ಪೊನ್ನಂಪೇಟೆ: ಪೊನ್ನಂಪೇಟೆ ಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿ ಸುವಂತೆ ಸರ್ಕಾರದ ಮೇಲೆ ಒತ್ತಡ ತರುವ ಇಚ್ಚೆಯಿಂದ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಹಾಗೂ ನಾಗರಿಕ ವೇದಿಕೆ ನೇತೃತ್ವದಲ್ಲಿ ಜ.7ರಂದು ಸಭೆ ಕರೆಯಲಾಗಿದೆ.
ಅಂದು ಬೆಳಗ್ಗೆ 11.30 ಗಂಟೆಗೆ ಪೊನ್ನಂ ಪೇಟೆ ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್ ಸಭಾಂಗಣದಲ್ಲಿ ಸಮಿತಿಯ ಗೌರ ವಾಧ್ಯಕ್ಷರೂ ಆದ ಶಾಸಕ ಕೆ.ಜಿ.ಬೋಪಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಾರ್ವ ಜನಿಕರು ಪಾಲ್ಗೊಂಡು ಸಲಹೆ ಸೂಚನೆ ನೀಡುವಂತೆ ನಾಗರಿಕ ವೇದಿಕೆ ಹಾಗೂ ತಾಲೂಕು ಹೋರಾಟ ಸಮಿತಿ ಕೋರಿದೆ.
ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರ ಹಿಸಿ ಕಳೆದ ಹಲವಾರು ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಆದ್ದರಿಂದ ಮುಂದಿನ ಹೋರಾಟದ ರೂಪು-ರೇಷೆ ಬಗ್ಗೆ ಸಭೆ ಯಲ್ಲಿ ಚರ್ಚೆ ನಡೆಸಿ ತೀರ್ಮಾನಿಸಲಾಗು ವುದು ಎಂದು ನಾಗರಿಕ ವೇದಿಕೆ ಅಧ್ಯಕ್ಷ ಪಿ.ಬಿ.ಪೂಣಚ್ಚ ತಿಳಿಸಿದ್ದಾರೆ.
ಕಳೆದ ವರ್ಷ 2018ರ ಜನವರಿ 9 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಡಿಕೇರಿಗೆ ಭೇಟಿ ನೀಡಿದ್ದ ವೇಳೆ ಜನಪ್ರತಿನಿಧಿಗಳ ಮೂಲಕ ಪೊನ್ನಂಪೇಟೆ ತಾಲೂಕು ಬೇಡಿಕೆಯ ಮಂಡಿಸಿ, ಮನವಿ ಪತ್ರವನ್ನು ಸಹ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ್ದ ಸಿದ್ದರಾಮಯ್ಯನವರು ಖಂಡಿತ ವಾಗಿಯೂ ಪೊನ್ನಂಪೇಟೆಯನ್ನು ತಾಲೂಕು ಕೇಂದ್ರವನ್ನಾಗಿ ಮುಂದಿನ ಬಜೆಟ್ ಅಧಿ ವೇಶನದಲ್ಲಿ ಘೋಷಿಸುವುದಾಗಿ ಭರವಸೆ ನೀಡಿದ್ದರು. ಆದರೆ ನಮ್ಮ ಬೇಡಿಕೆ ಫಲ ಪ್ರದವಾಗಲಿಲ್ಲ. ಇದೀಗ ಅಧಿಕಾರಕ್ಕೆ ಬಂದಿ ರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾ ರವಾದರೂ ಪೊನ್ನಂಪೇಟೆಯಲ್ಲಿ ತಾಲೂಕು ಕೇಂದ್ರವನ್ನಾಗಿ ಘೋಷಿಸಬಹುದೆಂದು ಆಶಿ ಸಲಾಗಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಪಕ್ಷಾ ತೀತವಾಗಿ ಬೆಂಗಳೂರಿಗೆ ನಿಯೋಗ ತೆರಳಿ ಜನಪ್ರತಿನಿಧಿಗಳ ಮೂಲಕ ಮನವಿಯನ್ನು ಸಲ್ಲಿಸಲಾಗುವುದೆಂದು ಪೂಣಚ್ಚ ಹೇಳಿದ್ದಾರೆ.
ಆಡಳಿತಾತ್ಮಕ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕುಗಳ ಪುನ ರ್ರಚನೆ ಅಗತ್ಯವೆಂದು ಮನಗಂಡ ಸರ್ಕಾರ 2007ರಲ್ಲಿ ಐಎಎಸ್ ಅಧಿಕಾರಿ ಎಂ.ಬಿ. ಪ್ರಕಾಶ್ ಅಧ್ಯಕ್ಷತೆಯಲ್ಲಿ ತಾಲೂಕು ಪುನರ್ ರಚನಾ ಸಮಿತಿಯನ್ನು ರಚಿಸಿ, ಚಿರಂಜೀವಿ ಸಿಂಗ್ ಹಾಗೂ ಶಿವಾನಂದ್ ಇಬ್ಬರು ಐಎಎಸ್ ಅಧಿಕಾರಿಗಳ್ನು ಸದಸ್ಯ ರನ್ನಾಗಿ ನೇಮಿಸಿತ್ತು. ಸಮಿತಿಯು 2008ರ ಏಪ್ರಿಲ್‍ನಲ್ಲಿ ಮಡಿಕೇರಿಗೆ ಭೇಟಿ ನೀಡಿ ಸಾರ್ವಜನಿಕರು ಹಾಗೂ ಸಂಬಂಧಿಸಿದ ಅಧಿ ಕಾರಿಗಳ ಅಭಿಪ್ರಾಯಗಳನ್ನು ಸಂಗ್ರಹಿ ಸಿತು. ಈ ವೇಳೆ ವಿರಾಜಪೇಟೆ ತಾಲೂಕು ಅತಿ ದೊಡ್ಡ ತಾಲೂಕಾಗಿದ್ದು, ಆಡಳಿ ತಾತ್ಮಕ ಹಿತದೃಷ್ಟಿಯಿಂದ ವಿಭಜಿಸಿ ತಾಲೂಕು ಮಟ್ಟದ ಹೆಚ್ಚಿನ ಸರ್ಕಾರಿ ಕಚೇರಿಗಳನ್ನು ಈಗಾಗಲೇ ಹೊಂದಿರುವ ಹಾಗೂ ಈ ಹಿಂದೆ ತಾಲೂಕು ಕೇಂದ್ರವಾಗಿದ್ದ ಪೊನ್ನಂ ಪೇಟೆಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವ ಅವಶ್ಯಕತೆಯನ್ನು ಮನ ದಟ್ಟು ಮಾಡಿ, ಸವಿವರ ಒಳಗೊಂಡ ಮನವಿ ಪತ್ರವನ್ನು ಆಗಿನ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಅವರ ನೇತೃತ್ವದಲ್ಲಿ ಏಪ್ರಿಲ್ 16, 2018ರಂದು ತಾಲೂಕು ಪುನರ್ರಚನಾ ಸಮಿತಿಗೆ ಸಲ್ಲಿಸಲಾಗಿತ್ತು.
ಆದರೆ ತಾಲೂಕು ಪುನರ್‍ರಚನಾ ಸಮಿತಿಯು ತನ್ನ ವರದಿಯಲ್ಲಿ ವಿರಾಜ ಪೇಟೆಯ ಪೊನ್ನಂಪೇಟೆಯಿಂದ 19 ಕಿ.ಮೀ ದೂರದಲ್ಲಿದೆ. ವಿರಾಜಪೇಟೆ ತಾಲೂ ಕನ್ನು ವಿಭಜಿಸುವುದು ಸೂಕ್ತವಲ್ಲ. ಹಾಗೇ ನಾದರೂ ಆದಲ್ಲಿ ವಿರಾಜಪೇಟೆ ತಾಲೂಕು ಚಿಕ್ಕದಾಗುತ್ತಿದೆ ಎಂದು ಅಭಿಪ್ರಾಯಪಟ್ಟಿ ತ್ತಲ್ಲದೆ, ನಾಪೋಕ್ಲು ಹಾಗೂ ಕುಶಾಲ ನಗರ ತಾಲೂಕುಗಳ ಬೇಡಿಕೆಯನ್ನು ಸಹ ಮಾನ್ಯ ಮಾಡಲಿಲ್ಲ.
ತಾಲೂಕು ಪುನರ್‍ರಚನಾ ಸಮಿತಿಯ ಶಿಫಾರಸ್ಸನ್ನು ಅಂಗೀಕರಿಸುವ, ಮಾರ್ಪಾಡು ಮಾಡುವ ಅಥವಾ ತಿರಸ್ಕರಿಸುವ ಅಧಿ ಕಾರ ಸರ್ಕಾರಕ್ಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾ ರಕ್ಕೆ ವಾಸ್ತವಾಂಶವನ್ನು ಮತ್ತೊಮ್ಮೆ ಮನ ದಟ್ಟು ಮಾಡಬೇಕಾಗಿದೆ. ಅಂದರೆ ಪೊನ್ನಂ ಪೇಟೆಯು ವಿರಾಜಪೇಟೆಯಿಂದ 21 ಕಿಮೀ ದೂರದಲ್ಲಿದ್ದು, ಇದಕ್ಕಿಂತ ಕಡಿಮೆ ಅಂತ ರವಿರುವ ಹಲವಾರು ತಾಲೂಕುಗಳು ನಮ್ಮ ರಾಜ್ಯದಲ್ಲಿದೆ. ಅಲ್ಲದೆ ಹೊಸದಾಗಿ ಘೋಷಿ ಸಿರುವ ತಾಲೂಕುಗಳು ಸಹ 10-15 ಕಿಮೀ ಅಂತರದಲ್ಲಿದೆ. ಕೆಲವು ಹೊಸ ತಾಲೂಕು ಗಳೂ ಸಹ ಅತಿ ಚಿಕ್ಕವಾಗಿದ್ದು, ತಾಲೂಕು ಪುನರ್‍ರಚನೆಯ ನಂತರವೂ ವಿರಾಜ ಪೇಟೆ ತಾಲೂಕು 621.35 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಲಿದೆ. ಅಲ್ಲದೆ ಪ್ರಸ್ತಾ ಪಿಸಿದ ಪೊನ್ನಂಪೇಟೆ ತಾಲೂಕು ಸಹ 1025 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಲಿದೆ.
2009ರಲ್ಲಿ ಸಮಿತಿ 43 ಹೊಸ ತಾಲೂ ಕುಗಳಿಗೆ ಮಾತ್ರ ಶಿಫಾರಸ್ಸು ಮಾಡಿದ್ದರೂ ಸರ್ಕಾರ ತನ್ನದೇ ಕಾರಣಗಳಿಂದ ಹಲ ವಾರು ಬದಲಾವಣೆಗಳೊಂದಿಗೆ 9 ಹೊಸ ತಾಲೂಕುಗಳನ್ನು ಸೇರ್ಪಡೆ ಮಾಡಿ 50 ತಾಲೂಕು ಕೇಂದ್ರಗಳನ್ನು 2017-18ರ ಸಾಲಿನಲ್ಲಿ ಘೋಷಿಸಿದೆ.
ಆದರೆ ಎಲ್ಲಾ ಸೌಲಭ್ಯಗಳು, ವೈಶಿಷ್ಟ ತೆಯನ್ನು ಹೊಂದಿದ್ದ ಪೊನ್ನಂಪೇಟೆ ಯನ್ನು ಕೈಬಿಟ್ಟಿದ್ದು ಬೇಸರ ತರಿಸಿದೆ. ಪ್ರಸ್ತಾ ಪಿಸಿರುವ ಪೊನ್ನಂಪೇಟೆ ತಾಲೂಕು ವ್ಯಾಪ್ತಿ ಯಲ್ಲಿ 4 ಹೋಬಳಿಗಳು, 21 ಗ್ರಾಪಂಗಳು, ಮೂರು ಅರಣ್ಯ ಗ್ರಾಮ, ನಾಗರಹೊಳೆ ಅಭಯಾರಣ್ಯ ಸೇರಿ 49 ಗ್ರಾಮಗಳು, 1025 ಚ.ಕಿ.ಮೀ ವಿಸ್ತೀರ್ಣ, 1.25 ಲಕ್ಷ ಜನ ಸಂಖ್ಯೆ ಇದ್ದು, ಪೊನ್ನಂಪೇಟೆಯಲ್ಲಿ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳು, ನ್ಯಾಯಾಲಯ, ತಾಪಂ ಕಚೇರಿ, ವಿವಿಧ ವಿದ್ಯಾಸಂಸ್ಥೆ, ಬ್ಯಾಂಕಿಂಗ್ ಸಂಸ್ಥೆಗಳು ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಸರ್ಕಾರಿ ಕಚೇ ರಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.
ಈ ಹಿಂದಿನ ತಾಲೂಕು ಕೇಂದ್ರ, ಮಲೆ ನಾಡು ಪ್ರದೇಶ, ಕನಿಷ್ಟ ಸೌಲಭ್ಯ ಹೊಂದಿ ರುವ, ರಾಜ್ಯ ಹೆದ್ದಾರಿ ಹಾದು ಹೋಗುವ, ಕನಿಷ್ಟ ನಿರ್ವಹಣೆ ಖರ್ಚು ಹಾಗೂ ಕಟ್ಟ ಕಡೆ ಗ್ರಾಮದಿಂದ ಪ್ರಸ್ತಾ ಪಿಸಿದ ತಾಲೂಕಿಗೆ ಇರುವ ದೂರವನ್ನು 30-35 ಕಿಮೀ ಒಳಪಟ್ಟಿರಬೇಕು ಎಂದು ಸರ್ಕಾರ ಹೊಸ ತಾಲೂಕು ರಚನೆಗೆ ಮಾನದಂಡ ವಿಧಿಸಿದೆ. ಸರ್ಕಾರದ ಈ ನಿಯಮದಂತೆಯೇ ಪೊನ್ನಂಪೇಟೆ ಯಲ್ಲಿ ಎಲ್ಲಾ ಸವಲತ್ತುಗಳು ಇದ್ದು, ವಿರಾಜಪೇಟೆ ತಾಲೂಕು ಕಚೇರಿಯ ಲ್ಲಿರುವ ಐವರು ಗುಮಾಸ್ತರು, ಐವರು ಸರ್ವೇಯರ್, ಓರ್ವ ಶಿರಸ್ತೇದಾರರನ್ನು ಇಲ್ಲಿಗೆ ವರ್ಗಾಯಿಸಿ ನಿಯೋಜಿಸಬಹುದಾಗಿದೆ. ಓರ್ವ ತಹಶೀಲ್ದಾರರನ್ನು ಮಾತ್ರ ಹೊಸ ದಾಗಿ ನೇಮಕ ಮಾಡಬೇಕಾಗಿದ್ದು, ಕನಿಷ್ಟ ವೆಚ್ಚದ ನಿರ್ವಹಣೆಯಲ್ಲಿ ಪೊನ್ನಂಪೇಟೆ ತಾಲೂಕನ್ನು ರಚನೆ ಮಾಡ ಬಹುದು. ಅಲ್ಲದೆ ಪ್ರಸ್ತಾಪಿಸಿರುವ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ರೀತಿಯಲ್ಲಿ ಸುಮಾರು ರೂ. 50 ಕೋಟಿಗೂ ಮೇಲ್ಪಟ್ಟು ತೆರಿಗೆ ಹಣ ಸರ್ಕಾರಕ್ಕೆ ಸಂದಾಯವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಬಳಿ ಪಕ್ಷಾತೀತ ವಾಗಿ ನಿಯೋಗ ತೆರಳಿ ನಮ್ಮ ಬೇಡಿಕೆ ಯನ್ನು ಪುರಸ್ಕರಿಸುವಂತೆ ಮನವಿ ಸಲ್ಲಿ ಸಬೇಕಿದೆ. ಈ ಬಗ್ಗೆ ಪೂರ್ವಭಾವಿಯಾಗಿ ಸಾರ್ವಜನಿಕರು, ಸಂಘ ಸಂಸ್ಥೆಗಳ ಅಭಿ ಪ್ರಾಯವನ್ನು ಸಂಗ್ರಹಿಸಲಾಗುತ್ತಿದ್ದು, ಜ.7ರ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿ ಸುವಂತೆ ನಾಗರಿಕ ವೇದಿಕೆ ಅಧ್ಯಕ್ಷ ಪಿ.ಬಿ. ಪೂಣಚ್ಚ ಮನವಿ ಮಾಡಿದ್ದಾರೆ.