ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಪ್ರತಿಭಟನೆ
ಚಾಮರಾಜನಗರ

ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಪ್ರತಿಭಟನೆ

June 19, 2018

ಚಾಮರಾಜನಗರ:  ರೈತರ ಎಲ್ಲ ರೀತಿಯ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಸೋಮವಾರ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ ನಡೆಯಿತು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಆರಂಭಿಸಿದ ಸಂಘದ ಕಾರ್ಯಕರ್ತರು ಹಾಗೂ ರೈತರು ಗುಂಡ್ಲುಪೇಟೆ ವೃತ್ತ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತದಿಂದ ಭುವನೇಶ್ವರಿ ವೃತ್ತಕ್ಕೆ ಬಂದು ಕೆಲ ಕಾಲ ರಸ್ತೆ ತಡೆ ನಡೆಸಿದರು. ಬಳಿಕ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತಲುಪಿ ಪ್ರತಿಭಟಿಸಿದರು.

ಈ ವೇಳೆ ‘ಸಾಲ ಮನ್ನಾ ಮಾಡಬೇಕು’. ‘ರೈತ ಸಾಲಗಾರನಲ್ಲ. ಸರ್ಕಾರವೇ ಬಾಕಿ ದಾರ’ ಎಂಬೆಲ್ಲ ನಾಮಫಲಕ ಪ್ರದರ್ಶಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರೈತರ ಹೆಸರು ಹೇಳಿ ಅಧಿಕಾರಕ್ಕೆ ಬರು ವವರು ಕೊನೆಗೆ ರೈತರನ್ನೇ ಮರೆಯುತ್ತಿ ರುವುದು ದುರಂತವಾಗಿದೆ. ಕೂಡಲೇ ಸರ್ಕಾರ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಪ್ರತಿ ಟನ್ ಕಬ್ಬಿಗೆ 5,000 ಬೆಲೆ ನಿಗದಿಪಡಿಸಬೇಕು. ರೈತರು ಮತ್ತು ಕೂಲಿ ಕಾರ್ಮಿಕರಿಗೆ ಮಾಸಿಕ ವೇತನ ನೀಡಲು ಕೃಷಿ ವೇತನ ಆಯೋಗ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಕಬಿನಿ 2ನೇ ಹಂತದ ನೀರಾವರಿ ಯೋಜನೆ ಜಾರಿಯಾದ ಬಳಿಕ, ಜಿಲ್ಲೆಗೆ ಹೆಚ್ಚುವರಿ ನೀರಾವರಿ ಒದಗಿಸಬೇಕು. ಭೂ ಅಭಿವೃದ್ಧಿ ಮತ್ತು ಕೃಷಿ ಅಭಿವೃದ್ಧಿ ಸಾಲ, ಆರ್‍ಟಿಸಿ ಮೇಲೆ ಚಿನ್ನಾಭರಣ ಅಡವಿಟ್ಟಿ ರುವ ಸಾಲ, ಕೃಷಿ ಉಪಕರಣ ಖರೀದಿ ಗಾಗಿ ಮಾಡಿದ ಸಾಲ ಸೇರಿದಂತೆ ಎಲ್ಲ ರೀತಿಯ ಸಾಲವನ್ನು ಮನ್ನಾ ಮಾಡಬೇಕು. ಸಾಲಮನ್ನಾ ವಿಚಾರದಲ್ಲಿ ದೊಡ್ಡ ರೈತ ಅಥವಾ ಸಣ್ಣ ರೈತ ಎಂಬ ತಾರತಮ್ಯ ಮಾಡಬಾರದು. 25 ಲಕ್ಷ ರೂ ಮಿತಿ ಗೊಳಿಸಿ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ನಡೆಯುತ್ತಿರುವ ವಿಚಾರ ತಿಳಿದು ಸಚಿವ ಸಿ.ಪುಟ್ಟರಂಗಶೆಟ್ಟಿ ಜಿಲ್ಲಾಡ ಳಿತ ಭವನಕ್ಕೆ ಭೇಟಿ ನೀಡಿ ರೈತರ ಅಹ ವಾಲು ಸ್ವೀಕರಿಸಿದರು. ರೈತರ ಸಮಸ್ಯೆ ಕುರಿತು ಸರ್ಕಾರದ ಗಮನಕ್ಕೆ ತರಲಾಗು ವುದು ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಎ.ಎಂ. ಮಹೇಶ್‍ಪ್ರಭು, ಜಿಲ್ಲಾ ಅಧ್ಯಕ್ಷ ಶಿವ ರಾಮ್, ಪ್ರಧಾನ ಕಾರ್ಯದರ್ಶಿ ಜ್ಯೋತಿ ಗೌಡನಪುರ ಸಿದ್ದರಾಜು, ಮುಖಂಡ ರಾದ ಹೆಗ್ಗವಾಡಿಪುರ ಮಹೇಶ್ ಕುಮಾರ್, ಹೆಬ್ಬಸೂರು ಬಸವಣ್ಣ, ಹೊನ್ನೇಗೌಡನಹುಂಡಿ ಸಿದ್ದರಾಜು, ಮೂಡ್ನಕೂಡು ಮಹೇಶ್, ಶಾಂತ ಮಲ್ಲಪ್ಪ, ಬಸವರಾಜು, ಶೈಲೇಂದ್ರ, ಸಂಪತ್, ಚಿನ್ನಸ್ವಾಮಿ, ರಾಮಸಮುದ್ರ ಬಸವರಾಜು, ಶಂಕರ್ ಹಾಜರಿದ್ದರು.

Translate »