ಕರ್ನಾಟಕ ಕೇಂದ್ರೀಯ ವಿವಿ ದಿ ಸೆಕೆಂಡ್ ಕೋರ್ಟ್‍ನ ಸದಸ್ಯರಾಗಿ ಪ್ರೊ. ಆರ್.ಇಂದಿರಾ ನಾಮನಿರ್ದೇಶನ
ಮೈಸೂರು

ಕರ್ನಾಟಕ ಕೇಂದ್ರೀಯ ವಿವಿ ದಿ ಸೆಕೆಂಡ್ ಕೋರ್ಟ್‍ನ ಸದಸ್ಯರಾಗಿ ಪ್ರೊ. ಆರ್.ಇಂದಿರಾ ನಾಮನಿರ್ದೇಶನ

June 19, 2018

ಮೈಸೂರು:  ಭಾರತೀಯ ಸಮಾಜಶಾಸ್ತ್ರ ಸಂಘದ ಅಧ್ಯ ಕ್ಷರೂ, ಮೈಸೂರು ವಿಶ್ವವಿದ್ಯಾನಿಲಯದ ಹಿಂದಿನ ಪ್ರಾಧ್ಯಾ ಪಕರು ಮತ್ತು ಅಧ್ಯ ಕ್ಷರು ಹಾಗೂ ವಿಶ್ವವಿದ್ಯಾನಿಲಯದ ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷರಾದ ಪ್ರೊ. ಆರ್. ಇಂದಿರಾ ಅವರನ್ನು ಮೂರು ವರ್ಷಗಳ ಅವಧಿಗೆ ಗುಲ್ಬರ್ಗಾದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ `ದಿ ಸೆಕೆಂಡ್ ಕೋರ್ಟ್’ನ ಸದಸ್ಯರಾಗಿ ನಾಮನಿರ್ದೇ ಶನ ಮಾಡಲಾಗಿದೆ. ಕೇಂದ್ರೀಯ ವಿವಿಧ ಮೂರು ಪ್ರಾಧಿಕಾರಗಳ ಲ್ಲೊಂದಾದ `ದಿ ಕೋರ್ಟ್’ನ ಕಾರ್ಯವ್ಯಾಪ್ತಿಯಲ್ಲಿ ವಿಶ್ವವಿದ್ಯಾಲಯದ ನೀತಿಗಳು ಹಾಗೂ ಕಾರ್ಯಕ್ರಮ ಗಳನ್ನು ಕಾಲದಿಂದ ಕಾಲಕ್ಕೆ ಪರಿ ಶೀಲನೆ ಮಾಡುವುದು, ವಿಶ್ವವಿದ್ಯಾನಿಲ ಯದ ಸಮಗ್ರ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡುವುದು ಮತ್ತು ವಿಶ್ವವಿದ್ಯಾನಿಲಯದ ಶೈಕ್ಷಣ ಕ ಮತ್ತು ಆರ್ಥಿಕ ವಿಚಾರಗಳಿಗೆ ಸಂಬಂಧಿಸಿ ದಂತೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ಸೇರಿದೆ ಎಂದು ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.

Translate »