ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಚೇರಂಬಾಣೆಯಲ್ಲಿ ಪ್ರತಿಭಟನೆ
ಕೊಡಗು

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಚೇರಂಬಾಣೆಯಲ್ಲಿ ಪ್ರತಿಭಟನೆ

January 2, 2019

ಮಡಿಕೇರಿ, ಜ.1- ಕೊಡಗು ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಚೇರಂಬಾಣೆಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರ ವಣಿಗೆ ನಡೆಸಲಾಯಿತು.

ಮಡಿಕೇರಿ-ಭಾಗಮಂಡಲ ಮುಖ್ಯ ರಸ್ತೆ ಯಲ್ಲಿ ಮೆರವಣಿಗೆ ತೆರಳಿದ ಪ್ರತಿಭಟ ನಾಕಾರರು ಕಸ್ತೂರಿ ರಂಗನ್ ವರದಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಜಿಲ್ಲೆಯ ಜನರ ವಿರೋಧವನ್ನು ಕಡೆಗ ಣಿಸಿ ವರದಿ ಜಾರಿಗೆ ಪ್ರಯತ್ನಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ನಡೆಸುವುದಾಗಿ ಬೆಳೆಗಾರರು ಮತ್ತು ಕೃಷಿಕರು ಎಚ್ಚರಿಕೆ ನೀಡಿದರು.

ಚೇರಂಬಾಣೆ, ಕೋಪಟ್ಟಿ, ಬೇಂಗೂರು ಮತ್ತು ಕೊಳಗದಾಳು ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿಯಿಂದ ಹೊರ ಗಿಡುವಂತೆ ಈ ಸಂದರ್ಭ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಸೇವ್ ಕೊಡಗು ಫೋರಂ ಸಂಚಾಲಕ ಮಧು ಬೋಪಣ್ಣ, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಕೊಡಗಿನ ರೈತರು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಆತಂಕ ವ್ಯಕ್ತಪಡಿ ಸಿದರು. ಈ ಮಾರಕ ವರದಿಯಲ್ಲಿ ಜನರ ಚಟುವಟಿಕೆ, ಕೃಷಿ, ತೋಟಗಾರಿಕೆ ಬೆಳೆಗಳ ಮೇಲೆ ಬಹಳಷ್ಟು ನಿರ್ಬಂಧ ಹೇರಲಾಗಿದ್ದು, ಇದು ಜಿಲ್ಲೆಯ ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರ ಲಿದೆ. ಬೆರಳೆಣಿಕೆಯ ನಕಲಿ ಪರಿಸರವಾದಿ ಗಳಿಂದಾಗಿ ಜಿಲ್ಲೆಯ ಅಭಿವೃದ್ಧಿ ಯೋಜ ನೆಗಳು ನೆನೆಗುದಿಗೆ ಬಿದ್ದಿವೆ ಎಂದು ಮಧು ಬೋಪಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ನಕಲಿ ಪರಿ ಸರವಾದಿಗಳಿಂದ ಜಿಲ್ಲೆಯ ಜನರು ಪ್ರತಿ ನಿತ್ಯ ಪರಿತಪಿಸುವಂತಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿರುವ ಪರಿಸರವಾದಿಗಳು ಇಡೀ ಕೊಡಗು ಜಿಲ್ಲೆಯನ್ನೇ ಅರಣ್ಯ ಮಾಡಲು ಹೊರಟಿದ್ದಾರೆ. ಅನಾದಿ ಕಾಲದಿಂದಲೂ ಕೃಷಿಕರು ಮತ್ತು ಬೆಳೆಗಾರರು ಜಿಲ್ಲೆಯಲ್ಲಿ ಪರಿಸರವನ್ನು ಸಂರಕ್ಷಿಸಿಕೊಂಡು ಬಂದಿ ದ್ದಾರೆ. ನಕಲಿ ಪರಿಸರವಾದಿಗಳಿಂದ ಜಿಲ್ಲೆಯ ಜನತೆ ಪರಿಸರದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಮನುಮು ತ್ತಪ್ಪ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಗೋಣಿಕೊಪ್ಪದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಬೃಹತ್ ಹೋರಾಟ ಸಂಘಟಿಸಲಾಗುತ್ತದೆ ಎಂದು ಅವರು ಇದೇ ಸಂದರ್ಭ ಮಾಹಿತಿ ನೀಡಿ ದರು. ಪ್ರತಿಭಟನೆಯಲ್ಲಿ ಅಯ್ಯಂಡ ಸತೀಶ್ ಬೆಳ್ಯಪ್ಪ, ರೈತ ಹೋರಾಟ ಸಮಿತಿ ಮುಖಂಡ ಪಾಣತ್ತಲೆ ವಿಶ್ವನಾಥ್, ಬೇಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಡಿ. ಅಶೋಕ್, ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ದಬ್ಬಡ್ಕ ಶ್ರೀಧರ್, ಎಪಿಎಂಸಿ ಸದಸ್ಯ ಮೇದಪ್ಪ ಸೇರಿದಂತೆ ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »