ದೇಶದಲ್ಲಿ ಕೌಶಲ್ಯ ಪಡೆದವರ ಸಂಖ್ಯೆ  ಶೇ.5: ಸಚಿವ ಅಶ್ವಥ್‍ನಾರಾಯಣ
ಮೈಸೂರು

ದೇಶದಲ್ಲಿ ಕೌಶಲ್ಯ ಪಡೆದವರ ಸಂಖ್ಯೆ ಶೇ.5: ಸಚಿವ ಅಶ್ವಥ್‍ನಾರಾಯಣ

October 5, 2021

ಮೈಸೂರು, ಅ.4(ಆರ್‍ಕೆಬಿ)- ದೇಶದಲ್ಲಿ ಶಿಕ್ಷಣದ ಮೂಲಕ ಕೌಶಲ್ಯ ಪಡೆದವರ ಸಂಖ್ಯೆ ಶೇ.5 ಮಾತ್ರ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಇಂದಿಲ್ಲಿ ವಿಷಾದ ವ್ಯಕ್ತಪಡಿಸಿದರು.

ಮೈಸೂರಿನ ವಿದ್ಯಾರಣ್ಯಪುರಂ ಶ್ರೀ ರಾಮಲಿಂಗೇ ಶ್ವರ ದೇವಸ್ಥಾನದ ಬಳಿಯ ಉದ್ಯಾನವನದಲ್ಲಿ ಕೃಷ್ಣ ರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ನೇತೃತ್ವ ದಲ್ಲಿ ಆಯೋಜಿಸಿದ್ದ `ಮೋದಿ ಯುಗ್ ಉತ್ಸವ’ದಲ್ಲಿ ಉದ್ಯೋಗ ಮೇಳ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಅನುಷ್ಟಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಣದ ಮೂಲಕ ಕೌಶಲ್ಯ ಪಡೆದವರ ಪ್ರಮಾಣ ದಕ್ಷಿಣ ಕೊರಿಯಾದಲ್ಲಿ ಶೇ.96ರಷ್ಟಿದೆ. ಜರ್ಮನಿ ಮತ್ತು ಜಪಾನ್‍ನಲ್ಲಿ ಶೇ.80, ಅಮೆರಿಕಾದಲ್ಲಿ ಶೇ.56ರಷ್ಟಿದೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಶೇ.5ರಷ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರ ಕೌಶ ಲ್ಯಾಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದರು.

ಕೌಶಲ್ಯವಿದ್ದರೆ ಮಾತ್ರ ಕೆಲಸ. ಈ ಬಗ್ಗೆ ಯುವಕ ರಲ್ಲಿ ಅರಿವಿರಬೇಕು. ಇದಕ್ಕಾಗಿ ಕೇಂದ್ರ ಸರ್ಕಾರ ರೂಪಿ ಸಿರುವ ಯೋಜನೆಗಳನ್ನು ರಾಜ್ಯ ಸರ್ಕಾರ ಅಚ್ಚುಕಟ್ಟಾಗಿ ಅನುಷ್ಠಾನಕ್ಕೆ ತರುತ್ತಿದೆ. ಕೌಶಲ್ಯ ಸಂಪರ್ಕದ ಮೂಲಕ ಉದ್ಯೋಗಾವಕಾಶಕ್ಕೆ ಅನುಗುಣಮವಾಗಿ ಕೌಶಲ ತರಬೇತಿ ಪಡೆಯುವಂತೆ ವ್ಯವಸ್ಥೆ ಮಾಡಿದ್ದೇವೆ ಎಂದರು.

ನಮ್ಮಲ್ಲಿರುವ ಐಟಿಐ ಸಂಸ್ಥೆಗಳ ಪೈಕಿ 270 ಸರ್ಕಾರಿ ಹಾಗೂ 170 ಖಾಸಗಿ ಸಂಸ್ಥೆಗಳನ್ನು ವಿಶ್ವದರ್ಜೆಗೆ ಏರಿಸ ಲಾಗುತ್ತಿದೆ. ಜೊತೆಗೆ ಆರ್ಟಿಫಿಸಿಯಲ್ ಇಂಟಲಿಜೆನ್ಸ್ ಕೋರ್ಸ್‍ಗಳನ್ನು ಪ್ರಾರಂಭಿಸಲಾಗುತ್ತಿದೆ. ವಿದೇಶ ಗಳಲ್ಲಿರುವ ರೀತಿಯಲ್ಲಿ 5ನೇ ತರಗತಿಯಿಂದಲೇ ಉದ್ಯೋಗ ಅವಕಾಶ ಪರಿಚಯಿಸುವ ಕೆಲಸವನ್ನು ಶಾಸಕ ರಾಮದಾಸ್ ಮಾಡುತ್ತಿದ್ದಾರೆ. ಇಂತಹ ಅರಿವು ಕಾರ್ಯಕ್ರಮ ಎಲ್ಲಾ ಶಾಲೆಗಳಲ್ಲೂ ನಡೆಯು ವಂತಾಗಬೇಕು ಎಂದು ಆಶಿಸಿದರು.

ಪಾಲಿಟೆಕ್ನಿಕ್ ತರಬೇತಿಗೆ ಪ್ರತೀ ವರ್ಷ 70,000 ಮಂದಿ ದಾಖಲಾಗಲು ಅವಕಾಶವಿದ್ದರೂ ಕೇವಲ 30,000 ಮಂದಿ ಮಾತ್ರ ದಾಖಲಾಗುತ್ತಿದ್ದಾರೆ. ಎನ್‍ಎಸ್‍ಕ್ಯೂ ಜೊತೆಗೆ ಸೇರಿ ವಿಶ್ವದರ್ಜೆಯ ತರ ಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಪಿಯುಸಿ ಮಾಡಿ ಇಂಜಿನಿಯರಿಂಗ್ ಮಾಡುವುದ ಕ್ಕಿಂತ ಪಾಲಿಟೆಕ್ನಿಕ್ ಮಾಡಿ ಇಂಜಿನಿಯರಿಂಗ್ ಸೇರು ವುದು ಉತ್ತಮ. ಇಂಥವರಿಗೆ ಹೆಚ್ಚಿನ ಉದ್ಯೋಗ ಅವ ಕಾಶಗಳಿರುತ್ತವೆ ಎಂದ ಅವರು, ಶೇ.100ರಷ್ಟು ಉದ್ಯೋ ಗಾವಕಾಶವಿರುವ ಐಟಿಐ ಪಾಲಿಟೆಕ್ನಿಕ್‍ನ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ತಿಳಿಸಿದರು.

ಶಾಸಕ ರಾಮದಾಸ್ ಅವರ ಜನಪರ ಕಾರ್ಯವನ್ನು ಹಾಡಿ ಹೊಗಳಿದ ಸಚಿವರು, ಸಮಾಜಕ್ಕೆ ಏನೇನು ಬೇಕೆಂ ಬುದನ್ನು ಅರ್ಥಮಾಡಿಕೊಂಡು ಅವರಿಗೆ ಕಾರ್ಯ ಕ್ರಮಗಳನ್ನು ತಲುಪಿಸುವ ಕಾರ್ಯ ನಡೆಸಿದ್ದಾರೆ. ಇಂತಹ ಕಾರ್ಯಕ್ರಮಗಳು ರಾಜ್ಯದೆಲ್ಲೆಡೆ ನಡೆಯುವಂತಾಗ ಬೇಕು ಎಂದರು. ಉದ್ಯೋಗ ಮೇಳದಲ್ಲಿ ಆಯ್ಕೆಯಾದ 8 ಮಂದಿಗೆ ಸಚಿವ ಅಶ್ವತ್ಥನಾರಾಯಣ್ ಉದ್ಯೋಗ ನೇಮಕಾತಿ ಪತ್ರ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತಕುಮಾರ್‍ಗೌಡ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ, ಕೆ.ಆರ್.ಕ್ಷೇತ್ರ ಅಧ್ಯಕ್ಷ ವಡಿ ವೇಲು, ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕಿ ಎಂ.ಡಿ.ರಾಣಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಗನ್ನಾಥ್ ಇನ್ನಿತರರು ಉಪಸ್ಥಿತರಿದ್ದರು.

Translate »