ಮಾನವ ಸಾಗಾಣಿಕೆ ವಿರೋಧಿ ಕಾಯ್ದೆ ಜಾಗೃತಿ ಅಗತ್ಯ
ಚಾಮರಾಜನಗರ

ಮಾನವ ಸಾಗಾಣಿಕೆ ವಿರೋಧಿ ಕಾಯ್ದೆ ಜಾಗೃತಿ ಅಗತ್ಯ

June 19, 2018

ಚಾಮರಾಜನಗರ:  ಮಹಿಳೆಯರು, ಮಕ್ಕಳ ಶೋಷಣೆ ತಡೆಗಾಗಿ ರೂಪಿಸಲಾಗಿರುವ ಕಾಯ್ದೆಗಳ ಬಗ್ಗೆ ಜಾಗೃತ ರಾಗಿದ್ದರೆ ಎದುರಾಗುವ ತೊಂದರೆಗಳ ವಿರುದ್ಧ ಹೋರಾಡಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾ ಧೀಶ ಜಿ.ಬಸವರಾಜ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಕೆ.ಡಿ.ಪಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಒಡಿಪಿ ಹಾಗೂ ಸಾಧನಾ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನವ ಸಾಗಾಣಿಕೆ ತಡೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತ ನಾಡಿದರು.

ಮಹಿಳೆಯರು, ಮಕ್ಕಳ ಸಾಗಾಣಿಕೆ, ಜೀತ ಪದ್ಧತಿ ತಡೆಗಾಗಿ ಸಾಕಷ್ಟು ಕಾನೂನು ಜಾರಿಗೆ ತರಲಾಗಿದೆ. ಮಹಿಳೆಯರು, ಮಕ್ಕ ಳನ್ನು ಲೈಂಗಿಕ ಶೋಷಣೆಗೆ ಗುರಿ ಮಾಡ ದಿರಲು ಕಠಿಣ ಕಾಯ್ದೆಗಳು ಇದ್ದರೂ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಲೆ ಇದೆÉ. ಮಾನವ ಸಾಗಾಣಿಕೆ, ಶೋಷಣೆ ತಪ್ಪಿಸಲು ಇರುವ ಕಾನೂನುಗಳ ಬಗ್ಗೆ ಅರಿವು ಹೊಂದಬೇಕಾದ ಅಗತ್ಯ ಇದೆ ಎಂದು ತಿಳಿಸಿದರು.

18 ವರ್ಷ ಒಳಪಟ್ಟವರ ಮೇಲೆ ಬಲ ವಂತವಾಗಿ ಲೈಂಗಿಕ ಶೋಷಣೆ, ದೌರ್ಜನ್ಯ ಎಸಗುವವರ ವಿರುದ್ಧ ಕ್ರಮವಹಿಸಲು ಪೋಕ್ಸೋ ಕಾಯ್ದೆ ನೆರವಾಗಲಿದೆ. ಯಾವುದೇ ತೊಂದರೆಗೆ ಒಳಗಾದಾಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಥವಾ ವಕೀಲರು, ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಗಮನಕ್ಕೆ ತಂದರೆ ಕ್ರಮ ವಹಿಸಲು ಸಾಧ್ಯವಾಗುತ್ತದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಮೈಸೂರು ಒಡನಾಡಿ ಸೇವಾ ಸಂಸ್ಥೆಯ ಕೆ.ವಿ.ಸ್ಟ್ಯಾನ್ಲಿ ಅವರು, ಮಹಿಳೆಯರು, ಮಕ್ಕಳನ್ನು ಪದಾರ್ಥಗಳಂತೆ ಮಾರಾಟ ಮಾಡಿ ವಾಮ ಮಾರ್ಗದಿಂದ ಹಣ ಸಂಪಾದಿಸು ವವರು ಇದ್ದಾರೆ. ದುರ್ಲಾಭಕ್ಕಾಗಿ ಮಾನವ ಸಾಗಾಣಿಕೆಯಂತಹ ನೀಚ ಕಾಯಕಕ್ಕೆ ಇಳಿಯುವವರ ವಿರುದ್ಧ ಯಾವುದೇ ಅಂಜಿಕೆ ಇಲ್ಲದೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಮಾನವ ಸಾಗಾಣಿಕೆ ಅಸಮಾನತೆ ಸಮಾಜ, ಶೋಷಣೆಯ ಪ್ರತೀಕವಾಗಿದೆ. ಮಾನವ ಸಾಗಾಣಿಕೆ ತಡೆಯಲು ಪ್ರಬಲ ಇಚ್ಛಾಸಕ್ತಿಬೇಕು. ಮನುಷ್ಯನ ಘನತೆ, ಬದುಕು ಅರಿತು ಮನುಷ್ಯನನ್ನು ಮನುಷ್ಯ ನಾಗಿ ನೋಡುವ ಪ್ರವೃತ್ತಿ ಬೆಳೆಯಬೇಕು. ಶೋಷಣೆ ಪ್ರವೃತ್ತಿ ಹೋಗಬೇಕು. ಸಂಘಟನೆಗಳು, ಅಧಿಕಾರಿಗಳು ಸೇರಿ ಎಲ್ಲರು ಸಂಘಟಿತ ಪ್ರಯತ್ನ ಮಾಡಿದರೆ ಮಾನವ ಸಾಗಾಣಿಕೆಯಂತಹ ಪಿಡುಗು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಸಿ.ಜೆ.ವಿಶಾಲಾಕ್ಷಿ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣ ವಾಗಬೇಕಾದರೆ ಸಾಮಾಜಿಕ ಪಿಡುಗು ಗಳನ್ನು ತಡೆಯಬೇಕು. ಸ್ವಯಂ ಸೇವಾ ಸಂಸ್ಥೆಗಳು ದುಷ್ಟ ಪದ್ಧತಿ ದೂರ ಮಾಡಲು ಕೈಜೋಡಿಸಿರುವುದು ಹೆಮ್ಮೆಯ ವಿಷಯ ವಾಗಿದೆ ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತ ನಾಡಿ, ಮಾನವ ಸಾಗಾಣಿಕೆಯಲ್ಲಿ ದೇಶವು 3ನೇ ಸ್ಥಾನದಲ್ಲಿರುವುದು ದುರ ದೃಷ್ಟಕರ ಸಂಗತಿಯಾಗಿದೆ. ಅಂತರ ರಾಷ್ಟ್ರೀಯ ಪಿಡುಗಾಗಿರುವ ಮಾನವ ಸಾಗಾಣಿಕೆಯಂತಹ ಜಾಲವನ್ನು ಮೂಲೋ ತ್ಪಾಟನೆ ಮಾಡಲು ಎಲ್ಲರ ಪಾತ್ರವು ಸಹ ಪ್ರಮುಖವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಎಸ್.ವನಜಾಕ್ಷಿ, ವಕೀ ಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಅರುಣ್‍ಕುಮಾರ್, ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್, ಒಡಿಪಿ ಸಂಸ್ಥೆಯ ಜೇಸುದಾಸ್ ಉಪಸ್ಥಿತರಿದ್ದರು.

Translate »