ಯಾವುದೇ ಅಹಿತಕರ ಘಟನೆಗಳಿಲ್ಲದೆ   ಹೊಸ ವರ್ಷಾಚರಣೆ: ಗೃಹ ಸಚಿವ ಪಾಟೀಲ್ ಸಂತಸ
ಮೈಸೂರು

ಯಾವುದೇ ಅಹಿತಕರ ಘಟನೆಗಳಿಲ್ಲದೆ ಹೊಸ ವರ್ಷಾಚರಣೆ: ಗೃಹ ಸಚಿವ ಪಾಟೀಲ್ ಸಂತಸ

January 2, 2019

ಬೆಂಗಳೂರು: ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ರಾಜ್ಯದಲ್ಲಿ ನಡೆಯದಿರುವುದಕ್ಕೆ ಗೃಹ ಸಚಿವ ಎಂ.ಬಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವರಾದ ನಂತರ ಮೊದಲ ಬಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ತಮ್ಮ ನಿವಾ ಸಕ್ಕೆ ಆಹ್ವಾನಿಸಿ, ಅವರೊಟ್ಟಿಗೆ ಔಪಚಾರಿಕವಾಗಿ ಇಲಾಖೆಯ ಮಾಹಿತಿ ಪಡೆದಿದ್ದಲ್ಲದೆ, ಹೊಸ ವರ್ಷ ಆಚರಣೆ ಸುಗಮವಾಗಿ ನಡೆಸಿಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.

ಹಿರಿಯ ಪೆÇಲೀಸ್ ಅಧಿಕಾರಿಗಳಾದ ಡಿಜಿ ಮತ್ತು ಐಜಿಪಿ ನೀಲಮಣಿ ಎಸ್. ರಾಜು, ನಗರ ಪೆÇಲೀಸ್ ಆಯುಕ್ತ ಸುನೀಲ್ ಕುಮಾರ್ ಸೇರಿ ಹಿರಿಯ ಪೆÇಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಔಪಚಾರಿಕ ಚರ್ಚೆ ಸಂದರ್ಭದಲ್ಲಿ ರಾತ್ರಿಯ ಹೊಸವರ್ಷ ಆಚರಣೆ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ ಅವರು ಎಲ್ಲವೂ ಸುಸೂತ್ರವಾಗಿ ನಡೆದಿದೆಯೇ, ಯಾವು ದಾದರೂ ಅಹಿತಕರ ಘಟನೆ ನಡೆದಿವೆಯೇ, ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ? ಪುಂಡಾಟಿಕೆಗಳ ನಿಗ್ರಹಕ್ಕೆ ಕ್ರಮಗಳೇನು ತೆಗೆದುಕೊಂಡಿದ್ದೀರಾ, ಸೂಕ್ಷ್ಮ ಸ್ಥಳಗಳಲ್ಲಿ ಪೆÇಲೀಸ್ ಪಹರೆ ಹೇಗಿತ್ತು ಎಂದು ವಿಚಾರಿಸಿದರು.

ರಾಜ್ಯದ ಯಾವುದೇ ಭಾಗದಲ್ಲಿ ಗೊಂದಲಗಳಿಗೆ ಆಸ್ಪದವನ್ನು ಮಾಡಿಕೊಡಬೇಡಿ. ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

Translate »