ನಿಫಾ: ಶಂಕಿತರ ಆರೋಗ್ಯದ ಮೇಲೆ ತೀವ್ರ ನಿಗಾ
ಚಾಮರಾಜನಗರ

ನಿಫಾ: ಶಂಕಿತರ ಆರೋಗ್ಯದ ಮೇಲೆ ತೀವ್ರ ನಿಗಾ

May 28, 2018

ಗುಂಡ್ಲುಪೇಟೆ: ನಿಫಾ ವೈರಸ್ ಶಂಕಿತರ ಆರೋಗ್ಯ ತಪಾ ಸಣೆ ಹಾಗೂ ಅವರಿಂದ ರಕ್ತ, ಉಗುಳು, ಮೂತ್ರ ಹಾಗೂ ಮೆದುಳಿನ ಸ್ರಾವಗಳ ಮಾದರಿ ಸಂಗ್ರಹಿಸಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ನಾಗರಾಜು ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳಿಗೂ ಈ ಬಗ್ಗೆ ಎಚ್ಚರಿಕೆಯಿಂದ ಇರಲು ಸೂಚಿಸ ಲಾಗಿದೆ. ಕೇರಳದಿಂದ ಬರುವ ಜನರ ಬಗ್ಗೆ ನಿಗಾ ವಹಿಸಲಾಗಿದ್ದು ಅವರನ್ನು ಗಮ ನಿಸಲಾಗುತ್ತಿದೆ. ವೈರಸ್ ಸೋಂಕಿತರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ವಿಶೇಷ ಕೊಠಡಿಯಲ್ಲಿ ಪ್ರತ್ಯೇಕವಾಗಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಸೋಂಕು ಲಕ್ಷಣ ಆಧಾರಿತ ಚಿಕಿತ್ಸೆ ಪಡೆಯುವವವÀರಿಗೆ ಉಸಿರಾಟದ ತೊಂದರೆ ಇದ್ದರೆ ಸಮೀಪದ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಅಲ್ಲದೆ ಹಕ್ಕಿಗಳು ತಿಂದ ಹಣ್ಣುಗಳನ್ನು ತಿನ್ನದಂತೆ ಹಾಗೂ ಎಲ್ಲ್ಲ ಹಣ್ಣು, ತರಕಾರಿಗಳನ್ನು ಶುದ್ಧ ಬಿಸಿನೀರಿನಲ್ಲಿ ತೊಳೆದು ಬಳಸುವಂತೆ ಸಾವಿರಾರು ಕರಪತ್ರÀಗಳನ್ನು ಮುದ್ರಿಸಿ ಮನೆಮನೆಗೂ ತಲುಪಿಸಲಾಗುತ್ತಿದೆ. ಹೋಟೆಲ್, ಜ್ಯೂಸ್ ಅಂಗಡಿ ಮುಂತಾದ ಕಡೆಗಳಲ್ಲಿ ಹೆಚ್ಚಿನ ತಿಳುವಳಿಕೆ ನೀಡಿ ಎಚ್ಚರಿಸಲಾಗಿದೆ ಎಂದು ತಿಳಿಸಿದರು.

ಪಶು ವೈದ್ಯಕೀಯ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳ ಸಹಕಾರದಲ್ಲಿ ಎಲ್ಲ ರಿಗೂ ಈ ಬಗ್ಗೆ ಮುನ್ನಚ್ಚರಿಕೆ ವಹಿಸಲು ಜಾಗೃತಿ ಮೂಡಿಸಲಾಗುತ್ತಿದ್ದು, ಜನತೆ ಅನ ಗತ್ಯ ಭೀತಿಗೊಳಗಾಗಬಾರದು ಎಂದರು.

ಡಾ.ಅನಿಲ್ ಕುಮಾರ್, ಡಾ.ನಾಗಾ ಚಾರ್, ಮುಖಂಡರಾದ ಅಂಕಪ್ಪ, ಪುಟ್ಟಸ್ವಾಮಿ, ಚಂದ್ರಶೇಖರ್ ಇದ್ದರು.

 

Translate »