ನಂ.ಗೂಡಲ್ಲಿ ವಿವಿಧ ಸಂಘಗಳಿಂದ ಫ.ಗು.ಹಳಕಟ್ಟಿ ಜನ್ಮದಿನ ಆಚರಣೆ
ಮೈಸೂರು

ನಂ.ಗೂಡಲ್ಲಿ ವಿವಿಧ ಸಂಘಗಳಿಂದ ಫ.ಗು.ಹಳಕಟ್ಟಿ ಜನ್ಮದಿನ ಆಚರಣೆ

July 12, 2021

ಮೈಸೂರು, ಜು.11(ಎಸ್‍ಪಿಎನ್)- ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆಯನ್ನು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಭಾನುವಾರ ಆಚರಿಸಲಾಯಿತು.

ಮೈಸೂರಿನ ಕದಳಿ ಮಹಿಳಾ ಸಂಘ, ಬಾಂದ್ಯವ್ಯ ಸಾಂಸ್ಕøತಿಕ ಸಂಸ್ಥೆ, ಸಂಗಮ ಮಹಿಳಾ ವೇದಿಕೆ ಹಾಗೂ ಪರಸ್ವರ ಗೆಳೆಯರ ಬಳಗದ ಸಂಯುಕ್ತಾ ಶ್ರಯದಲ್ಲಿ ನಂಜನಗೂಡಿನ ವಿದ್ಯಾನಗರದ ಬಡಾವಣೆಯ ಅನುಭವ ಮಂಟಪ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫ.ಗು.ಹಳಕಟ್ಟಿ ಭಾವಚಿತ್ರಕ್ಕೆ ಚಿಂತಕ ಕಲ್ಮಳಿ ನಟರಾಜು ಪುಷ್ಪನಮನ ಸಲ್ಲಿಸಿದರು.

ನಂತರ ಮಾತನಾಡಿ, 1880ರ ಜು.2ರಂದು ಧಾರವಾಡದಲ್ಲಿ ದಾನಮ್ಮ-ಗುರುಬಸಪ್ಪ ದಂಪತಿ ಪುತ್ರನಾಗಿ ಜನಿಸಿದ ಹಳಕಟ್ಟಿ, ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಬಿ.ಎ., ಎಲ್‍ಎಲ್ ಬಿ ಪದವಿ ಮುಗಿಸಿದ ಬಳಿಕ ವಿಜಯಪುರ (ಹಿಂದಿನ ವಿಜಾಪುರ)ದಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ನಂತರ ಹಲ ವಾರು ಶಿಕ್ಷಣ ಸಂಸ್ಥೆ, ಸಾಮಾಜಿಕ ಸೇವೆ, ಸಾಹಿತ್ಯ ಕ್ಷೇತ್ರ ದಲ್ಲಿ ತೊಡಗಿಸಿಕೊಂಡಿದ್ದರು ಎಂದು ನೆನಪಿಸಿಕೊಂಡರು.

ಫ.ಗು.ಹಳಕಟ್ಟಿ ಅವರು ಸಂಪಾದಿಸಿದ ವಚನ ಗಳನ್ನು ಮುದ್ರಿಸಲು ಇತರೆ ಪ್ರಕಾಶಕರು ನಿರಾಕರಿಸಿ ದಾಗ ಸ್ವಂತ ಮುದ್ರಣಾಲಯವನ್ನೇ 1926ರಲ್ಲಿ ಆರಂಭಿಸಿ, ವಚನಗಳು ಸೇರಿದಂತೆ ಅನೇಕ ಪುಸ್ತಕಗಳನ್ನು ಮುದ್ರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

ಇದೇ ವೇಳೆ, ಉಪನ್ಯಾಸ ನೀಡಿದ ಶಾಂತಮಲ್ಲಪ್ಪರ ಅವರನ್ನು ಗೌರವಿಸಲಾಯಿತು.
ವಿದ್ಯಾನಗರ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯ ದರ್ಶಿ ಗುರುಮಲ್ಲಪ್ಪ ಸಂಚಾಲಕ ದೇವನೂರು ಮಹದೇವ ಸ್ವಾಮಿ ಮತ್ತು ಸಂಗಮ ಮಹಿಳಾ ವೇದಿಕೆಯ ಅಧ್ಯಕ್ಷೆ ಶಶಿಕಲಾ ಮತ್ತು ಸದಸ್ಯರು ಕಾರ್ಯಕ್ರಮದಲ್ಲಿದ್ದರು.

Translate »