ಕೊಡವರಿಗೆ ಬುಡಕಟ್ಟು ಸ್ಥಾನಮಾನ: ಜನಾಂಗೀಯ ಸಮೀಕ್ಷೆಗೆ ರಾಜ್ಯ ಸರ್ಕಾರ ಆದೇಶ
ಕೊಡಗು

ಕೊಡವರಿಗೆ ಬುಡಕಟ್ಟು ಸ್ಥಾನಮಾನ: ಜನಾಂಗೀಯ ಸಮೀಕ್ಷೆಗೆ ರಾಜ್ಯ ಸರ್ಕಾರ ಆದೇಶ

January 2, 2019

ಬೆಂಗಳೂರು: ಕೊಡಗಿನ ಜನತೆ ಮತ್ತು ಕೊಡವ ನ್ಯಾಷನಲ್ ಕೌನ್ಸಿಲ್‍ನ ಒತ್ತಡಕ್ಕೆ ಮಣಿದು, ಕೊಡವ ಸಮುದಾಯ ಬುಡಕಟ್ಟು ಸ್ಥಾನಮಾನಕ್ಕೆ ಅರ್ಹವಾಗಿದೆಯೇ ಎಂಬುದನ್ನು ತಿಳಿಯಲು ರಾಜ್ಯ ಸರ್ಕಾರ ಜನಾಂಗೀಯ ಸಮೀಕ್ಷೆ ಮತ್ತು ಸಾಮಾಜಿಕ ಆರ್ಥಿಕತೆ ಸರ್ವೆ ಕಾರ್ಯಕ್ಕೆ ಶಿಫಾರಸ್ಸು ಮಾಡಿದೆ. ಕೊಡವ ಸಮುದಾಯ ಗಣನೀಯವಾಗಿ ಇಳಿಕೆಯಾ ಗುತ್ತಿರುವ ಬಗ್ಗೆ ಅನೇಕ ಪತ್ರಿಕೆಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಈ ಸರ್ವೆ ಕಾರ್ಯವನ್ನು ಮೂರನೇ ಬಾರಿಗೆ ಕೈಗೆತ್ತಿಕೊಂಡಿದೆ.

2011 ರಲ್ಲಿ ಅಂದಿನ ಯುಪಿಎ ಕೇಂದ್ರ ಸರ್ಕಾರ ಜನಾಂಗೀಯ ಸಮೀಕ್ಷೆ ಮತ್ತು ಸಾಮಾಜಿಕ ಆರ್ಥಿ ಕತೆ ಸರ್ವೆ ಕಾರ್ಯಕ್ಕೆ ನಿರ್ದೇಶನ ನೀಡಿತ್ತು. ಆದರೆ ರಾಜಕೀಯ ಕಾರಣದಿಂದಾಗಿ ಅದನ್ನು ತಡೆ ಹಿಡಿ ಯಲಾಯಿತು. 2016ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವೂ ಕೂಡ ಸರ್ವೆ ಕಾರ್ಯ ಪ್ರಾರಂಭಿಸಿತು. ಆದರೆ ಮಧ್ಯದಲ್ಲೇ ಅದು ಕೂಡ ಸ್ಥಗಿತಗೊಂಡಿತು.

ಕೇಂದ್ರ ಸರ್ಕಾರದ ನಿರ್ದೇಶನದ ಪ್ರಕಾರ, ಸಮಾಜ ಕಲ್ಯಾಣ ಸಚಿವಾಲಯವು ಈ ಸರ್ವೆ ಕಾರ್ಯದ ಕೆಲಸವನ್ನು ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ವಹಿಸಲಾಗಿದ್ದು, ಈ ಸಂಬಂಧ ಸುಮಾರು 11 ಲಕ್ಷ ರೂ. ಗಳನ್ನು ಬಿಡುಗಡೆ ಮಾಡಿದೆ.

ಆದರೂ ಸಂಶೋಧನಾ ತಜ್ಞರ ತಂಡ ವ್ಯವಸ್ಥಿತ ವಾಗಿ ನವೆಂಬರ್ 16, 2016 ರಿಂದ ಡಿಸೆಂಬರ್ 2016 ರವರೆಗೆ ಸರ್ವೆ ಕಾರ್ಯ ನಡೆಸಿತು. ಆದರೆ ಈ ಸರ್ವೆ ಕಾರ್ಯ ನಡೆಯಬಾರದೆಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಸರ್ವೆಯನ್ನು ಮಧ್ಯ ದಲ್ಲೇ ಸ್ಥಗಿತಗೊಳಿಸಿದರು ಎಂದು ಸಿಎನ್‍ಸಿ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ತಿಳಿಸಿದರು.

ಈ ಕಾರಣಕ್ಕಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಮತ್ತು ಕೊಡವ ಸಮುದಾಯಗಳು ಹಲವಾರು ಹೋರಾಟ, ಪ್ರತಿಭಟನೆಗಳನ್ನು ನಡೆಸಿದವು. ಅಲ್ಲದೆ, ಸಿಎನ್‍ಸಿ ಶೀಘ್ರ ಸಮೀಕ್ಷೆ ಕಾರ್ಯ ನಡೆಸುವಂತೆ ಹಾಗೂ ಅವನತಿಯತ್ತ ಸಾಗುತ್ತಿರುವ ಈ ವಿಶಿಷ್ಟ ಸಮುದಾಯ ಮತ್ತು ಸಂಸ್ಕøತಿಯನ್ನು ಸಂರಕ್ಷಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿತು.

ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ಈ ಸಮೀಕ್ಷೆ ಕಾರ್ಯ ಸ್ಥಗತಿಗೊಂಡಿದೆ ಎಂದು ಸಿಎನ್‍ಸಿ ವಾದಿಸಿತು. ಕೊಡಗಿನ ಪ್ರಭಾವಿ ಮಠಗಳು ಮತ್ತು ಕೆಲವು ಕಾಂಗ್ರೆಸ್ ಮುಖಂಡರು ಈ ಸಮೀಕ್ಷೆ ಕಾರ್ಯ ವನ್ನು ವಿರೋಧಿಸುತ್ತಿವೆ. ಸಿಎನ್‍ಸಿ ಹಲವಾರು ವರ್ಷ ಗಳಿಂದ ಸರ್ವೆ ಕಾರ್ಯಕ್ಕೆ ಹೋರಾಟ ಮಾಡುತ್ತಿದೆ. ಕೊಡವರಿಗೆ ಬುಡಕಟ್ಟು ಸ್ಥಾನಮಾನ ಕೊಡಿಸಿದ ಹೆಗ್ಗಳಿಕೆ ಸಿಎನ್‍ಸಿಯದ್ದಾಗುತ್ತದೆ ಎಂಬ ಕಾರಣಕ್ಕೆ ಈ ಸರ್ವೆ ಕಾರ್ಯವನ್ನು ವಿರೋಧಿಸುತ್ತಿವೆ ಎಂದು ನಾಚಪ್ಪ ಆಪಾದಿಸಿದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಮಾತ ನಾಡಿ, ಕೊಡವ ಸಮುದಾಯ ಬುಡಕಟ್ಟು ಸ್ಥಾನಮಾ ನಕ್ಕೆ ಅರ್ಹವಾಗಿದೆಯೇ ಎಂಬುದಕ್ಕೆ ಸಮೀಕ್ಷೆ ಕಾರ್ಯ ನಡೆಸಲು ಕೇಂದ್ರ ಸರ್ಕಾರ ಶಿಫಾರಸು ಮಾಡಿದೆ. ಅಲ್ಲದೆ ಮೈಸೂರಿನ ಕೆಎಸ್‍ಟಿಆರ್‍ಐ ಸಂಸ್ಥೆಗೆ ಈ ಕಾರ್ಯವನ್ನು ವಹಿಸಿದೆ ಎಂದರು. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿ ನಾಚಪ್ಪ ಮಾತನಾಡಿ, ಕೊಡವರ ಸಾಂಪ್ರದಾಯ ಮತ್ತು ಸಂಸ್ಕøತಿ ಬುಡಕಟ್ಟು ಜನರಂತೆ ಹೋಲುತ್ತದೆ. ಸಮೀಕ್ಷೆ ಕಾರ್ಯ ನಡೆಸದ ಹೊರತು ರಾಜ್ಯ ಸರ್ಕಾರ ಬುಡಕಟ್ಟು ಸ್ಥಾನಮಾನ ಕಲ್ಪಿಸುವುದಿಲ್ಲ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಸಮೀಕ್ಷೆ ಕಾರ್ಯ ಆರಂಭಿಸಿರುವುದಕ್ಕೆ ಶ್ಲಾಘಿಸಿದ ನಾಚಪ್ಪ, ಸಂವಿಧಾನ ಕಾಯ್ದೆ 340 ಮತ್ತು 342ರ ಅಡಿಯಲ್ಲಿ ಜನಾಂಗೀಯ ಸಮೀಕ್ಷೆ ಮಾಡುವ ಮೂಲಕ ಆರ್ಥಿಕತೆ ಮತ್ತು ಸಾಮಾಜಿಕ ಕಾರಣಗಳಿಂ ದಾಗಿ ಹಲವಾರು ವರ್ಷಗಳಿಂದ ಕ್ಷೀಣಿಸುತ್ತಿರುವ ಕೊಡವ ಸಮುದಾಯವನ್ನು ಉಳಿಸಿಕೊಳ್ಳುವುದು ತುರ್ತು ಅಗತ್ಯವಾಗಿದೆ ಎಂದರು.

“ಕೊಡವ ಜನಸಂಖ್ಯೆ 1.5 ಲಕ್ಷ ಇದ್ದಾಗಿ ನಿಂದಲೂ ಬುಡಕಟ್ಟು ಸ್ಥಾನಮಾನಕ್ಕೆ ಅರ್ಹ ರಾಗಿದ್ದರು. ಅಂದಾಜು ಪ್ರಕಾರ ದೇಶದ ಇತರ ಭಾಗಗಳಲ್ಲಿ ಸುಮಾರು 65,000 ಕೊಡವರಿದ್ದಾರೆ. ಕೊಡವ ತಕ್, ಲಿಪಿ ಇಲ್ಲದ ಕೊಡವ ಭಾಷೆಯನ್ನು ಒಳಗೊಂಡಂತೆ, ಕೇಂದ್ರ ಸರ್ಕಾರ ಸಂವಿಧಾನದ ಎಂಟನೇ ಶೆಡ್ಯೂಲ್‍ನಲ್ಲಿ ಮತ್ತು ಸಮೀಕ್ಷೆ ಕಾರ್ಯಕ್ಕೆ ಅಧಿಸೂಚನೆ ಹೊರಡಿಸಬೇಕು. ಕೊಡಗು ಸ್ವಾಯತ್ತ ಸ್ಥಾನಮಾನದ ಪರವಾಗಿರುವ ಬಿಜೆಪಿ ಸಂಸದ ಸುಬ್ರಮಣ್ಯಸ್ವಾಮಿ ಅವರು ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಪಾರ್ಲಿಮೆಂಟ್‍ನಲ್ಲಿ ಖಾಸಗಿ ಸದಸ್ಯ ಬಿಲ್ ಅನ್ನು ಮಂಡಿಸಿದರು. ಅದು ಚರ್ಚೆಗಾಗಿ ಉಳಿದಿದೆ ಎಂದರು.

Translate »