`ಅಮೃತ್ ಯೋಜನೆ’ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ
ಹಾಸನ

`ಅಮೃತ್ ಯೋಜನೆ’ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ

June 16, 2019

ಹಾಸನ: ನಗರಕ್ಕೆ ಕುಡಿ ಯುವ ನೀರು ಪೂರೈಸುವ `ಅಮೃತ್ ಯೋಜನೆ’ ಅನುಷ್ಠಾನವನ್ನು ಕಾಲಮಿತಿ ಯಲ್ಲಿ ಪೂರ್ಣಗೊಳಿಸಿ ಎಂದು ಜಿಲ್ಲಾ ಧಿಕಾರಿ ಅಕ್ರಂ ಪಾಷ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಡಿಸಿ ಕಚೇರಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳ ಬೇಕಿರುವ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಅವರು ಕುಡಿಯುವ ನೀರಿನ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಿ ಕೆಲಸ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೈಪ್‍ಲೈನ್ ಆಳವಡಿಕೆಗೆ ಅರಣ್ಯ ಇಲಾಖೆಯಿಂದ ಇದ್ದ ಅಡ್ಡಿ ನಿವಾರಿಸಲು ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಾ ಗಿದೆ. ಇನ್ನು ಮುಂದಾದರೂ ಕಾಮಗಾರಿ ಚುರುಕುಗೊಳಿಸಿ. ಪ್ರತಿವಾರವೂ ಕಾಮ ಗಾರಿಯ ಪ್ರಗತಿ ವರದಿಯನ್ನು ಕಡ್ಡಾಯ ವಾಗಿ ಸಲ್ಲಿಸಿ ಎಂದು ಆದೇಶಿಸಿದರು.

ಸಾಲಗಾಮೆ, ಹೊಸಲೈನ್ ರಸ್ತೆಗಳು ನಗರದ ಪ್ರಮುಖ ಭಾಗ. ಈ ರಸ್ತೆಗಳ ಅಭಿವೃದ್ಧಿ ಅಮೃತ ಯೋಜನೆಯಿಂದಾಗಿ ಸ್ಥಗಿತಗೊಂಡಿವೆ. ಹಾಗಾಗಿ ಮುಂದಿನ ವಾರ ನಗರವ್ಯಾಪ್ತಿಯಲ್ಲಿ ಪೈಪ್‍ಲೈನ್ ಅಳವಡಿಕೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು. ಬಿಎಂ ರಸ್ತೆ ಸೇರಿ ದಂತೆ ಪ್ರಮುಖ ಭಾಗಗಳ ಸೌಂದರ್ಯಾ ಭಿವೃದ್ಧಿ ರಸ್ತೆ ಸುರಕ್ಷತಾ ಕ್ರಮಗಳ ಅನುಷ್ಠಾನ ವನ್ನು ಮುಕ್ತಾಯಗೊಳಿಸಬೇಕು. ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇದು ಜಾರಿ ಯಾಗಬೇಕು ಎಂದು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಪರಿಣಾಮಕಾರಿಯಾಗಿ ರಲಿ. ಘನತ್ಯಾಜ್ಯ ವಿಲೇವಾರಿಯಲ್ಲಿ ವೈಜ್ಞಾ ನಿಕ ಪದ್ಧತಿ ಅಳವಡಿಸಿಕೊಳ್ಳಿ, ಮನೆಗ ಳಿಂದ ಕಸ ಸಂಗ್ರಹಿಸಿ ವಿಂಗಡಿಸಬೇಕು. ತ್ಯಾಜ್ಯ ವಿಲೇವಾರಿಯಲ್ಲಿ ಇನ್ನಷ್ಟು ಸುಧಾ ರಣೆ ಮಾಡಿಕೊಳ್ಳಬೇಕು ಎಂದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ಸಂಗ್ರಹ ತೃಪ್ತಿಕರವಾಗಿಲ್ಲ. ತಿಂಗಳೊಳಗೆ ಸಮಾಧಾನಕರ ಸಾಧನೆ ಮಾಡಬೇಕು. ನಗರಸಭೆ ಆಯುಕ್ತರು, ಮುಖ್ಯಾಧಿಕಾರಿ ಗಳೇ ಹೊಣೆ ಹೊರಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳೂ ಉದ್ಯಮ ಪರವಾ ನಗಿ ಪಡೆಯದವರಿಗೆ, ನವೀಕರಿಸದವರಿಗೆ ನೋಟೀಸ್ ನೀಡಿರಿ ಎಂದು ನಿರ್ದೇಶನ ನೀಡಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರಮೋದ್, ನಗರಸಭೆ ಆಯುಕ್ತ ಪರಮೇಶ್, ವಿವಿಧ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು ಸಭೆಯಲ್ಲಿದ್ದರು.

Translate »