ಮೈಸೂರಲ್ಲಿ ಈ ಬಾರಿ `ಪ್ರೇಮಿಗಳ ದಿನ’ ಮಂಕು ಮಂಕು…!
ಮೈಸೂರು

ಮೈಸೂರಲ್ಲಿ ಈ ಬಾರಿ `ಪ್ರೇಮಿಗಳ ದಿನ’ ಮಂಕು ಮಂಕು…!

February 15, 2021

ಮೈಸೂರು, ಫೆ.14(ಎಂಟಿವೈ)- ಪ್ರತಿವರ್ಷ ಫೆ.14ರಂದು (ಪ್ರೇಮಿಗಳ ದಿನ) ಮೈಸೂರಿನ ವಿವಿಧ ಪ್ರವಾಸಿತಾಣಗಳಲ್ಲಿ ಗರಿ ಬಿಚ್ಚಿದ ನವಿಲಂತೆ ವಿಹರಿಸುತ್ತಿದ್ದ ಮೈಸೂರು ಜಿಲ್ಲೆಯ ಪ್ರೇಮಿ ಗಳು ಈ ಬಾರಿ ಮನೆಯಿಂದ ಹೊರಬರಲು ಹಿಂದೇಟು ಹಾಕಿ ದರು. ವಿವಿಧ ಕಾರಣಗಳಿಂದಾಗಿ ಸಾಂಸ್ಕøತಿಕ ನಗರಿ ಮೈಸೂರಲ್ಲಿ ಈ ಬಾರಿ ಪ್ರೇಮಿಗಳ ದಿನದ ಸಡಗರವಿರಲಿಲ್ಲ. ಕೆಲವೆಡೆ ಕಂಡೂ ಕಾಣದಂತಿದ್ದ ಆಚರಣೆ ತುಸು ಮಂಕಾಗಿತ್ತು.

ಫೆ.14 ಬಂತೆಂದರೆ ಕೆಆರ್‍ಎಸ್, ಅರಮನೆ, ಚಾಮುಂಡಿಬೆಟ್ಟ, ಶ್ರೀರಂಗಪಟ್ಟಣ, ಬಂಡೀ ಪುರ ಮೊದಲಾದ ಪ್ರವಾಸಿ ತಾಣಗಳಿಗೆ ತೆರಳಿ ವಿಹರಿಸುತ್ತಿದ್ದ ಜೋಡಿಗಳಿಗೆ ಈ ಬಾರಿ ನಿರುತ್ಸಾಹ. ಇಂದು ಭಾನುವಾರ ವಾಗಿದ್ದರಿಂದ ಕಾಲೇಜುಗಳಿಗೆ ರಜೆ ಇದ್ದುದರಿಂದಲೋ ಏನೋ ವಿದ್ಯಾರ್ಥಿಗಳು ಮನೆಬಿಟ್ಟು ಹೊರಬಂದಿರಲಿಲ್ಲ. ಬಹಿರಂಗವಾಗಿ ಕಾಣಿಸಿಕೊಳ್ಳಲು ಹಿಂದೇಟು ಹಾಕಿದರು.

ಪ್ರಮುಖ 3 ಕಾರಣ: ಮೈಸೂರಿನ ಪ್ರೇಮಿಗಳು ಇಂದು `ವ್ಯಾಲೆಂಟೇನ್ಸ್ ಡೇ’ ಆಚರಿಸದಿರಲು ಪ್ರಮುಖ 3 ಕಾರಣಗಳಿರ ಬೇಕು. 2019ರ ಫೆ.14ರಂದು ಪುಲ್ವಮಾದಲ್ಲಿ ಉಗ್ರಗಾಮಿ ಆತ್ಮಾ ಹುತಿ ದಾಳಿಯಿಂದ ಭಾರತೀಯ ಸೇನೆಯ 43 ಯೋಧರು ಹುತಾತ್ಮರಾದರು. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ `ಫೆ.14-ಭಾರತೀಯ ಯೋಧರಿಗೆ ಕರಾಳ ದಿನ’ ಅಭಿಯಾನ ನಡೆದು, ಪ್ರೇಮಿಗಳ ದಿನ ಆಚರಿಸದಂತೆ ಕೋರ ಲಾಗಿತ್ತು. ಅಲ್ಲದೇ, ಇಂದು ಮಾಘಮಾಸದ ತೃತೀಯ ದಿನ ಶ್ರೇಷ್ಠವಾಗಿದ್ದರಿಂದ ಎಲ್ಲೆಡೆ ವಿವಾಹ, ಗೃಹಪ್ರವೇಶ, ನಾಮಕರಣ, ಹೋಮ-ಹವನ, ಪುಣ್ಯಸ್ನಾನ. ಹಾಗಾಗಿ ಮನೆಮಂದಿಯೆಲ್ಲಾ ವಿವಿಧ ಶುಭ ಕಾರ್ಯದಲ್ಲಿ ತೊಡಗಿದ್ದರಿಂದ ಪೋಷಕರು, ಸಂಬ ಂಧಿಕರು, ಪರಿಚಯಸ್ಥರಿಗೆ ಸಿಕ್ಕಿ ಬೀಳಬಹುದೆಂಬ ಭಯದಲ್ಲಿ ಪ್ರೇಮಿಗಳು ಆಚರಣೆಯಿಂದ ದೂರ ಉಳಿದರು. ಇನ್ನೊಂದೆಡೆ ಭಜರಂಗದಳ, ಶ್ರೀರಾಮಸೇನೆ ಮೊದಲಾದ ಹಿಂದೂಪರ ಸಂಘಟನೆ ಗಳು, ಪ್ರೇಮಿಗಳ ದಿನ ಆಚರಿಸಿ ಸಿಕ್ಕಿಬಿದ್ದರೆ ಅಲ್ಲೇ ಮದುವೆ ಮಾಡಿಸುವುದಾಗಿ ಎಚ್ಚರಿಕೆ ನೀಡಿದ್ದರಿಂದ ಬಹಳಷ್ಟು ಪ್ರೇಮಿಗಳು ಆಚರಣೆಗಿಳಿಯಲಿಲ್ಲ. ಜತೆಗೆ ಕೊರೊನಾ ಭೀತಿಯೂ ಪ್ರೇಮಿಗಳ ನಡುವೆ `ಅಂತರ’ವಿರಲು ಕಾರಣವಾಯಿತು.

ಮೈಸೂರಿನ ಕಾರಂಜಿಕೆರೆ, ಮೃಗಾಲಯ, ಚಾಮುಂಡಿಬೆಟ್ಟದಲ್ಲಿ ಪ್ರೇಮಿಗಳ ದಿನದಂದು ಜೋಡಿಗಳು ಕಂಡು ಬರುತ್ತಿದ್ದವು. ಈ ಬಾರಿ ಬೆರಳೆಣಿಕೆ ಜೋಡಿಗಳಷ್ಟೇ ಕಂಡವು. ಭದ್ರತಾ ಸಿಬ್ಬಂದಿಗಳಿ ರುವ ಕಾರಣ ಕಾರಂಜಿಕೆರೆ ಪ್ರೇಮಿಗಳ ವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳ. ಹಾಗಾಗಿ ಬೆದರಿಕೆ ನಡುವೆಯೂ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಕೆಲ ಜೋಡಿಗಳು ಕಾರಂಜಿ ಕೆರೆಗೆ ಭೇಟಿ ನೀಡಿ, ದೋಣಿ ವಿಹಾರ ಮಾಡಿ ಖುಷಿಪಟ್ಟವು.

 

 

Translate »