ಪಿಯು ಕಾಲೇಜುಗಳ ವ್ಯವಹಾರ, ಅಧ್ಯಯನ,  ಲೆಕ್ಕಶಾಸ್ತ್ರ ಉಪನ್ಯಾಸಕರಿಗೆ ತರಬೇತಿ ಕಾರ್ಯಕ್ರಮ
ಮೈಸೂರು

ಪಿಯು ಕಾಲೇಜುಗಳ ವ್ಯವಹಾರ, ಅಧ್ಯಯನ,  ಲೆಕ್ಕಶಾಸ್ತ್ರ ಉಪನ್ಯಾಸಕರಿಗೆ ತರಬೇತಿ ಕಾರ್ಯಕ್ರಮ

June 19, 2018

ಮೈಸೂರು: ಪ್ರಸ್ತಕ ಸಾಲಿನ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯವಹಾರ ಅಧ್ಯಯನ/ಲೆಕ್ಕಶಾಸ್ತ್ರ ಬೋಧಿಸುವ ವಾಣಿಜ್ಯಶಾಸ್ತ್ರ ಉಪನ್ಯಾಸಕರಿಗೆ ವಿಭಾಗ ಮಟ್ಟದ ವಿಷಯಾಧಾರಿತ ತರಬೇತಿ ಕಾರ್ಯಕ್ರಮಗಳನ್ನು ಇಂದು ಆರಂಭಿಸಲಾಯಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ದಯಾನಂದ್ ವಹಿಸಿದ್ದರು. ನಂಜನಗೂಡಿನ ಜೆಎಸ್‍ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ನಾಗೇಂದ್ರ ಕುಮಾರ್, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಸುತ್ತೂರು ಜೆಎಸ್‍ಎಸ್ ಸಂಸ್ಥೆಗಳ ಹೆಚ್ಚುವರಿ ಸಂಯೋಜನಾಧಿಕಾರಿ ಸಂಪತ್‍ವರು, ಕಾರ್ಯಾಗಾರದ ಮುಖ್ಯ ಆಯೋಜಕ ಶ್ರೀ ಜಯದೇವರಾಜ್ ಅರಸ್ ರಾಜ್ಯ ಸಹ ಆಯೋಜಕ ಬಾಲರಾಜು ಉಪಸ್ಥಿತರಿದ್ದರು.

ಪ್ರೊ. ನಾಗೇಂದ್ರಕುಮಾರ್ ಹಾಗೂ ಉಪನಿರ್ದೇಶಕ ಡಾ.ದಯಾನಂದ್, ಎನ್.ಸಿ.ಇ.ಆರ್.ಟಿ ಪಠ್ಯ ಅಳವಡಿಕೆ ಮತ್ತು ಕಾರ್ಯಾಗಾರದ ಅಗತ್ಯತೆಯ ಬಗ್ಗೆ ವಿವರಿಸಿದರು.

ಆನಂತರ ನಡೆದ ಎರಡು ಮತ್ತು ಮೂರು ಅಧಿವೇಶನಗಳಲ್ಲಿ ಡಾ.ಎನ್.ಕೆ.ವಿಜಯಲಕ್ಷ್ಮಿ ಸಂಪನ್ಮೂಲ ವ್ಯಕ್ತಿಯಾಗಿ “ವ್ಯವಹಾರ ಅಧ್ಯಯನ ಪಠ್ಯ ಪುಸ್ತಕದ ಬಗ್ಗೆ ವಿವರಣೆ” ಹಾಗೂ “ಪ್ರಶ್ನೆ ಪತ್ರಿಕೆಯ ತಯಾರಿಕೆಯ ಬಗ್ಗೆ ಉಪನ್ಯಾಸ ನೀಡಿದರು ನಾಲ್ಕನೆಯ ಅಧಿವೇಶನದಲ್ಲಿ ಶ್ರೀಮತಿ ಧನಲಕ್ಷ್ಮಿ ಹೆಚ್.ಎಸ್. ಸಂಪನ್ಮೂಲ ವ್ಯಕ್ತಿಗಳಾಗಿ Accounting for Share capital” ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಸಹಸಂಯೋಜಕ ಶ್ರೀ ಕೆ.ಜಿ. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಐದು ಜಿಲ್ಲೆಗಳಾದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗಿನ ಸರ್ಕಾರಿ/ಅನುದಾನಿತ ವಾಣಿಜ್ಯಶಾಸ್ತ್ರ ಉಪನ್ಯಾಸಕರು ಹಾಜರಿದ್ದರು.

Translate »