ಜ್ಞಾನ, ಅನುಭವ ವಿಸ್ತಾರಕ್ಕೆ ಎನ್‍ಎಸ್‍ಎಸ್ ಉತ್ತಮ ವೇದಿಕೆ
ಮೈಸೂರು

ಜ್ಞಾನ, ಅನುಭವ ವಿಸ್ತಾರಕ್ಕೆ ಎನ್‍ಎಸ್‍ಎಸ್ ಉತ್ತಮ ವೇದಿಕೆ

November 21, 2021

ಮೈಸೂರು, ನ.20(ಎಸ್‍ಪಿಎನ್)- ಜ್ಞಾನ ಮತ್ತು ಅನುಭವಗಳ ವಿಸ್ತಾರಕ್ಕೆ ಎನ್‍ಎಸ್‍ಎಸ್ ಉತ್ತಮ ವೇದಿಕೆ. ಯುವ ಸಮುದಾಯ ಸೇವಾ ಮನೋಭಾವ ಮೈಗೂಡಿಸಿಕೊಂಡರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ಎನ್‍ಎಸ್‍ಎಸ್ ನಿವೃತ್ತ ಸಂಯೋಜನಾಧಿಕಾರಿ ಡಾ.ಬಿ.ಕೆ.ಶಿವಣ್ಣ ಅಭಿಪ್ರಾಯಪಟ್ಟರು.

ಸರಸ್ವತಿಪುರಂನಲ್ಲಿರುವ ಮೈಸೂರು ವಿವಿ ಎನ್‍ಎಸ್‍ಎಸ್ ಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನ.14 ರಿಂದ 20ರವರೆಗೆ ಆಯೋಜಿಸಲಾಗಿದ್ದ `ರಾಷ್ಟ್ರೀಯ ಭಾವೈಕ್ಯತಾ ಶಿಬಿರ’ದ ಮುಕ್ತಾಯ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದರು.

ವಿವಿಧ ಜಾತಿ, ಮತ ಮತ್ತು ಧರ್ಮಗಳ ನಡು ವಿನ ಸಾಮರಸ್ಯವೇ ಭಾವೈಕ್ಯತೆ. ಬೇರೆ ಬೇರೆ ರಾಜ್ಯದ ಪ್ರಾದೇಶಿಕ ಭಾಷೆ, ಸಂಸ್ಕøತಿ ಮತ್ತು ಆಚಾರ-ವಿಚಾರಗಳುಳ್ಳ ಕಾಲೇಜು ವಿದ್ಯಾರ್ಥಿ ಗಳು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿ ಕೊಂಡಿದ್ದೀರಿ. ಹೀಗೆ ಯುವ ಸಮುದಾಯ ಪರಸ್ಪರ ಬೆಸೆದು, ಹೊಸ ಚೈತನ್ಯ ತುಂಬುವುದೇ ಎನ್‍ಎಸ್‍ಎಸ್ ಶಿಬಿರದ ಆಶಯವಾಗಿದೆ ಎಂದರು.

ಶ್ರಮದಾನದ ಮೂಲಕ ಯುವ ಸಮುದಾಯ ವನ್ನು ಕಾಯಕದಲ್ಲಿ ತೊಡಗಿಸಲು ಎನ್‍ಎಸ್‍ಎಸ್ ಉತ್ತಮ ವೇದಿಕೆ. ಉತ್ತಮ ಪರಿಸರ, ಸಹಬಾಳ್ವೆ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಶ್ರಮದಾನದ ಪಾತ್ರ ಮಹತ್ವದ್ದು ಎಂದರು.

ಹಿರಿಯ ಎನ್‍ಎನ್‍ಎಸ್ ಅಧಿಕಾರಿ ಪ್ರೊ.ಕೆ.ಎಂ. ವೀರಯ್ಯ, ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋ ಜನಾಧಿಕಾರಿ ಡಾ.ಎಂ.ಬಿ.ಸುರೇಶ್, ನಿವೃತ್ತ ಎನ್‍ಎಸ್‍ಎಸ್ ಸಂಯೋಜನಾಧಿಕಾರಿಗಳಾದ ಡಾ.ಕಾಳಚನ್ನೇಗೌಡ, ಡಾ.ಎಂ.ರುದ್ರಯ್ಯ, ಚಿಕ್ಕಕೆಂಪೇಗೌಡ, ಪ್ರಸಾರಾಂಗದ ನಿವೃತ್ತ ನಿರ್ದೇ ಶಕ ಕೆ.ಟಿ.ವೀರಪ್ಪ ಹಾಜರಿದ್ದರು. ಶಿಬಿರದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂ ಗಾಣ, ಆಂಧ್ರಪ್ರದೇಶ, ಪಾಂಡಿಚೇರಿ ರಾಜ್ಯಗಳ ಬೇರೆಬೇರೆ ವಿವಿಗಳ 150 ಶಿಬಿರಾರ್ಥಿಗಳು, 20 ಮಂದಿ ಸ್ವಯಂ ಸೇವಕರು, ವಿವಿಧ ಕಾರ್ಯಕ್ರಮಾಧಿಕಾರಿಗಳು ಭಾಗವಹಿಸಿದ್ದರು.

Translate »