ಮೈಸೂರು ವಿವಿಗೆ NTRF ಪ್ರಶಸ್ತಿ
ಮೈಸೂರು

ಮೈಸೂರು ವಿವಿಗೆ NTRF ಪ್ರಶಸ್ತಿ

June 12, 2020

ಮೈಸೂರು,ಜೂ.11(ಆರ್‍ಕೆ)-ಕೇಂದ್ರದ ಮಾನವ ಸಂಪ ನ್ಮೂಲ ಅಭಿವೃದ್ಧಿ ಸಚಿವಾಲಯ(MHRD)ಕೊಡ ಮಾಡುವ ನ್ಯಾಷನಲ್ ಇನ್‍ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಂ(NTRF ) ಪ್ರಶಸ್ತಿಗೆ ಮೈಸೂರು ವಿಶ್ವವಿದ್ಯಾನಿಲಯವು ಭಾಜನವಾಗಿದೆ.

ದೇಶಾದ್ಯಂತ ಎಲ್ಲಾ ವಿಶ್ವವಿದ್ಯಾನಿಲಯಗಳ ಬೋಧನೆ, ಸಂಶೋಧನೆ, ಕಲಿಕಾ ಪದ್ಧತಿ, ಗ್ರಾಜುಯೇಷನ್ ಲೆವೆಲ್, ಪರ್ಫೆಕ್ಷನ್ ಸೇರಿದಂತೆ ಹಲವು ಮಾನದಂಡಗಳನ್ನು ಪರಿಗಣಿಸಿ ನೀಡುವ ಪ್ರಶಸ್ತಿಯಲ್ಲಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾ ನಿಲಯವು 27ನೇ ಸ್ಥಾನ ಗಳಿಸಿದೆ.

ರಾಜ್ಯದಲ್ಲಿ ರ್ಯಾಂಕಿಂಗ್ ಪ್ರಶಸ್ತಿ ಗಳಿಸಿರುವ ಮೈಸೂರು ವಿಶ್ವ ವಿದ್ಯಾನಿಲಯವು ಕಳೆದ ವರ್ಷ ದೇಶದ ಯೂನಿವರ್ಸಿಟಿಗಳ ಪೈಕಿ 54ನೇ ರ್ಯಾಂಕಿಂಗ್‍ನಲ್ಲಿತ್ತು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ದೇಶಾದ್ಯಂತ ಎಲ್ಲಾ ವಿಶ್ವವಿದ್ಯಾನಿಲಯ ಗಳಿಂದ ಬೋಧನೆ, ಲರ್ನಿಂಗ್, ರೀಸರ್ಚ್ ಸಂಬಂಧ ಮಾಹಿತಿಗಳನ್ನು ಕಲೆ ಹಾಕಿ ನ್ಯಾಷನಲ್ ಇನ್‍ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ ಪ್ರಶಸ್ತಿಯನ್ನು ಪ್ರತೀ ವರ್ಷ ನೀಡುತ್ತಿದೆ.

ಈ ಸಂಬಂಧ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅವರು, ಎಂಹೆಚ್‍ಆರ್‍ಡಿಯಿಂದ ನೀಡುತ್ತಿರುವ ಎನ್‍ಐಆರ್‍ಎಫ್ ಪ್ರಶಸ್ತಿಗೆ ನಮ್ಮ ಯೂನಿವರ್ಸಿಟಿ ಆಯ್ಕೆ ಯಾಗಿರುವುದು ಸಂತಸ ತಂದಿದೆ ಎಂದರು.

ಕಳೆದ ಬಾರೀ 54ನೇ ಸ್ಥಾನದಲ್ಲಿದ್ಧ ಮೈಸೂರು ವಿಶ್ವವಿದ್ಯಾ ನಿಲಯವು ಈಗ 27ನೇ ರ್ಯಾಂಕಿಂಗ್‍ನಲ್ಲಿದೆ. ಮುಂದೆ ಇನ್ನೂ ಹೆಚ್ಚಿನ ರ್ಯಾಂಕಿಂಗ್ ಪಡೆಯಲು ಶ್ರಮಿಸುತ್ತೇವೆ. ಇನ್ನೂ ಪರ್ಫಾ ರ್ಮನ್ಸ್ ಹೆಚ್ಚಿಸಿಕೊಳ್ಳುವ ಸಲುವಾಗಿ ಬರುವ ಮಂಗಳವಾರ ಮಧ್ಯಾಹ್ನ ಪ್ರಾಧ್ಯಾಪಕರು, ಅಧಿಕಾರಿಗಳ ಸಭೆ ಕರೆದಿದ್ದೇನೆ. ಶಿಕ್ಷಣ, ಸಂಶೋಧನೆ ಗುಣಮಟ್ಟ ಹೆಚ್ಚಿಸುವ ಸಂಬಂಧ ಅವ ಲೋಕನ ಮಾಡಲಾಗುವುದು. ಇದೇ ವರ್ಷ ನಾವು ನ್ಯಾಕ್‍ಗೂ ಸ್ಪರ್ಧಿಸುತ್ತಿರುವುದರಿಂದ ಎನ್‍ಐಆರ್‍ಎಫ್ ರ್ಯಾಂಕಿಂಗ್ ಪ್ರಶ ಸ್ತಿಯೂ ನ್ಯಾಕ್‍ನಲ್ಲಿ ಹೆಚ್ಚಿನ ಅಂಕಗಳಿಸಲು ಸಹಕಾರಿಯಾಗ ಲಿದೆ ಎಂದು ಪ್ರೊ. ಹೇಮಂತ್‍ಕುಮಾರ್ ತಿಳಿಸಿದ್ದಾರೆ.

Translate »