ಮೈಸೂರಲ್ಲಿ ಈಗ `ಗುಂಬಜ್’ ತಂಗುದಾಣದ್ದೇ ಸದ್ದು!
ಮೈಸೂರು

ಮೈಸೂರಲ್ಲಿ ಈಗ `ಗುಂಬಜ್’ ತಂಗುದಾಣದ್ದೇ ಸದ್ದು!

November 18, 2022

ಮೈಸೂರು, ನ.17(ಆರ್‍ಕೆ)-ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ತಂಗುದಾಣ ನಿರ್ಮಿಸುವಾಗ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಓಊಂI)ದ ನಿರಾಕ್ಷೇಪಣಾ ಪತ್ರ (ಓಔಅ)ಪಡೆದು ನಕ್ಷೆಗೆ ಅನುಮೋದನೆ ಪಡೆಯಬೇಕೆಂಬುದು ನನ್ನ ವಾದವೇ ಹೊರತು, ಯಾರಿಗೋ ಕಿರುಕುಳ ನೀಡಬೇಕೆಂಬುದಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಬಸ್ ಶೆಲ್ಟರ್ ನಿರ್ಮಾಣ ವಿವಾದ ಸಂಬಂಧ ಕಿರುಕುಳ ನೀಡಲಾಗುತ್ತಿದೆ ಎಂಬ ಶಾಸಕ ಎಸ್.ಎ.ರಾಮದಾಸ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, 29 ವರ್ಷಗಳ ಹಿಂದೆಯೇ ಶಾಸಕರಾಗಿದ್ದ ರಾಮದಾಸ್ ಅವರು, ತಾವು ಮಾಡಿದ ಸಾಧನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಬೆನ್ನಿಗೆ ಗುದ್ದಿಸಿಕೊಂಡು ಮೆಚ್ಚುಗೆ ಪಡೆದುಕೊಂಡ ವರು. ಅವರಿಗೆ ಕಿರುಕುಳ ಕೊಡುವಷ್ಟು ನಾನು ದೊಡ್ಡವನಲ್ಲ ಎಂದು ಮಾರ್ಮಿಕವಾಗಿ ನುಡಿದರು. ಟಿಪ್ಪು ಅನುಯಾಯಿಗಳಿಗೆ ಕಿರುಕುಳ ನೀಡಬೇಕೇ ಹೊರತು, ಶಿವಾಜಿ ಮಹಾರಾಜರ ಅನುಯಾಯಿಗಳಿಗಲ್ಲ. ರಾಮದಾಸ್ ಅವರು ಯಾವ ಕಾರಣಕ್ಕಾಗಿ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅವರು ಇನ್ನೂ 10-15 ಬಸ್ ಶೆಲ್ಟರ್ ಕಟ್ಟಲಿ. ಆದರೆ ಮೂಲ ವಿನ್ಯಾಸಕ್ಕನುಗುಣವಾಗಿ ನಿರ್ಮಿಸಲಿ. ನನ್ನದೇನೂ
ತಕರಾರಿಲ್ಲ. ಅವು ಮಹಾರಾಜರ ಪರಂಪರೆಗೆ ಪೂರಕವಾಗಿರಬೇಕು. ಗುಂಬಜ್‍ಗೂ ಇಂಡೋ ಸಾರ್ಸನಿಕ್ ಕಲೆಗೂ ತುಂಬಾ ವ್ಯತ್ಯಾಸವಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಯಾರು ಏನೇ ಹೇಳಿದರೂ ಹಿಂದೆ ಸರಿಯುವ ಮಾತೇ ಇಲ್ಲ. ನಾಲ್ಕು ವರ್ಷಗಳ ಸತತ ಪ್ರಯತ್ನದಿಂದ ಟಿಪ್ಪು ಎಕ್ಸ್‍ಪ್ರೆಸ್ ರೈಲಿನ ಹೆಸರು ಬದಲಿಸಿದ್ದೇನೆ. ಮಹಿಷಾ ದಸರಾ ಮಟ್ಟ ಹಾಕಿದ್ದೇನೆ. ಬಸ್ ಶೆಲ್ಟರ್ ವಿಚಾರದಲ್ಲೂ ನನ್ನ ನಿಲುವು ಬದಲಾಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೆ.ಅರ್.ಐ.ಡಿ.ಎಲ್. ನಿರ್ಣಯಕ್ಕೆ ಬದ್ಧನಾಗಿದ್ದೇನೆ. ಅವರು ಕೊಟ್ಟ ಮಾದರಿಯಂತೆ ಬಸ್ ತಂಗುದಾಣ ನಿರ್ಮಿಸಲು ನನ್ನ ಅಭ್ಯಂತರವಿಲ್ಲ ಎಂದ ಪ್ರತಾಪ್ ಸಿಂಹ, ಹೆದ್ದಾರಿಯಲ್ಲಿ ಯಾವುದೇ ನಿರ್ಮಾಣ ವಾಗಬೇಕಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಪಡೆಯಬೇಕು ಎಂದರು. ನಾನು ರಿಯಲ್ ಎಸ್ಟೇಟ್ ಮಾಡಿ ಹಣ ಗಳಿಸಲು ಸಂಸದನಾಗಿರುವ ರಾಜಕಾರಣಿಯಲ್ಲ. ಅಭಿವೃದ್ಧಿ ಕೆಲಸ ಮಾಡಲೆಂದು ಸಂಸದನಾದವನು. ಇದು ಸಾರ್ವಜನಿಕರ ತೆರಿಗೆ ಹಣದಿಂದ ಮಾಡಿರುವ ನಿರ್ಮಾಣ. ಯಾವ ಜನಪ್ರತಿನಿಧಿಯೂ ಒಂದು ರೂಪಾಯಿ ಖರ್ಚು ಮಾಡಿಲ್ಲ. ಅನಧಿಕೃತವಾಗಿ ಯಾವ ನಿರ್ಮಾಣವೂ ಆಗಬಾರದು. ಈ ವಿಷಯದಲ್ಲಿ ಯಾರು ಏನೇ ಹೇಳಲಿ, ಹೋರಾಟದಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ಪ್ರತಾಪ್ ಸಿಂಹ ತಿಳಿಸಿದರು.

Translate »