧ ಟಿ.ಕೆ.ಲೇಔಟ್ ನಿವಾಸಿಗಳ ಪ್ರತಿಭಟನೆ
ಮೈಸೂರು

ಮದ್ಯ ಮಳಿಗೆ ಆರಂಭದ ವಿರುದ್ಧ ಟಿ.ಕೆ.ಲೇಔಟ್ ನಿವಾಸಿಗಳ ಪ್ರತಿಭಟನೆ

July 17, 2020

ಮೈಸೂರು, ಜು.16(ಎಂಟಿವೈ)- ಜನ ವಸತಿ ಪ್ರದೇಶದಲ್ಲಿ ಮದ್ಯದಂಗಡಿ ಆರಂ ಭಿಸದಂತೆ ಮೈಸೂರಿನ ತೊಣಚಿಕೊಪ್ಪಲು ಬಡಾವಣೆ ನಿವಾಸಿಗಳು ಪಾಲಿಕೆ ಸದಸ್ಯ ಜೆ.ಗೋಪಿ ಅವರ ನೇತೃತ್ವದಲ್ಲಿ ಗುರು ವಾರ ಪ್ರತಿಭಟನೆ ನಡೆಸಿದರು.

ಬಡಾವಣೆಯ ಮುಖ್ಯರಸ್ತೆಯಲ್ಲಿನ ಕಟ್ಟಡ ವೊಂದರಲ್ಲಿ ಹೊಸದಾಗಿ ಎಂಎಸ್‍ಐಎಲ್ ಮದ್ಯದಂಗಡಿ ತೆರೆಯಲಾಗುತ್ತಿದ್ದು, ಸ್ಥಳ ಪರಿಶೀಲನೆಗೆ ಅಬಕಾರಿ ಇಲಾಖೆ ಅಧಿಕಾರಿ ಗಳು ಬಂದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಸ್ಥಳ ಪರಿಶೀಲನೆ ತಡೆಯಲೆತ್ನಿಸಿದರು. ಜನ ವಸತಿ ಪ್ರದೇಶದಲ್ಲಿ ಯಾವುದೇ ಕಾರ ಣಕ್ಕೂ ಮದ್ಯದಂಗಡಿ ತೆರೆಯಬಾರದು ಎಂದು ಪಟ್ಟುಹಿಡಿದರು. ಸ್ಥಳೀಯರ ಪ್ರತಿಭಟನೆ ಲೆಕ್ಕಿಸದ ಅಬಕಾರಿ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ನಿರ್ಗಮಿಸಿದರು.

ಶಾಲೆ, ದೇವಾಲಯ ಸಮೀಪ ಮದ್ಯ ದಂಗಡಿ ತೆರೆಯಲು ಕಾಯ್ದೆಯಲ್ಲಿ ಅವಕಾಶ ವಿಲ್ಲ. ಜನವಸತಿ ಪ್ರದೇಶದಲ್ಲಿ ಮದ್ಯದಂ ಗಡಿ ತೆರೆಯಬಾರದೆಂಬ ನಿಯಮ ವಿದ್ದರೂ ಗಾಳಿಗೆ ತೂರಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಪಾಲಿಕೆ ಸದಸ್ಯ ಜೆ.ಗೋಪಿ, ಸ್ಥಳದಲ್ಲಿನ ಪರಿಸ್ಥಿತಿ ಅವಲೋಕಿಸದೇ ಅಬಕಾರಿ ಇಲಾಖೆ ಅಧಿ ಕಾರಿಗಳು ಮದ್ಯದಂಗಡಿ ಆರಂಭಕ್ಕೆ ಅನು ಮತಿ ನೀಡಲು ಮುಂದಾಗಿದ್ದಾರೆ. ತೊಣಚಿ ಕೊಪ್ಪಲಿನ ಹೆಬ್ಬಾಗಿಲ ಬಳಿ ಮದ್ಯದಂಗಡಿ ತೆರೆಯಲಾಗದು. ಹಬ್ಬ, ಜಾತ್ರಾ ಮಹೋ ತ್ಸವ ಸಂದರ್ಭ ಹೆಬ್ಬಾಗಿಲಿನ ಬಳಿ ಪೂಜಾ ಕಾರ್ಯ ನಡೆಸಲಾಗುತ್ತದೆ. ಸಮೀಪದಲ್ಲಿಯೇ ಅಶ್ವಥ ಕಟ್ಟೆ, ಶಾಲೆ, ದೇವಾಲಯ ಇವೆ. ಇಂಥ ಸ್ಥಳದಲ್ಲಿ ಮದ್ಯ ಮಾರಾಟ ಮಳಿ ಗೆಗೆ ಅವಕಾಶ ನೀಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ಗ್ರಾಮೀಣ ಸೊಗಡಿ ನೊಂದಿಗೆ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿರುವ ಟಿ.ಕೆ.ಲೇ ಔಟ್‍ನಲ್ಲಿ ಸದ್ಯ ಶಾಂತಿ ನೆಲೆಸಿದೆ. ಬಡಾ ವಣೆ ಜನ ನೆಮ್ಮದಿಯಿಂದ ಜೀವಿಸುತ್ತಿದ್ದಾರೆ. ಮದ್ಯದಂಗಡಿ ಆರಂಭಗೊಂಡರೆ ಶ್ರಮಿ ಕರು, ಯುವಕರು ಕುಡಿತಕ್ಕೆ ದಾಸರಾಗಿ ಅಶಾಂತ ಸ್ಥಿತಿ ಉದ್ಭವಿಸಲಿದೆ. ಜನತಾನಗರ, ಸರಸ್ವತಿಪುರಂ, ಕುವೆಂಪುನಗರ, ಶಾರದಾ ದೇವಿನಗರ ಮೊದಲಾದ ಸುತ್ತಲ ಬಡಾವಣೆ ಗಳಲ್ಲಿ ಹಲವು ಮದ್ಯದಂಗಡಿಗಳಿವೆ. ಅಲ್ಲದೇ, ಟಿ.ಕೆ.ಬಡಾವಣೆಗೆ ಮದ್ಯದಂಗಡಿ ಬೇಕೆಂದು ಯಾರೂ ಅರ್ಜಿ ಸಲ್ಲಿಸಿಲ್ಲ. ಹಾಗಿದ್ದೂ ಅಬ ಕಾರಿ ಇಲಾಖೆ ಹೊಸ ಮದ್ಯದ ಮಳಿಗೆ ಮಂಜೂರು ಮಾಡಿದೆ. ಜಿಲ್ಲಾಧಿಕಾರಿಗಳು ತಕ್ಷಣ ಮದ್ಯಪ್ರವೇಶಿಸಿ ಟಿ.ಕೆ.ಬಡಾವಣೆ ಯಲ್ಲಿ ಮದ್ಯದಂಗಡಿ ಆರಂಭಕ್ಕೆ ತಡೆ ನೀಡಬೇಕು. ಸ್ಥಳೀಯರ ಹಿತಕಾಯಬೇಕು ಎಂದು ಮನವಿ ಮಾಡಿದರು.

Translate »