ಕುಶಾಲನಗರ: ಬುಡಕಟ್ಟು ಜನಾಂಗದಲ್ಲಿ ವಿಶಿಷ್ಠವಾದ ಕಲೆ ಮತ್ತು ಸಂಸ್ಕೃತಿ ಅಡಕವಾಗಿದ್ದು, ಇವುಗಳನ್ನು ಪ್ರಪಂಚದಾದ್ಯಂತ ಬಿಂಬಿಸುವ ಕೆಲಸಕ್ಕೆ ಮುಂದಾಗ ಬೇಕು ಎಂದು ನಟ ಚೇತನ್ ಹೇಳಿದ್ದಾರೆ.
ಇಲ್ಲಿಯ ಬ್ಯಾಡಗೊಟ್ಟದ ದಿಡ್ಡಳ್ಳಿಯ ಪುನರ್ವಸತಿ ಕೇಂದ್ರದಲ್ಲಿರುವ ನಿರಾಶ್ರಿತ ಕುಟುಂಬದವರೊಂದಿಗೆ 2019ರ ಹೊಸ ವರ್ಷದ ಆಚರಣೆ ಮಾಡಿ ಮಾತನಾಡಿದ ಅವರು, ಇವರಲ್ಲಿರುವ ಕಲೆಯು ಈ ತಲೆ ಮಾರಿಗೆ ನಶಿಸಿ ಹೋಗದೇ ಮುಂದಿನ ತಲೆಮಾರಿಗೂ ಉಳಿಯಲು ಇಂದಿನ ಯುವ ಪೀಳಿಗೆಗೆ ತಂದೆ ತಾಯಂದಿರ ಮಾರ್ಗ ದರ್ಶನ ಅತಿಮುಖ್ಯವಾಗಿದೆ. ಅಲ್ಲದೇ ನಿರಾಶ್ರಿತ ಕೇಂದ್ರದಲ್ಲಿರುವ ಯುವಕ ಯುವ ತಿಯರಿಗೆ ವಿದ್ಯಾಭ್ಯಾಸ ಮತ್ತು ಆರೋಗ್ಯದ ದೃಷ್ಟಿಯಿಂದ ಈ ವ್ಯಾಪ್ತಿಯಲ್ಲಿಯೇ ವಿದ್ಯಾಸಂಸ್ಥೆಗಳನ್ನು ಹಾಗೂ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು. ಬದುಕಿನಲ್ಲಿ ಸಂಸ್ಕೃತಿ ಉಳಿಸಿಕೊಳ್ಳಲು ಇಂತಹ ಸಾಂಸ್ಕೃ ತಿಕ ವಿಚಾರಗಳನ್ನು ಸಮಾಜಕ್ಕೆ ತಿಳಿಸು ವುದರ ಜೊತೆಗೆ ಸಮಾಜದಲ್ಲಿ ವೈವಿಧ್ಯತೆ ಉಳಿಯಬೇಕಾಗಿದೆ ಎಂದರು.
ನಿರಾಶ್ರಿತ ಕೇಂದ್ರಲ್ಲಿರುವ 500ಕ್ಕೂ ಹೆಚ್ಚು ಕುಟುಂಬಗಳನ್ನು ದಿಡ್ಡಳ್ಳಿಯಿಂದ ಸ್ಥಳಾಂ ತರ ಮಾಡಿದ ನಂತರದ ದಿನಗಳಲ್ಲಿಯೂ ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿ ಸುವ ಕೆಲಸದಲ್ಲಿ ಯುವ ಕರ್ನಾಟಕ ತಂಡ ತೊಡಗಿದೆ. ಮುಂದಿನ ದಿನಗಳಲ್ಲಿ ಬಸವನ ಹಳ್ಳಿ ಮತ್ತು ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಆದಷ್ಟು ಬೇಗನೇ ಪೂರ್ಣಗೊಳಿಸಿ ಗುಣಮಟ್ಟದ ಮನೆಗಳನ್ನು ಹಸ್ತಾಂತರಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ಮುಂದಾಗಬೇಕು. ಈಗಾಗಲೇ ನಿಧಾನ ಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದ್ದು, ಅವುಗಳನ್ನು ಬೇಗನೇ ಪೂರ್ಣ ಗೊಳಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆ ಯೊಂದಿಗೆ ಚರ್ಚಿಸಲಾಗುವುದು ಎಂದರು.
ದಿಡ್ಡಳ್ಳಿಯಲ್ಲಿ ನಡೆದ ಹೋರಾಟಕ್ಕೆ ನಮ್ಮ ತಂಡ ಬೆಂಬಲವಾಗಿತ್ತು. ಅದೇ ಮಾದರಿ ಯಲ್ಲಿ ಬುಡಕಟ್ಟು ಜನರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭ ನಟ ಚೇತನ್ ತಾಯಿ ಹಾಗೂ ಯುವ ಕರ್ನಾಟಕ ತಂಡದ 25 ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಬಸವನಹಳ್ಳಿ, ಬ್ಯಾಡಗೊಟ್ಟ ಹಾಡಿಯ ಪ್ರಮುಖರು ಇದ್ದರು.
ಈ ಸಂದರ್ಭ ಬ್ಯಾಡಗೊಟ್ಟದ ಕುಟುಂಬ ಗಳಿಗೆ ಸಿಹಿ ಹಂಚುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನು ಹಾಗೂ ಬ್ಯಾಗುಗಳನ್ನು ವಿತರಿಸಿದರು.