ಕೆಂಗಲ್ ಹನುಮಂತಯ್ಯರದು ಕಲೆ, ಸಾಹಿತ್ಯ, ವ್ಯಕ್ತಿತ್ವ ಒಟ್ಟುಗೂಡಿದ ಸೌಂದರ್ಯ
ಮೈಸೂರು

ಕೆಂಗಲ್ ಹನುಮಂತಯ್ಯರದು ಕಲೆ, ಸಾಹಿತ್ಯ, ವ್ಯಕ್ತಿತ್ವ ಒಟ್ಟುಗೂಡಿದ ಸೌಂದರ್ಯ

February 15, 2021

ಮೈಸೂರು, ಫೆ.14(ವೈಡಿಎಸ್)- ಮೈಸೂ ರಿನ ಜಯನಗರದ ನೇಗಿಲಯೋಗಿ ಮರು ಳೇಶ್ವರ ಸೇವಾ ಭವನದಲ್ಲಿ ಭಾನುವಾರ `ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಜಯಂತ್ಯುತ್ಸವ’ವನ್ನು ಭಾನುವಾರ ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರು ಕೆಂಗಲ್ ಹನುಮಂತಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯ ಕ್ರಮ ಉದ್ಘಾಟಿಸಿದರು.

`ಕೆಂಗಲ್ ಹನುಮಂತಯ್ಯ ರೈಲ್ವೆ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ’ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್‍ಗಳಾದ ಕುವೆಂಪುನಗರ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ರಾಜು, ದೇವ ರಾಜ ಸಂಚಾರ ಪೊಲೀಸ್ ಠಾಣೆಯ ಕಾಂತ ರಾಜು, ಇಎಸ್‍ಐ ಆಸ್ಪತ್ರೆ ಫಾರ್ಮಾಸಿಸ್ಟ್ ಎಸ್.ಸೋಮಣ್ಣ, ಶುಶ್ರೂಷಕರಾದ ಚಂದ್ರ ಕಲಾ, ಹೆಚ್.ಆರ್.ಸಂತೋಷ್, ಇಎಸ್‍ಐ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಶಿವಕುಮಾರ್, ಪಿ.ಉಮೇಶ್, ಮಂಗಳಮ್ಮ, ಸುಶೀಲಮ್ಮ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತ ನಾಡಿ, ಕೆಂಗಲ್ ಹನುಮಂತಯ್ಯ ಅವರದ್ದು ವಿಶೇಷ ವ್ಯಕ್ತಿತ್ವ. ಬಡ ಕುಟುಂಬದಲ್ಲಿ ಹುಟ್ಟಿದರೂ ಕಷ್ಟಪಟ್ಟು ಕಾನೂನು ಪದವಿ ಪಡೆದು ವಕೀಲ ವೃತ್ತಿ ಆರಂಭಿಸಿದರು. ಜತೆಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ತಮ್ಮ ವ್ಯಕ್ತಿತ್ವ ಹೆಚ್ಚಿಸಿಕೊಂಡರು. ಅದೇ ಕಾರಣವಾಗಿ ರಾಜ್ಯದ ಸಿಎಂ ಆದರು. ದಕ್ಷ ಆಡಳಿತ ನೀಡಿದರು. ವಿಧಾನಸೌಧ ಕಟ್ಟಡ ವೊಂದೇ ಸಾಕು ಅವರ ವ್ಯಕ್ತಿತ್ವ, ಸಾಧನೆ ಯನ್ನು ತೋರಿಸಲು ಎಂದರು. ಕಲೆ, ಸಾಹಿತ್ಯ, ವ್ಯಕ್ತಿತ್ವ ಎಲ್ಲವೂ ಒಟ್ಟಾಗಿ ಬಂದ ಸೌಂದರ್ಯ ಅವರದ್ದು. ಕರ್ನಾಟಕವನ್ನು ಏಕೀಕರಣ ಗೊಳಿಸಿ ಎಲ್ಲರೂ ಒಟ್ಟಾಗಿರಬೇಕು ಎಂಬ ಮನಸ್ಥಿತಿ ಅವರದಾಗಿತ್ತು ಎಂದು ಬಣ್ಣಿಸಿದರು.

ಮುಖ್ಯಮಂತ್ರಿಯಾಗಿದ್ದಾಗ ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿದರೆ, ಎಸ್.ಎಂ.ಕೃಷ್ಣ `ಶಕ್ತಿಸೌಧ’ ನಿರ್ಮಿಸಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸಿ ದರು. ಇವರೆಲ್ಲಾ ಸಾಮಾಜಿಕ, ರಾಜಕೀಯ ವಾಗಿ ಸಾಧನೆ ತೋರಿದರೆ, ಸಾಹಿತ್ಯದಲ್ಲಿ ರಾಷ್ಟ್ರಕವಿ ಕುವೆಂಪು, ಅಧ್ಯಾತ್ಮಿಕವಾಗಿ ಜನ ರಲ್ಲೇ ದೇವರನ್ನು ಕಂಡಿದ್ದ ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿ ಇವರೆಲ್ಲಾ ದಾರಿ ದೀಪವಾಗಿ ನಮ್ಮ ವ್ಯಕ್ತಿತ್ವವನ್ನು ವಿಕಸನ ಗೊಳಿಸುವಲ್ಲಿ ಕಾರಣರಾಗಿದ್ದಾರೆ ಎಂದು ಸ್ಮರಿಸಿದರು. ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ, ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್ ಗೌಡ, ರೈಲ್ವೆ ಆಸ್ಪತ್ರೆ ವೈದ್ಯ ಡಾ.ಅಶೋಕ್ ಕುಮಾರ್, ಕೆ.ಆರ್.ಆಸ್ಪತ್ರೆ ಸೀನಿಯರ್ ಸರ್ಜನ್ ಡಾ.ಬಿ.ಎಂ.ಶಶಿ, ವೈದ್ಯೆ ಡಾ.ಎಸ್.ಡಿ. ಮೀನಾಕುಮಾರಿ, ಇಎಸ್‍ಐ ಆಸ್ಪತ್ರೆ ಮುಖ್ಯ ಅಧೀಕ್ಷಕ ಡಾ.ವರದರಾಜು, ಸಂಘದ ಅಧ್ಯಕ್ಷ ಎಂ.ಬಿ.ಮಂಜೇಗೌಡ ಇನ್ನಿತರರಿದ್ದರು.

Translate »