ಅನುಮತಿ ಇಲ್ಲದಿದ್ದರೂ ಕೆಲ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ
ಮೈಸೂರು

ಅನುಮತಿ ಇಲ್ಲದಿದ್ದರೂ ಕೆಲ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ

June 25, 2019

ಮೈಸೂರು: ಸರ್ಕಾರ ಅನುಮತಿ ನೀಡದಿದ್ದರೂ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಥಮ ಪಿಯುಸಿಗೆ ವಿದ್ಯಾರ್ಥಿಗಳನ್ನು ದಾಖಲಿಸಿ ಕೊಂಡಿದ್ದು, ಈಗ ಆತಂಕಕ್ಕೆ ಕಾರಣವಾಗಿದೆ.

ಆಯಾ ಶೈಕ್ಷಣಿಕ ಸಾಲಿನಲ್ಲಿ ಶಾಲಾ-ಕಾಲೇಜು ಆರಂಭಿಸಲಿಚ್ಛಿಸುವ ನೋಂದಾಯಿತ ಶಿಕ್ಷಣ ಸಂಸ್ಥೆ ಗಳು ಅವಧಿಗೂ ಮುಂಚೆಯೇ ನಿಗದಿತ ನಮೂನೆ ಭರ್ತಿ ಮಾಡಿ ನಿಯಮಾನುಸಾರ ದಾಖಲಾತಿಗಳು ಹಾಗೂ ಅಗತ್ಯ ಮೂಲ ಸೌಕರ್ಯಗಳ ಪುರಾವೆ ಗಳೊಂದಿಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಸರ್ಕಾರ ದಿಂದ ಅನುಮೋದನೆ (ಖeಛಿogಟಿiಣioಟಿ) ಪಡೆಯಬೇಕು.

ಹೀಗೆ ಅನುಮೋದನೆ ಪಡೆದ ನಂತರವಷ್ಟೇ ಶಾಲಾ-ಕಾಲೇಜುಗಳನ್ನು ಆರಂಭಿಸಿ, ಅರ್ಜಿ ಆಹ್ವಾನಿಸಿ ವಿವಿಧ ಕೋರ್ಸುಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು, ಆ ಬಗ್ಗೆ ಸ್ಥಳೀಯ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇ ಕೆಂಬುದು ನಿಯಮ. ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ 2019-20ನೇ ಸಾಲಿನಲ್ಲಿ ಪ್ರಥಮ ಪಿಯುಸಿಯ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾ ಗದ ವಿಷಯದಲ್ಲಿ ಕೋರ್ಸ್ ಆರಂಭಿಸಲು ಕೋರಿ 28 ಶಿಕ್ಷಣ ಸಂಸ್ಥೆಗಳು ಜಿಲ್ಲೆಯ ಪಿಯು ಉಪ ನಿರ್ದೇಶಕರ ಮೂಲಕ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದ್ದವು. ಪ್ರಸ್ತಾವನೆಗಳನ್ನು ಪರಿಶೀಲಿಸಿದ ಸರ್ಕಾರ ಎಲ್ಲಾ 28 ಅರ್ಜಿಗಳನ್ನೂ ನಿಯಮಾನುಸಾರ ಮೂಲ ಸೌಲಭ್ಯ ಒದಗಿಸಿಲ್ಲ ಎಂಬ ಪ್ರಮುಖ ಅಂಶವನ್ನು ಪರಿಗಣಿಸಿ ಅನುಮತಿ ತಿರಸ್ಕ ರಿಸಿದೆ ಎಂದು ಇಲಾಖೆ ನಿರ್ದೇಶಕ ಸಿ.ಕೆ.ಜಾಫರ್ ಇತ್ತೀಚೆಗೆ ಬೆಂಗಳೂರಲ್ಲಿ ತಿಳಿಸಿದ್ದಾರೆ. ಪ್ರಮಾದ ವೆಂದರೆ ತಾವು ಸಲ್ಲಿಸಿದ ಅರ್ಜಿಯನ್ನೇ ಅನುಮತಿ ಎಂದು ಗ್ರಹಿಸಿ ಅಥವಾ ಸರ್ಕಾರ ಹೇಗೂ ಅನುಮೋದನೆ ನೀಡಲಿದೆ ಎಂಬ ವಿಶ್ವಾಸ ಹಾಗೂ ರಾಜಕೀಯ ಪ್ರಭಾವ ಬಳಸಿ ಅನುಮತಿ ತಂದೇ ತರುತ್ತೇವೆಂಬ ಧೈರ್ಯದಿಂದ ಮೈಸೂರು ನಗರ ಮತ್ತು ಜಿಲ್ಲೆಯ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಕೆಲವು ಕಾಲೇಜುಗಳಲ್ಲಿ 30 ರಿಂದ 40 ಮತ್ತು ಕೆಲವು ಸಂಸ್ಥೆಗಳಲ್ಲಿ 50 ರಿಂದ 60 ವಿದ್ಯಾರ್ಥಿಗಳಿಗೆ ಇಂತಿಷ್ಟು ಶುಲ್ಕ ಪಾವತಿಸಿಕೊಂಡು ಪ್ರವೇಶ ನೀಡಿ, ತರಗತಿಗಳನ್ನು ಆರಂಭಿಸಲಾಗಿದೆ. ಜೂನ್ 23 ರಂದು `ಮೈಸೂರು ಮಿತ್ರ’ `ಮೈಸೂರು ಜಿಲ್ಲೆಯಲ್ಲಿ 28 ಹೊಸ ಪಿಯು ಕಾಲೇಜು ಆರಂಭಿಸುವ ಪ್ರಸ್ತಾಪ ತಿರಸ್ಕøತ’ ತಲೆಬರಹದಡಿ ವರದಿ ಪ್ರಕಟಿಸುತ್ತಿದ್ದಂತೆಯೇ ವಿವಿಧ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಹಾಗೂ ಪೋಷ ಕರು ಆತಂಕಕ್ಕೊಳಗಾಗಿದ್ದಾರೆ.

ಶಿಕ್ಷಣ ಸಂಸ್ಥೆ ಮುಖ್ಯಸ್ಥರು ಸರ್ಕಾರದ ಮಟ್ಟದಲ್ಲಿ ಶಿಕ್ಷಣ ಸಚಿವ ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪ್ರಭಾವ ಬಳಸಿ ಅನುಮತಿಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನದಲ್ಲಿದ್ದರೆ, ವಿದ್ಯಾರ್ಥಿಗಳ ಪೋಷ ಕರು ಬೇರೆ ಯಾವುದಾದರೂ ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಪ್ರಯತ್ನಿಸುತ್ತಿದ್ದಾರೆ.

ಈ ನಡುವೆ ಅನುಮತಿ ಬರುವ ಮೊದಲೇ ವಿದ್ಯಾರ್ಥಿ ಗಳನ್ನು ಸೇರಿಸಿಕೊಂಡಿರುವ ವಿಷಯ ತಿಳಿದ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಮೈಸೂರು ಜಿಲ್ಲಾ ಉಪನಿರ್ದೇಶಕಿ ರತ್ನ ಅವರು, ನಿಯಮ ಬಾಹಿರವಾಗಿ ತರಗತಿ ಆರಂಭಿಸಿರುವ ಪಿಯು ಕಾಲೇಜು ಪ್ರಾಂಶುಪಾಲರಿಗೆ ನೋಟಿಸ್ ಜಾರಿ ಮಾಡಲು ಮುಂದಾ ಗಿದ್ದರು. ಅಷ್ಟರಲ್ಲಿ ಪ್ರಭಾವಿ ವಿಧಾನ ಪರಿಷತ್ ಸದಸ್ಯ ರೊಬ್ಬರು, ಫೋನ್ ಮಾಡಿ `ಅನುಮತಿ ಕೊಡುವ ಪ್ರಕ್ರಿಯೆ ಮುಗಿದಿಲ್ಲ.

ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಅಲ್ಲಿಯವರೆಗೆ ನೋಟಿಸ್ ನೀಡಬೇಡಿ’ ಎಂದು ಹೇಳಿದ್ದಾರೆನ್ನಲಾಗಿದೆ. ಆದರೂ ಅನುಮತಿ ಸಿಗುವ ಮುನ್ನವೇ ವಿದ್ಯಾರ್ಥಿ ಗಳನ್ನು ದಾಖಲಿಸಿಕೊಂಡು ಶುಲ್ಕ ವಸೂಲಿ ಮಾಡಿರುವುದು ಕಾನೂನು ಬಾಹಿರವಾಗಿ ರುವುದರಿಂದ ಅನು ಮತಿ ಸಿಗದಿದ್ದರೆ, ಪ್ರವೇಶಾತಿ ರದ್ದು ಮಾಡುತ್ತೇವೆ ಎಂದು ಶಿಕ್ಷಣ ಸಂಸ್ಥೆ ಮುಖ್ಯಸ್ಥರಿಂದ ಮುಚ್ಚಳಿಕೆಯನ್ನು ಉಪನಿರ್ದೇಶಕರು ಬರೆಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು-ಶಿಕ್ಷಣ ಸಂಸ್ಥೆಗಳ ಭವಿಷ್ಯವೀಗ ಸರ್ಕಾರದ ಅಂಗಳದಲ್ಲಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅನುಕಂಪದಿಂದ ಅನುಮತಿ ಸಿಗಬಹು ದೆಂಬುದು ಶಿಕ್ಷಣ ಸಂಸ್ಥೆಗಳ ನಿಲುವಾಗಿದೆ.

Translate »