ಗಾಣಿಗರ ಸಂಘದ ಕ್ಯಾಲೆಂಡರ್ ಬಿಡುಗಡೆ
ಮೈಸೂರು

ಗಾಣಿಗರ ಸಂಘದ ಕ್ಯಾಲೆಂಡರ್ ಬಿಡುಗಡೆ

January 2, 2019

ಮೈಸೂರು: ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಗಾಣಿಗರ ಸಂಘದಿಂದ ಹೊರತಂದಿರುವ 2019ನೇ ಸಾಲಿನ ಕ್ಯಾಲೆಂಡರ್ ಅನ್ನು ಮಾಜಿ ಮೇಯರ್ ಅನಂತು ಮಂಗಳವಾರ ಬಿಡುಗಡೆಗೊಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತ ನಾಡಿದ ಅವರು, ಗಾಣಿಗರ ಸಂಘದ ವತಿ ಯಿಂದ ಸಮುದಾಯದ ಏಳಿಗೆಗಾಗಿ ವರ್ಷವಿಡೀ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಅದೇ ರೀತಿ ಇದೀಗ ಆರಂಭಗೊಂಡಿರುವ 2019ರ ಹೊಸ ವರ್ಷದಲ್ಲೂ ಸಮುದಾಯವನ್ನು ಮುಖ್ಯ ವಾಹಿನಿಗೆ ತರುವಂತಹ ಕಾರ್ಯ ಕ್ರಮಗಳು ಸಂಘದಿಂದ ಆಯೋಜನೆ ಗೊಳ್ಳಲಿ ಎಂದು ಹಾರೈಸಿದರು.
ಸಂಘದ ಗೌರವ ಸಲಹೆಗಾರ ಹಾಗೂ ಸಮುದಾಯದ ಮುಖಂಡ ದೇವಶೆಟ್ಟಿ ಮಾತನಾಡಿ, ಇದೇ ಜ.20ರಂದು ಬೆಂಗ ಳೂರಿನ ರಾಜಾಜೀನಗರದ ಕೆಂಪೇಗೌಡ ಸಮುದಾಯ ಭವನದಲ್ಲಿ ಶಿವಜ್ಯೋತಿ ವಧುವರರ ಕೇಂದ್ರದ ವತಿಯಿಂದ ಗಾಣಿಗ ಸಮುದಾಯದ ವಧು-ವರರ ಸಮಾವೇಶ ಏರ್ಪಡಿಸಲಾಗಿದೆ.

ಸಮುದಾಯದ ಬಂಧುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಸಂಘದ ಅಧ್ಯಕ್ಷ ರಾಜಶೆಟ್ಟಿ, ಗಾಣಿಗರ ವಿದ್ಯಾರ್ಥಿನಿಲ ಯದ ಅಧ್ಯಕ್ಷ ಚೆನ್ನಕೇಶವ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »