24 ಗಂಟೆಗಳಲ್ಲಿ 23 ಮಂದಿಗೆ ಜೀವಾವಧಿ ಶಿಕ್ಷೆ, ವರ್ಷದಲ್ಲಿ 14 ಮಂದಿಗೆ ಗಲ್ಲು, 3 ವರ್ಷದಲ್ಲಿ 125 ಎನ್‍ಕೌಂಟರ್
ಲಖನೌ, ಅ.21- ಉತ್ತರ ಪ್ರದೇಶ ಹಿಂದಿನಿಂದಲೂ ಅಪರಾಧಿಕ ಚಟುವಟಿಕೆಯ ತಾಣ, ಗೂಂಡಾ ರಾಜ್ಯ ಎಂದೇ ಕುಖ್ಯಾತಿ ಗಳಿಸಿದೆ. ಆದರೆ ಇತ್ತೀಚೆಗೆ ನಡೆಯುತ್ತಿರುವ ಅಪರಾಧ ಘಟನೆಗಳು ದೇಶಾದ್ಯಂತ ಭಾರೀ ಸುದ್ದಿ ಮಾಡುತ್ತಿವೆ. ಇದರ ಬೆನ್ನಲ್ಲೇ ಅಪರಾಧಿಗಳಿಗೆ ನಡುಕ ಹುಟ್ಟಿಸುವ ಸುದ್ದಿ ರಾಜ್ಯ ಸರ್ಕಾರದಿಂದ ಹೊರಬಿದ್ದಿದೆ.
ಅತ್ಯಂತ ಗಮನಾರ್ಹ ಸಂಗತಿ ಎಂದರೆ, ಕಳೆದ 24 ಗಂಟೆ ಗಳಲ್ಲಿ 23 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇವರಲ್ಲಿ ಹೆಚ್ಚಿನ ಅಪರಾಧಿಗಳು ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗಿದವರೇ ಆಗಿದ್ದಾರೆ. 31 ಅಪರಾಧಿಗಳಿಗೆ ಭಾರೀ ಮೊತ್ತದ ದಂಡವನ್ನೂ ವಿಧಿಸಲಾಗಿದೆ. ಮಹಿಳೆಯರು, ಯುವತಿಯರ ಮೇಲೆ ನಡೆಯುವ ಅಪರಾಧಗಳನ್ನು ತಡೆಗಟ್ಟಲೆಂದೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಇತ್ತೀಚೆಗೆ `ಮಿಷನ್ ಶಕ್ತಿ’ ಎಂಬ ಯೋಜನೆ ಜಾರಿಗೆ ತಂದಿದೆ. ಅಪರಾಧಿಗಳಿಗೆ ತಕ್ಕಶಾಸ್ತಿ ಮಾಡುವ ಯೋಜನೆ ಇದಾಗಿದೆ ಎಂದು ಎಡಿಜಿ ಅಶುತೋಷ್ ಪಾಂಡೆ ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 49 ಪ್ರಕರಣಗಳ ಜಾಮೀನು ರದ್ದುಗೊಳಿಸಲಾಗಿದೆ. 28 ಅಪರಾಧಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಕಳೆದ ಒಂದು ವರ್ಷದಲ್ಲಿ ಮಹಿಳೆಯರ ವಿರುದ್ಧ ಅಪರಾಧ ಎಸಗಿದ್ದ 11 ಪ್ರಕರಣಗಳಲ್ಲಿನ 14 ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಬಂಧಿಸಲು ಬಂದ ಪೆÇಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳುತ್ತಿದ್ದ ಸಂದರ್ಭ 2017ರ ಮಾ.20ರಿಂದ 2020ರ ಅ.5ರವರೆಗೆ ನಡೆದ ಎನ್‍ಕೌಂಟರ್‍ಗಳಲ್ಲಿ ಒಟ್ಟು 125 ಮಂದಿ ಮೃತಪಟ್ಟು, 2,607 ಮಂದಿ ಗಾಯ ಗೊಂಡಿದ್ದಾರೆ ಎಂದು ಪೆÇಲೀಸ್ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. 2019-20ರ ಅವಧಿಯಲ್ಲಿ ಕರ್ತವ್ಯದಲ್ಲಿ 9 ಪೆÇಲೀಸರು ಪ್ರಾಣ ಕಳೆದುಕೊಂಡಿದ್ದು, ಅವರನ್ನು ನಾನು ಗೌರವಿಸುತ್ತೇನೆ. ಅವರ ತ್ಯಾಗ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂದು ಯೋಗಿ ಹೇಳಿದರು.